ಸಾರಾಂಶ
ಹೊನ್ನಾವರ: ಪಟ್ಟಣದ ಪ್ರಭಾತನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೊನ್ನಾವರ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮ ನಡೆಯಿತು. ಕಲಿಕಾ ಹಬ್ಬದ ವಿವಿಧ ಸ್ಫರ್ಧೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಸಂಭ್ರಮಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಡಯಟ್ ಪ್ರಾಚಾರ್ಯ ಎಂ.ಆರ್. ಶಿವರಾಮು ಮಾತನಾಡಿ, ಕಲಿಕಾ ಹಬ್ಬ ಮಕ್ಕಳಲ್ಲಿ ಹೊಸ ಉತ್ಸಾಹವನ್ನು ಮೂಡಿಸುತ್ತದೆ. ಮಕ್ಕಳು ಮತ್ತು ಶಿಕ್ಷಕರು ಕಲಿಕಾ ಹಬ್ಬದಲ್ಲಿ ಶ್ರದ್ಧೆಯಿಂದ ಭಾಗವಹಿಸಬೇಕು. ನಾವು ಏನನ್ನು ತಲುಪಿಸಬೇಕೋ ಅದನ್ನು ಮಕ್ಕಳಿಗೆ ಶ್ರದ್ಧೆಯಿಂದ ತಲುಪಿಸಬೇಕು. ಮಕ್ಕಳು ಖುಷಿಯಿಂದ ಭಾಗವಹಿಸಿ ಕಲಿಕಾ ಹಬ್ಬವನ್ನು ಚೆನ್ನಾಗಿ ಆಚರಿಸಿ ಎಂದರು.ಡಯಟ್ ಉಪಪ್ರಾಂಶುಪಾಲ ಜಿ.ಎಸ್. ಭಟ್ ಮಾತನಾಡಿ, ಮೂಲ ಸಾಕ್ಷರತೆ ಮತ್ತು ಅಕ್ಷರ ಜ್ಞಾನ ನಮ್ಮೆಲ್ಲರ ಆದ್ಯತೆಯಾಗಿದೆ. ಇಲಾಖೆಯು ಕಲಿಕಾ ಹಬ್ಬ ಕಾರ್ಯಕ್ರಮಕ್ಕೆ ಮಹತ್ವ ನೀಡಿದೆ. ಜಿಲ್ಲೆಯ ಮೊದಲ ಕಾರ್ಯಕ್ರಮ ಉದ್ಘಾಟನೆಗೊಂಡಿದೆ. ಕಲಿಕಾ ಹಬ್ಬದ ೭ ಹಂತದ ಸ್ಫರ್ಧೆಗಳಲ್ಲಿ ಮಕ್ಕಳು ಭಾಗವಹಿಸುತ್ತಾರೆ. ಭಾಗವಹಿಸಿದ ವಿದ್ಯಾರ್ಥಿಗಳಿಗೆ ಗೌರವಗಳು ಸಿಗುತ್ತದೆ ಎಂದರು.
ಡಯಟ್ ಹಿರಿಯ ಉಪನ್ಯಾಸಕರಾದ ತ್ರಿವೇಣಿ ನಾಯಕ, ವೀನಾ ನಾಯಕ, ಬಿಆರ್‌ಸಿ ಸಮನ್ವಯಾಧಿಕಾರಿ ವಿನಾಯಕ ಅವಧಾನಿ, ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಎಂ.ಜಿ. ನಾಯ್ಕ, ಜಿಲ್ಲಾ ಗೌರವಾಧ್ಯಕ್ಷ ಸುಧೀಶ್ ನಾಯ್ಕ, ಸದಸ್ಯೆ ಲಕ್ಷ್ಮೀ , ಎಸ್‌ಡಿಎಂಸಿ ಅಧ್ಯಕ್ಷ ಮಂಜುನಾಥ ಮೇಸ್ತ, ನಿಕಟಪೂರ್ವ ಅಧ್ಯಕ್ಷ ಮಾರುತಿ ನಾಯ್ಕ, ಸಿಆರ್‌ಪಿ ಪ್ರಕಾಶ್ ಶೇಟ್ ಉಪಸ್ಥಿತರಿದ್ದರು.ಶಾಲಾ ಮುಖ್ಯಶಿಕ್ಷಕಿ ವಿಜಯಾ ಶೆಟ್, ಪಿ.ಆರ್. ನಾಯ್ಕ, ಉಷಾ ನಾಯ್ಕ, ಮಮತಾ ಪಟಗಾರ, ಕಲಾ ಜಿ.ಎಸ್., ಗಿರಿಜಾ ಗೌಡ, ವಿವಿಧ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.ಪರಿಸರಕ್ಕೆ ಪೂರಕ ಜೀವನಶೈಲಿ ಮುಖ್ಯ
ಅಂಕೋಲಾ: ಗ್ರಾಮ ಪರಿಸರದ ಜನರು ಅದರಲ್ಲೂ ಮಹಿಳೆಯರು ತಮ್ಮ ಪರಿಸರದ ರಕ್ಷಣೆಯ ಬಗ್ಗೆ ಚಿಂತನೆ ನಡೆಸಬೇಕು. ಪ್ಲಾಸ್ಟಿಕ್ ಬಳಕೆಯನ್ನು ತ್ಯಜಿಸಬೇಕು. ಸೌರಶಕ್ತಿ ಬಳಕೆ ಮಳೆ ನೀರು ಸಂರಕ್ಷಣೆ ಇತ್ಯಾದಿ ಪರಿಸರಕ್ಕೆ ಪೂರಕವಾದ ಜೀವನಶೈಲಿ ಅಳವಡಿಸಿಕೊಂಡು ಪ್ರಗತಿಶೀಲರಾಗಿ ಎಂದು ಅಚವೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಲಚಂದ್ರ ಶೆಟ್ಟಿ ತಿಳಿಸಿದರು.ಅಚವೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ ಬೆಂಗಳೂರು ಮತ್ತು ಭಾರತೀಯ ವಿಕಾಸ ಟ್ರಸ್ಟ್, ಮಣಿಪಾಲ, ಸಂಗಮ ಸೇವಾ ಸಂಸ್ಥೆ, ಅಂಕೋಲಾ ಮತ್ತು ಗ್ರಾಪಂ ಅಚವೆ ಇವರ ಸಹಯೋಗದಲ್ಲಿ ಮಳೆನೀರು ಕೊಯ್ಲು, ಘನತ್ಯಾಜ್ಯ ನಿರ್ವಹಣೆ ಸೌರಶಕ್ತಿ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಗ್ರಾಪಂ ಉಪಾಧ್ಯಕ್ಷೆ ಶ್ರೀದೇವಿ ಪಟಗಾರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಚವೆ ಸರ್ಕಾರಿ ಪೌಢಶಾಲೆಯ ಮುಖ್ಯಾಧ್ಯಾಪಕ ಮಮತಾ ನಾಯಕ್, ಸಿಆರ್‌ಪಿ ಸಾತು ಗೌಡ, ಗ್ರಾಪಂ ಸದಸ್ಯರು ಉಪಸ್ಥಿತರಿದ್ದರು.ಪಿಡಿಒ ವಿಠ್ಠಲ್ ಬಾಂಧಿ ಸ್ವಾಗತಿಸಿದರು. ಸಂಗಮ ಸೇವಾ ಸಂಸ್ಥೆಯ ಅಧ್ಯಕ್ಷ ರವೀಂದ್ರ ಶೆಟ್ಟಿ ವಂದಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ಬಾಲಚಂದ್ರ ಪಿ. ಶೆಟ್ಟಿ, ಅರುಣ್ ಪಟವರ್ಧನ್, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲದ ರಾಘವೇಂದ್ರ ಆಚಾರ್ಯ ವಿವಿಧ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.ವಿ. ಶಿವಾನಿ ಸಂಗಡಿಗರು ಪ್ರಾರ್ಥಿಸಿದರು. ಕೆಎಲ್ಇ ಸಂಸ್ಥೆಯ ಸಲಹೆಗಾರರು ತಿಮ್ಮಣ್ಣ ಭಟ್ ನಿರೂಪಿಸಿದರು. ಗ್ರಾಮ ಪಂಚಾಯಿತಿಯ ನಾಗರಾಜ ನಾಯಕ ಉಪಸ್ಥಿತರಿದ್ದರು. ಒಟ್ಟು 87 ಜನ ಸದಸ್ಯರು ತರಬೇತಿಯ ಪ್ರಯೋಜನ ಪಡೆದರು.