ಮಕ್ಕಳೇ ಈ ದೇಶದ ಅಮೂಲ್ಯ ಸಂಪತ್ತು

| Published : Nov 15 2024, 12:38 AM IST

ಸಾರಾಂಶ

ಮಕ್ಕಳೇ ಈ ದೇಶದ ಅಮೂಲ್ಯ ಸಂಪತ್ತು ಎಂದು ಚೇತನಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ರಾಜಶ್ರೀ ಜುಗತಿ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಮಕ್ಕಳೇ ಈ ದೇಶದ ಅಮೂಲ್ಯ ಸಂಪತ್ತು ಎಂದು ಚೇತನಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ರಾಜಶ್ರೀ ಜುಗತಿ ಹೇಳಿದರು.

ಚೇತನಾ ಆಂಗ್ಲ ಮಾಧ್ಯಮ ಪ್ರೌಢಶಾಲೆ ವತಿಯಿಂದ ನಗರದ ಶಿವಶರಣ ಹರಳಯ್ಯ ಅಂಧ ಮಕ್ಕಳ ಶಾಲೆಯಲ್ಲಿ ಹಮ್ಮಿಕೊಂಡ ಮಕ್ಕಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳ ಮನಸ್ಸು ಪರಿಮಳ ಪಸರಿಸುವ ಕುಸುಮ, ಮಗುವೆಂಬ ಸಸಿಗೆ ಶಿಕ್ಷಕರು ಹಾಗೂ ತಂದೆ-ತಾಯಿ ಸೇರಿ ಒಳ್ಳೆಯ ಸಂಸ್ಕಾರದ ನೀರನ್ನು ಎರಿಯಬೇಕು ಎಂದು ತಿಳಿಸಿದರು.ಮುಖ್ಯೋಪಾಧ್ಯಾಯ ಎ.ಎಚ್.ಕೊಳಮಲಿ ಮಾತನಾಡಿ, ಮಕ್ಕಳು ಒಳ್ಳೆಯ ಜ್ಞಾನವನ್ನು ಪಡೆದುಕೊಂಡು ಜಗತ್ತಿಗೆ ಜ್ಯೋತಿಯಾಗಬೇಕು. ಸದೃಢವಾದ ರಾಷ್ಟ್ರವನ್ನು ನಿರ್ಮಿಸುವುದರಲ್ಲಿ ಮಕ್ಕಳ ಪಾತ್ರ ಬಹಳ ಮುಖ್ಯವಾಗಿದೆ ಎಂದರು. ಇಂದಿನ ಮಕ್ಕಳೇ ನಾಳಿನ ರಾಷ್ಟ್ರ ನಿರ್ಮಾಪಕರು ಎಂದರು.

ಸ್ನೇಹಾ ಜುಗತಿ ಮಾತನಾಡಿ, ಮಕ್ಕಳಲ್ಲಿ ವಿಶಿಷ್ಟವಾದ ಸೃಜನಶೀಲತೆ ಇರುತ್ತದೆ. ಆ ಸೃಜನಶೀಲತೆಯನ್ನು ಸರಿಯಾಗಿ ಉಪಯೋಗಿಸಿಕೊಂಡು ಸಾಧನೆಯ ಪರ್ವತವನ್ನೇರಬೇಕು ಎಂದರು.ಶಿವಶರಣ ಹರಳಯ್ಯ ಅಂದ ಮಕ್ಕಳ ಶಾಲೆಯ ಮುಖ್ಯೋಪಾಧ್ಯಯ ಶಿವು ಹರಣಶಿಕಾರಿ, ಚೇತನಾ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ರೋಹಿತ್ ಜುಗತಿ, ಸಹಾಯಕ ಆಡಳಿತ ಅಧಿಕಾರಿ ಪ್ರಮೋದ ಕುಲಕರ್ಣಿ, ನಿರ್ದೇಶಕ ನಾಗರಾಜ ಹೇರಲಗಿ, ಸಿ.ಎಸ್.ವಾಲಿ, ಸಾಗರ ಕುಲಕರ್ಣಿ ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.