ಪಿಎಂಶ್ರೀ ಯೋಜನೆಯಿಂದ ಮಕ್ಕಳಿಗೆ ಅನುಕೂಲ

| Published : Jun 02 2024, 01:46 AM IST

ಸಾರಾಂಶ

ತಾಲೂಕಿನ ತೋವಿನಕೆರೆಯ ಉನ್ನತೀಕರಿಸಿದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2024- 25ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ ಮತ್ತು ದಾಖಲಾತಿ ಆಂದೋಲಕ್ಕೆ ಕ್ಷೇತ್ರಾಧಿಕಾರಿ ಸಿ ವಿ ನಟರಾಜು ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಕೊರಟಗೆರೆ

ತಾಲೂಕಿನ ತೋವಿನಕೆರೆಯ ಉನ್ನತೀಕರಿಸಿದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2024- 25ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ ಮತ್ತು ದಾಖಲಾತಿ ಆಂದೋಲಕ್ಕೆ ಕ್ಷೇತ್ರಾಧಿಕಾರಿ ಸಿ ವಿ ನಟರಾಜು ಚಾಲನೆ ನೀಡಿದರು.

ಮಕ್ಕಳಿಗೆ ಸಮವಸ್ತ್ರ ಮತ್ತು ಪಠ್ಯಪುಸ್ತಕವನ್ನು ವಿತರಿಸಲಾಯಿತು. ಸರ್ಕಾರಿ ಶಾಲೆಗಳ ಬಲವರ್ಧನೆಗಾಗಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು. ಶಿಕ್ಷಣ ಇಲಾಖೆಯ ಹಲವಾರು ಕಾರ್ಯಕ್ರಮಗಳ ಮಾಹಿತಿಯನ್ನು ಒಳಗೊಂಡ ಆಟೋ ತೋವಿನಕೆರೆ ಹಾಗೂ ಅಕ್ಕಪಕ್ಕದ ಗ್ರಾಮಗಳಲ್ಲಿ ಸಂಚರಿಸಿತು. ಗುಲಾಬಿ ಹೂವು ನೀಡಿ ಒಂದನೇ ತರಗತಿ ಮಕ್ಕಳನ್ನ ದಾಖಲಾತಿ ಮಾಡಿಕೊಳ್ಳಲಾಯಿತು.

ಸದರಿ ಶಾಲೆಯು ಪಿಎಂಶ್ರೀ ಯೋಜನೆ ಒಳಪಟ್ಟಿದ್ದು, ಇದರ ವಿಶೇಷತೆಗಳನ್ನು ಒಳಗೊಂಡಂತೆ ಹಾಗೂ ಮಕ್ಕಳ ಮಾನಸಿಕ ಹಾಗೂ ದೈಹಿಕ ಬಲವರ್ಧನೆಗೆ ಕಲಿಕಾ ಬಲವರ್ಧನೆಗೆ ಇರುವ ಅವಕಾಶಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು. ಕ್ಷೇತ್ರಾಧಿಕಾರಿ ಸಿ ವಿ ನಟರಾಜು, ಪಿಡಿಒ ಲಕ್ಷ್ಮೀನಾರಾಯಣ್ , ಗ್ರಾಮ ಪಂಚಾಯತಿ ಅಧ್ಯಕ್ಷ ಗಿರಿಜಮ್ಮಬೀದಿಪದಿಯ ವ್ಯಾಪಾರಿಗಳಿಗೆ ಹಾಗೂ ಸಾರ್ವಜನಿಕರಿಗೆ ಮನೆಗಳಿಗೆ ಶಾಲಾ ವಿಶೇಷತೆಯ ಕರಪತ್ರಗಳನ್ನು ಹಂಚಿದರು.