ಶಿಗ್ಗಾಂವಿ: ನಮ್ಮ ಮಕ್ಕಳಿಗೆ ಸಂಸ್ಕಾರದ ಮುಖ್ಯ. ಅದನ್ನು ಪ್ರತಿಯೊಬ್ಬ ತಾಯಂದಿರು, ಪಾಲಕರು ನೀಡಿದಾಗ ಮುಂದಿನ ದಿನದಲ್ಲಿ ಉತ್ತಮವಾದ ಮನುಷ್ಯನಾಗುತ್ತಾನೆ. ಅವನೇ ತಂದೆ ತಾಯಿಯನ್ನು ವಿಧೇಯಕನಾಗಿ ನಡೆದುಕೊಳ್ಳುವ ಸನ್ಮಾರ್ಗದತ್ತ ಹೋಗುವನು ಎಂದು ಬಂಕಾಪುರ ಅರಳೆ ಹಿರೇಮಠದ ರೇವಣಶಿದ್ದೇಶ್ವರ ಶಿವಾಚಾರ್ಯರು ಹೇಳಿದರು.ತಾಲೂಕಿನ ಅಡವಿಸೋಮಾಪುರದಲ್ಲಿ ಕಲಬುರ್ಗಿ ಶರಣ ಬಸವೇಶ್ವರರ ೩೭ನೇ ವರ್ಷದ ಪುರಾಣ ಮಹಾಮಂಗಲೋತ್ಸವ ಧರ್ಮ ಸಭೆಯಲ್ಲಿ ನೇತೃತ್ವವನ್ನು ವಹಿಸಿ ಮಾತನಾಡಿದರು. ಪ್ರತಿಯೊಬ್ಬರು ಮಕ್ಕಳಿಗೆ ಹೆಚ್ಚಿನ ಶಿಕ್ಷಣವನ್ನು ನೀಡುವುದರ ಮೂಲಕ ಸಂಸ್ಕಾರವನ್ನು ಉಣಬಡಿಸುವದು ಮುಖ್ಯವಾಗಿದ್ದು, ಶಿಕ್ಷಣ ಎಷ್ಟು ಮುಖ್ಯವೋ ಅಷ್ಟೇ ಸಂಸ್ಕಾರವೂ ಅಗತ್ಯವಾಗಿದೆ ಎಂದರು. ಕಾರ್ಯಕ್ರಮದ ಸಾನಿಧ್ಯವನ್ನು ಗಂಜೀಗಟ್ಟಿ ಚರಮೂರೇಶ್ವರ ಮಠದ ಡಾ. ಶಿವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿ ಮಾತನಾಡಿದರು.ಹಿಂದಿನ ದಿನದಂದು ರಥೋತ್ಸವವು ಬಂಕಾಪುರ ಅರಳೇಲೆ ಹಿರೇಮಠದ ರೇವಣಶಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ನೆರವೇರಿಸಿದರು.ಈ ಸಂದರ್ಭದಲ್ಲಿ ವಿವಿಧ ವಾದ್ಯಗಳಿಂದ ಕೂಡಿದ ಜಾತ್ರಾ ಮಹೋತ್ಸವವು ಯುವಕರ ದಂಡು ರಥೋತ್ಸವವಕ್ಕೆ ಹುರುಪಿನಿಂದ ನೂತನ ರಥೋತ್ಸವವನ್ನು ನೆರವೇರಿಸಿದರು.

ಗ್ರಾಮದ ಮುಖಂಡರುಗಳಾದ ಶಿದ್ದನಗೌಡ್ರ ಪಾಟೀಲ, ಎಂ.ಎಚ್.ದುಂಡಪ್ಪನವರ, ಪಿ.ಎಫ್. ಪಾಟೀಲ, ಸುರೇಶ ಬೆಂಡಿಗೇರಿ, ಕೃಷಿ ಪಂಡಿತ ಪುರಸ್ಕೃತ ಜಯದೇವ ಅಗಡಿ, ಬಿ.ಎಸ್. ಹಿರೇಮಠ, ಮಹಾದೇವಪ್ಪ ಹುಲಸೊಗ್ಗಿ, ಮಲ್ಲೇಶಪ್ಪ ಜಾಧವ, ಗ್ರಾಮದ ಯುವಕರ ತಂಡ ಹಾಗೂ ವಿವಿಧ ಸಮಾಜದ ಮುಖಂಡರುಗಳು ಪಾಲ್ಗೊಂಡಿದ್ದರು.