ಸಾರಾಂಶ
ದೇಶದ ಮೊದಲ ಪ್ರಧಾನಿಯಾಗಿ ನವ ಭಾರತದ ನಿರ್ಮಾಣಕ್ಕೆ ಅಡಿಪಾಯ ಹಾಕಿದವರು ಪಂಡಿತ ಜವಾಹರಲಾಲ್ ನೆಹರು. ಅವರ ಆದರ್ಶಗಳು ಸದಾ ಪ್ರೇರಣೆಯಾಗಿದ್ದು, ಮಕ್ಕಳನ್ನು ಅಪಾರವಾಗಿ ಪ್ರೀತಿಸುತ್ತಿದ್ದ ಅವರು ತಮ್ಮ ಜನ್ಮ ದಿನವನ್ನು ದೇಶದ ಮಕ್ಕಳಿಗಾಗಿ ಸಮರ್ಪಿಸಿದರು.
ಧಾರವಾಡ:
ದೇಶದ ಮೊದಲ ಪ್ರಧಾನಿಯಾಗಿ ನವ ಭಾರತದ ನಿರ್ಮಾಣಕ್ಕೆ ಅಡಿಪಾಯ ಹಾಕಿದವರು ಪಂಡಿತ ಜವಾಹರಲಾಲ್ ನೆಹರು. ಅವರ ಆದರ್ಶಗಳು ಸದಾ ಪ್ರೇರಣೆಯಾಗಿದ್ದು, ಮಕ್ಕಳನ್ನು ಅಪಾರವಾಗಿ ಪ್ರೀತಿಸುತ್ತಿದ್ದ ಅವರು ತಮ್ಮ ಜನ್ಮ ದಿನವನ್ನು ದೇಶದ ಮಕ್ಕಳಿಗಾಗಿ ಸಮರ್ಪಿಸಿದರು ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.ಕರ್ನಾಟಕ ಬಾಲವಿಕಾಸ ಅಕಾಡೆಮಿ ಕೇಂದ್ರ ಕಚೇರಿಯಲ್ಲಿ ನಾಡಿನ ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿದ್ದ ಮಕ್ಕಳ ಸಮ್ಮುಖದಲ್ಲಿ ಮಕ್ಕಳ ದಿನಾಚರಣೆಗೆ ಶುಕ್ರವಾರ ಚಾಲನೆ ನೀಡಿದ ಮಾತನಾಡಿದ ಅವರು, ಮಕ್ಕಳೇ ನಾಡಿನ ನಾಳಿನ ಆಶಾಕಿರಣಗಳಾಗಿದ್ದು, ಅವರ ಶ್ರೇಯೋಭಿವೃದ್ಧಿಗಾಗಿ ಅಕಾಡೆಮಿ ಬದ್ಧವಾಗಿದೆ ಎಂದರು.
ಮಕ್ಕಳ ದಿನಾಚರಣೆ ನಿಮಿತ್ತ ಬೆಳಗ್ಗೆ 10ರಿಂದ ಸಂಜೆ ವರೆಗೆ ಮಕ್ಕಳ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಇಡೀ ಆವರಣ ವಿವಿಧ ವೇಷ ಭೂಷಣಗಳಿಂದ ವಿಶೇಷ ಉಡುಪು ಧರಿಸಿ ಆಗಮಿಸಿದ್ದ ಮುದ್ದು ಮಕ್ಕಳು ಎಲ್ಲರ ಗಮನ ಸೆಳೆದರು. ಭಾಗವಹಿಸಿದ ಎಲ್ಲ ಮಕ್ಕಳಿಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.ಮಕ್ಕಳಿಗಾಗಿ ಬೆಳಗ್ಗೆ ಧಾರವಾಡದ ಪಾರಂಪರಿಕ ನಡಿಗೆ ಆಯೋಜಿಸಲಾಗಿತ್ತು. ನಾಡಿಗೆ ಕೊಡುಗೆ ನೀಡಿದ ವಿದ್ವಾಂಸರು, ಜನ್ಮ ತಾಳಿದ ನಿವಾಸಗಳಿಗೆ ಭೇಟಿ ಕೊಟ್ಟು ಸಂಭ್ರಮಿಸಿದರು. ಪರಿಸರವಾದಿ ಪಿ.ವಿ. ಹಿರೇಮಠ, ಅಕಾಡೆಮಿ ಸದಸ್ಯ ಗಜಾನನ ಮನ್ನೀಕೇರಿ, ಶ್ರೀನಿವಾಸ ಸೊರಟೂರ, ಖ್ಯಾತ ರಂಗಕರ್ಮಿ ಡಾ. ಶಶಿಧರ ನರೇಂದ್ರ, ಫಕ್ಕಿರೇಶ ಮುಡಿಯಣ್ಣವರ, ಕೃಷಿ ಸಮಾಜದ ಜಿಲ್ಲಾಧ್ಯಕ್ಷ ಮಲ್ಲನಗೌಡ ಪಾಟೀಲ, ಬಸವರಾಜ ಮರಿತಮ್ಮನವರ, ಅನ್ನಪೂರ್ಣ ಸಂಗಳದ, ಮೀನಾಕ್ಷಿ ಮೆಡ್ಲೇರಿ, ಪುಷ್ಪಾ ಹಂಜಗಿ, ಸುಭಾಸ ಚಂದ್ರಗಿರಿ, ಪದ್ಮಶ್ರೀ ಮೇಟಿ, ಸುವರ್ಣಲತಾ ಮಠದ ಇದ್ದರು.
;Resize=(128,128))
;Resize=(128,128))
;Resize=(128,128))