ಮೈಸೂರು ನಗರಕ್ಕೆ ನಾಲ್ವಡಿ ಕೃಷ್ಣ ಆಜ ಒಡೆಯರ್ ಅವರ ಸಾಧನೆಗಳು ಕೊಡುಗೆಗಳನ್ನು ತಿಳಿಸುವ ಜೊತೆಗೆ ಮೈಸೂರು ಮಲ್ಲಿಗೆ, ಮೈಸೂರು ರೇಷ್ಮೆ, ದಸರಾ ಉತ್ಸವ ನೆನಪಾಗುತ್ತದೆ.
ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಸುಪ್ರಿಮ್ ಪಬ್ಲಿಕ್ ಶಾಲೆಯು ಮಕ್ಕಳ ಪ್ರತಿಭೆಯ ಅನಾವರಣಕ್ಕೆ ವೇದಿಕೆಯಾಗಿ ಸುಪ್ರೀಮ್ ಸಂಭ್ರಮೋತ್ಸವ ಆಯೋಜಿಸಿತ್ತು.ಕಾರ್ಯಕ್ರಮವನ್ನು ವಿಧಾನ ಪರಿಷತ್ ಮಾಜಿ ಸದಸ್ಯ ಡಿ. ಮಾದೇಗೌಡ ಉದ್ಘಾಟಿಸಿದರು. ಎಡಿಸಿ ಡಾ.ಪಿ. ಶಿವರಾಜು ಅವರು ಮುಖ್ಯ ಅತಿಥಿಯಾಗಿ ಮಾತನಾಡಿ, ಮಕ್ಕಳಿಗೆ ಪುಸ್ತಕ ಓದುವ ಪ್ರವೃತ್ತಿನ್ನು ಬೆಳೆಸಬೇಕು. ಪುಸ್ತಕ ಓದುವುದರಿಂದ ಮಕ್ಕಳ ಂಸಸ್ಕಾರ ಹೆಚ್ಚಾಗುತ್ತದೆ. ನಮ್ಮ ಸಂಸ್ಕೃತಿಯ ಅರಿವಾಗುತ್ತದೆ. ಹಾಗಾಗಿ ಮಕ್ಕಳನ್ನು ಪುಸ್ತಕ ಓದುವಂತೆ ಪ್ರೇರೇಪಿಸಬೇಕು ಎಂದು ಕಿವಿಮಾತು ಹೇಳಿದರು.
ಚಲನಚಿತ್ರ ಕಲಾವಿದ ಶ್ರೀರಾಮಕಾಂತ್ ಮಾತನಾಡಿ, ಮೈಸೂರು ನಗರಕ್ಕೆ ನಾಲ್ವಡಿ ಕೃಷ್ಣ ಆಜ ಒಡೆಯರ್ ಅವರ ಸಾಧನೆಗಳು ಕೊಡುಗೆಗಳನ್ನು ತಿಳಿಸುವ ಜೊತೆಗೆ ಮೈಸೂರು ಮಲ್ಲಿಗೆ, ಮೈಸೂರು ರೇಷ್ಮೆ, ದಸರಾ ಉತ್ಸವ ನೆನಪಾಗುತ್ತದೆ ಎಂದರು.ಶಾಲೆಯ ಅಧ್ಯಕ್ಷ ಡಾ. ರವಿ ದೊಡ್ಮನೆ ಅತಿಥಿಗಳನ್ನು ಪರಿಚಯಿಸಿ, ಅವರ ಸಾಧನೆಗಳನ್ನು ಹೇಳಿ ಹುರಿದುಂಬಿಸಿದರು.
ಪ್ರಾಂಶುಪಾಲರು, ಶಿಕ್ಷಣ ಸಂಯೋಜಕರು, ಶಿಕ್ಷಕರು ಮಕ್ಕಳು ಮತ್ತು ಪೋಷಕರು ಪಾಲ್ಗೊಂಡಿದ್ದರು. ನಂತರ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.