ಸಾರಾಂಶ
ತರೀಕೆರೆಯಲ್ಲಿ ಶ್ರಾವಣ ಸಾಹಿತ್ಯ ಸಂಭ್ರಮ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ತರೀಕೆರೆಸಂವಿಧಾನದಲ್ಲಿ ಪ್ರಜೆಗಳಿಗಾಗಿಯೇ ಮೂಲಭೂತ ಹಕ್ಕು ಮತ್ತು ಕರ್ತವ್ಯ ಅಳವಡಿಸಿದ್ದೇವೆ. ಎಲ್ಲಾ ಮಕ್ಕಳಿಗೆ ಎಲ್ಲ ರೀತಿಯ ಹಕ್ಕುಭಾದ್ಯತೆಗಳಿವೆ. ಇವು ಸ್ವಾತಂತ್ರ್ಯದ ಉಡುಗೆರೆಯಾಗಿವೆ ಎಂದು ವಕೀಲ ಜಿ.ಸುಬ್ರಹ್ಮಣ್ಯ ಹೇಳಿದ್ದಾರೆ.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪಟ್ಟಣದ ಶ್ರೀ ಪ್ರಹರ್ಷಿತ ವಿದ್ಯಾ ಸಂಸ್ಥೆ ಶಾಲೆಯಲ್ಲಿ ಏರ್ಪಡಿಸಿದ್ದ ಶ್ರಾವಣ ಸಾಹಿತ್ಯ ಸಂಭ್ರಮದಲ್ಲಿ ಮಕ್ಕಳ ಬದುಕಿನ ಕಾನೂನು ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು. ಮಕ್ಕಳಿಗೆ ಪ್ರಶ್ನಿಸುವ ಹಕ್ಕಿದ್ದು ಇದು ಗಂಡು ಮತ್ತು ಹೆಣ್ಣು ಮಕ್ಕಳಿಬ್ಬರಿಗೂ ಸಮಾನವಾಗಿದೆ. ನಮ್ಮಲ್ಲಿ 1098 ಮಕ್ಕಳ ಸಹಾಯವಾಣಿ ಜಾರಿಯಲ್ಲಿದೆ. 2012 ರಲ್ಲಿ ಫೋಕ್ಸೋ ಕಾಯಿದೆ ಜಾರಿಯಲ್ಲಿದ್ದು, ಮಕ್ಕಳು ಶೋಷಣೆಗೆ ಒಳಗಾದರೆ ಅದರ ಸಹಾಯ ಪಡೆಯಬಹುದು. ಶೇ.54ರಷ್ಟು ಗಂಡು ಮಕ್ಕಳು ಶೋಷಿತರಾಗಿದ್ದಾರೆ. ಮಕ್ಕಳಿಗಾಗಿಯೇ ವಿಶೇಷ ಕಾನೂನು ಮತ್ತು ವಿಶೇಷ ನ್ಯಾಯಾಲಯಗಳು ನಮ್ಮ ದೇಶದಲ್ಲಿದೆ ಎಂದು ವಿವರಿಸಿದರು.ಬಾಲ ಕಾರ್ಮಿಕ ಕಾಯಿದೆ ಅಸ್ವಿತ್ವದಲ್ಲಿದ್ದು 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳುವಂತಿಲ್ಲ, ಬಾಲ ನ್ಯಾಯ ಕಾಯಿದೆ ಜಾರಿಯಲ್ಲಿದೆ. ಶೋಷಿತರು ಪ್ರಜಾಪ್ರಭುತ್ವದಲ್ಲಿ ನ್ಯಾಯ ಪಡೆಉಯಬಹುದು ಎಂದು ಹೇಳಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರವಿ ದಳವಾಯಿ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತಿನ ಇತಿಹಾಸದ ಬಗ್ಗೆ ಮಕ್ಕಳಿಗೆ ಕಿರುಚಿತ್ರ ತೋರಿಸಿದ್ದಕ್ಕಾಗಿ ಕಸಾಪದಿಂದ ಅಭಿನಂದನೆ ತಿಳಿಸಿದ ಅವರು ಕನ್ನಡ ಸಾಹಿತ್ಯ ಪರಿಷತ್ತು ಹಲವು ಮಹನೀಯರ ಕೊಡುಗೆಯಾಗಿದೆ. ಕಸಾಪ ನಾಡು, ನುಡಿ, ನೆಲ, ಜಲ ಸಂರಕ್ಷಣೆ ಇದರ ಪ್ರಮುಖ ಉದ್ದೇಶವಾಗಿದೆ. ಅಂತಹ ಗುರಿ ಇಟ್ಟುಕೊಂಡು, ಶಾಲಾ ಕಾಲೇಜು, ಮನೆಯಂಗಳ, ವಸತಿ ನಿಲಯಗಳಲ್ಲಿ ಆಯೋಜಿಸುತ್ತಿರುವ ಕಾರ್ಯಕ್ರಮಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು.ಶ್ರೀ ಪ್ರಹರ್ಷಿತ ವಿದ್ಯಾ ಸಂಸ್ಥೆ ಅಡಳಿತಾಧಿಕಾರಿ ಟಿ.ಎಸ್.ಅನೂಪ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕನ್ನಡ ಭಾಷೆ ಬಹಳ ಪ್ರಾಚೀನಮತ್ತು ಸುಲಲಿತ ಭಾಷೆಯಾಗಿದೆ. ಮಾತೃಭಾಷೆ ಬಳಸುವ ಮೂಲಕ ಕನ್ನಡ ಉಳಿಸಿ ಬೆಳೆಸುವರ ಅಗತ್ಯತೆ ಇದೆ ಎಂದು ಹೇಳಿದರು.
ನಗರ ಘಟಕ ಅಧ್ಯಕ್ಷ ಟಿ.ಸಿ.ದರ್ಶನ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಲೇಖಕ ತ.ಮ.ದೇವಾನಂದ, ಸಿ.ಯೋಗೀಶ್, ಆನಂದ, ಗಾಯಕ ಚಂದ್ರಶೇಖರ್, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.23ಕೆಅರ್.ಕೆ.6ಃತರೀಕೆರೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಶ್ರಾವಣ ಸಾಹಿತ್ಯ ಸಂಭ್ರಮವನ್ನು ಶ್ರೀ ಪ್ರಹರ್ಷಿತ ವಿದ್ಯಾ ಸಂಸ್ಥೆ ಆಡಳಿತಾಧಿಕಾರಿ ಟಿ.ಎಸ್.ಅನೂಪ್ ಉದ್ಘಾಟಿಸಿದರು. ತಾ. ಕಸಾಪ ಅಧ್ಯಕ್ಷ ರವಿ ದಳವಾಯಿ, ನಗರ ಘಟಕ ಅಧ್ಯಕ್ಷ ಟಿ.ಸಿ.ದರ್ಶನ್, ವಕೀಲ ಜಿ.ಸುಬ್ರಹ್ಮಣ್ಯ , ಲೇಖಕ ತ.ಮ.ದೇವಾನಂದ ಮತ್ತಿತರರು ಇದ್ದರು.