ಮಕ್ಕಳು ಅಧ್ಯಯನ, ತರಬೇತಿ ಕೇಂದ್ರದ ಅನುಕೂಲ ಪಡೆಯಿರಿ: ಶಾಸಕ ಗಣೇಶ್‌ ಪ್ರಸಾದ್‌

| Published : Nov 28 2024, 12:33 AM IST

ಸಾರಾಂಶ

ಪಟ್ಟಣದಲ್ಲಿ ಮಹಾಮನೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಮತ್ತು ಅಧ್ಯಯನ ಕೇಂದ್ರ ಆರಂಭವಾಗಿದ್ದು ವಿದ್ಯಾರ್ಥಿಗಳು ಪ್ರಯೋಜನ ಪಡೆದುಕೊಳ್ಳಿ ಎಂದು ಶಾಸಕ ಎಚ್.ಎಂ. ಗಣೇಶ್‌ ಪ್ರಸಾದ್‌ ಸಲಹೆ ನೀಡಿದರು. ಗುಂಡ್ಲುಪೇಟೆಯಲ್ಲಿ ಸಾಧನ ಪಥ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕ ಉಚಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಉಚಿತ ಕಾರ್ಯಾಗಾರ

ಗುಂಡ್ಲುಪೇಟೆ: ಪಟ್ಟಣದಲ್ಲಿ ಮಹಾಮನೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಮತ್ತು ಅಧ್ಯಯನ ಕೇಂದ್ರ ಆರಂಭವಾಗಿದ್ದು ವಿದ್ಯಾರ್ಥಿಗಳು ಪ್ರಯೋಜನ ಪಡೆದುಕೊಳ್ಳಿ ಎಂದು ಶಾಸಕ ಎಚ್.ಎಂ. ಗಣೇಶ್‌ ಪ್ರಸಾದ್‌ ಸಲಹೆ ನೀಡಿದರು.

ಪಟ್ಟಣದ ಗುರುಭವನದಲ್ಲಿ ಹಾಲಹಳ್ಳಿ ಸಂಗಮ ಪ್ರತಿಷ್ಠಾನ, ಸಂಕಲ್ಪ ಶಿಕ್ಷಕರ ವೇದಿಕೆ ಹಾಗೂ ಬೆಂಗಳೂರು ಸಾಧನ ಅಕಾಡೆಮಿ ಆಯೋಜಿಸಿದ್ದ ಸಂಕಲ್ಪ ಪುಸ್ತಕ ಲೋಕಾರ್ಪಣೆ ಹಾಗೂ ಸಾಧನ ಪಥ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕ ಉಚಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಟೆಕ್ನಾಲಜಿ ಮುಂದುವರಿದಂತೆ ಉದ್ಯೋಗ ಸೃಷ್ಟಿ ಕಡಿಮೆಯಾಗುತ್ತಿದೆ. ಶಾಸಕರು ಪತ್ರ ಕೊಟ್ಟ ತಕ್ಷಣ ಉದ್ಯೋಗ ಸಿಗಲ್ಲ. ಪಟ್ಟಣದಲ್ಲಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸಂಕಲ್ಪ ಶಿಕ್ಷಕರ ವೇದಿಕೆಯ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ. ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಿ ಎಂದು ಹೇಳಿದರು.

ಸಂಕಲ್ಪ ಶಿಕ್ಷಕರಾದ ನಾಗರಾಜ ಶರ್ಮನ್‌, ನಂದೀಶ್‌, ನಂಜುಂಡಸ್ವಾಮಿ, ಮಹೇಶ್‌ ಚಂದ್ರ, ಗುರುಪ್ರಸಾದ್‌ ಹಾಗೂ ಇತರರನ್ನು ಶಾಸಕರು ಸನ್ಮಾನಿಸಿದರು.

ಸಮಾರಂಭದಲ್ಲಿ ಪುರಸಭೆ ಅಧ್ಯಕ್ಷ ಕಿರಣ್‌ ಗೌಡ, ಕಾಡ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಚ್.ಎಸ್. ನಂಜುಂಡಪ್ರಸಾದ್‌, ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎಸ್.ಮಹೇಶ್‌, ಪುರಸಭೆ ಸದಸ್ಯರಾದ ಅಣ್ಣಯ್ಯಸ್ವಾಮಿ, ಎನ್.ಕುಮಾರ್‌, ಕಾಂಗ್ರೆಸ್‌ ಮುಖಂಡ ಬಿ.ಕುಮಾರಸ್ವಾಮಿ, ಎಸ್ಆರ್‌ಎಸ್‌ ರಾಜು, ಸಾಧನ ಅಕಾಡೆಮಿಯ ಚೇತನ್‌, ನಾಗರಾಜು, ಐಆರ್‌ಎಸ್‌ ಅಧಿಕಾರಿ ಪ್ರಮೋದ್‌ ಆರಾಧ್ಯ, ಸಂಕಲ್ಪ ಶಿಕ್ಷಕರ ವೇದಿಕೆ ಶಿಕ್ಷಕರು, ಇತರ ಅಧಿಕಾರಿಗಳು ಸೇರಿದಂತೆ ಹಲವರಿದ್ದರು.