ತರೀಕೆರೆ ಹೈ ಸ್ಕೂಲ್ ಮತ್ತು ಕಾಲೇಜಿನ ಮಕ್ಕಳು ಆರ್ಥಿಕ ಸಾಕ್ಷರತೆ ಹಾಗೂ ಬ್ಯಾಂಕ್ ಹಣಕಾಸಿನ ವ್ಯವಹಾರಗಳ ಬಗ್ಗೆ ತಿಳಿದು ಕೊಳ್ಳಬೇಕು ಎಂದು ತರೀಕೆರೆ ಯೂನಿಯನ್ ಬ್ಯಾಂಕ್ ವ್ಯವಸ್ಥಾಪಕ ಹಿಜೇತ್ ರಜಪೂತ್ ಹೇಳಿದ್ದಾರೆ.
ಬ್ಯಾಂಕ್- ಹಣಕಾಸು ವ್ಯವಹಾರಗಳ ಕುರಿತ ರಸಪ್ರಶ್ನೆ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ತರೀಕೆರೆಹೈ ಸ್ಕೂಲ್ ಮತ್ತು ಕಾಲೇಜಿನ ಮಕ್ಕಳು ಆರ್ಥಿಕ ಸಾಕ್ಷರತೆ ಹಾಗೂ ಬ್ಯಾಂಕ್ ಹಣಕಾಸಿನ ವ್ಯವಹಾರಗಳ ಬಗ್ಗೆ ತಿಳಿದು ಕೊಳ್ಳಬೇಕು ಎಂದು ತರೀಕೆರೆ ಯೂನಿಯನ್ ಬ್ಯಾಂಕ್ ವ್ಯವಸ್ಥಾಪಕ ಹಿಜೇತ್ ರಜಪೂತ್ ಹೇಳಿದ್ದಾರೆ.
ತಾಲೂಕಿನ ತರೀಕೆರೆಯ ಹಳಿಯೂರು ಗ್ರಾಮದಲ್ಲಿ ಯೂನಿಯನ್ ಬ್ಯಾಂಕ್ ಹೈಸ್ಕೂಲ್ ಮಕ್ಕಳಿಗೆ ಆರ್ಥಿಕ ಸಾಕ್ಷರತೆ ಮತ್ತು ಬ್ಯಾಂಕ್ ಮತ್ತು ಹಣಕಾಸು ವ್ಯವಹಾರಗಳ ಕುರಿತ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು.ಮಕ್ಕಳು ರಸಪ್ರಶ್ನೆಯಲ್ಲಿ ಕೊಟ್ಟ ಉತ್ತರ, ಅವರ ಬುದ್ಧಿವಂತಿಕೆ ನೋಡಿ ನನಗೆ ತುಂಬಾ ಸಂತೋಷವಾಗಿದೆ. ನಮ್ಮ ಬ್ಯಾಂಕಿನಿಂದ ಮಕ್ಕಳಿಗೆ ಆರ್ಥಿಕ ಸಾಕ್ಷರತೆ ಹಾಗೂ ಹಣಕಾಸಿನ ವ್ಯವಹಾರದ ಬಗ್ಗೆ ತಿಳಿಸುವುದು ಬಹಳ ಅಗತ್ಯ. ಮಕ್ಕಳು ಸಹ ಹಣಕಾಸಿನ ವ್ಯವಹಾರ ಮತ್ತು ಬ್ಯಾಂಕಿನ ಅಕೌಂಟ್ ಮೂಲಕ ವ್ಯವಹಾರ ಮಾಡುವುದು ಎಲ್ಲಾ ಮಕ್ಕಳ ಕುಟುಂಬಗಳು, ಸರ್ಕಾರ ಯೋಜನೆ ರೂಪಿಸಿರುವ ಪಿ ಎಂ ಜೆ ಜೆ ಬಿ ವೈ ಮತ್ತು ಪಿ ಎಂ ಎಸ್ ಬಿ ವೈ ವಿಮೆ ಪಡೆದು ಕುಟುಂಬಗಳ ಸುರಕ್ಷತೆ ಮತ್ತು ಭದ್ರತೆ ದೃಷ್ಟಿಯಿಂದ ಪಡೆವುದು ಅಗತ್ಯ. ಮಕ್ಕಳು ಉತ್ತಮ ವಿದ್ಯಾಭ್ಯಾಸ ಮಾಡಿ ಶಾಲೆಗೆ ಕೀರ್ತಿ ತರಬೇಕು ಎಂದು ಹೇಳಿದರು.
ಯೂನಿಯನ್ ಬ್ಯಾಂಕ್ ಅಧಿಕಾರಿ ರಾಜು ಮಾತನಾಡಿ ಪ್ರತಿಯೊಬ್ಬರು ಸರ್ಕಾರ ಜಾರಿಗೆ ತಂದ ವಿಮೆ ಸುರಕ್ಷೆ ಮಾಡಿಸಬೇಕು, ಬ್ಯಾಂಕಿಗೆ ತಪ್ಪದೆ ಬರಬೇಕು, ಇದರ ಜೊತೆಗೆ ಈ ಕಾರ್ಯಾಗಾರ ಮುಗಿದ ಮೇಲೆ ಅಥವಾ ಬಿಡುವಿನ ದಿನ ಗಳಲ್ಲಿ ತಮ್ಮ ತಂದೆ ತಾಯಿಗಳ ಜೊತೆ ಬ್ಯಾಂಕ್‌ಗೆ ಭೇಟಿ ಮಾಡಿ ಸುರಕ್ಷಾ ವಿಮೆ ಮಾಡಿಸುವ ಜೊತೆಗೆ ಬ್ಯಾಂಕಿ ನಿಂದ ಸಿಗುವ ಯೋಜನೆ ತಿಳಿಯಿರಿ. ಶಿಕ್ಷಣದ ಜೊತೆ ಆರ್ಥಿಕ ಸಾಕ್ಷರತೆ ಬಹಳ ಅಗತ್ಯ ಎಂದರು.ಆರ್ಥಿಕ ಸಾಕ್ಷರತಾ ಅಧಿಕಾರಿ ಶ್ರೀನಿವಾಸ್ ಮಾತನಾಡಿ ಮಕ್ಕಳು ಹಣಕಾಸಿನ ಗಳಿಕೆ ಬಳಕೆ ಮತ್ತು ಖರ್ಚು ವೆಚ್ಚಗಳ ಬಗ್ಗೆ ಮಾಹಿತಿ ಪಡೆವುದು ಅಗತ್ಯ. ಹಾಗೆಯೇ ಬ್ಯಾಂಕುಗಳ ಮೂಲಕ ವ್ಯವಹಾರ ನಡೆಸಬೇಕು. ಸಿಬಿಲ್ ಸ್ಕೋರ್ ಹೆಚ್ಚಿಸಿ ಕೊಂಡು ಹಣಕಾಸಿನ ಸಹಕಾರ ಮತ್ತು ಸಾಲದ ವ್ಯವಸ್ಥೆ ಪಡೆಯುತ್ತಾ ಪ್ರಾಮಾಣಿಕ ವ್ಯವಹಾರ ನಡೆಸಬೇಕೆಂದು ತಿಳಿಸಿದರು.
ಪಿ.ಎಂ.ಎ.ಜೆ.ಬಿ.ವೈ, ಪಿ.ಎಂ.ಎಸ್.ಬಿ.ವೈ.ಹಾಗೂ ಎ.ಬಿ.ವೈ.ಯೋಜನೆಯನ್ನು ಮಕ್ಕಳು ಮತ್ತು ತಂದೆ ತಾಯಿ ಬ್ಯಾಂಕ್.ಗೆ ಹೋಗಿ ಈ ಯೋಜನೆಗಳನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.ಸರ್ಕಾರಿ ಹೈಸ್ಕೂಲ್ ಮುಖ್ಯೋಪಾಧ್ಯಾಯ ಮಂಜುನಾಥ್ ಮಾತನಾಡಿ ನಮ್ಮ ಹೈಸ್ಕೂಲಿನಲ್ಲಿ ಯೂನಿಯನ್ ಬ್ಯಾಂಕ್ ನವರು ನಮ್ಮ ಮಕ್ಕಳಿಗೆ ಆರ್ಥಿಕ ಸಾಕ್ಷರತೆ ಮತ್ತು ಬ್ಯಾಂಕಿನ ಹಣಕಾಸಿನ ವ್ಯವಾರದ ಬಗ್ಗೆ ಮತ್ತು ಬ್ಯಾಂಕ್ ಅಕೌಂಟ್ ಮತ್ತು ಉಳಿತಾಯ, ಸೈಬರ್ ಕಳ್ಳತನಗಳ ಬಗ್ಗೆ ಮತ್ತು ಜೀವನದಲ್ಲಿ ಹಣಕಾಸಿನ ಮೌಲ್ಯದ ಮಾಹಿತಿ ನೀಡಿರುವುದು ಉತ್ತಮ. ಈ ಮೂಲಕ ಮಕ್ಕಳನ್ನು ಉತ್ತೇಜಿಸಿ ವಿಜೇತರಿಗೆ ಉಪಯುಕ್ತ ಬಹುಮಾನ ನೀಡಿ ಮಕ್ಕಳಲ್ಲಿ ಹಣಕಾಸಿನ ವ್ಯವಹಾರಗಳ ಕುರಿತು ಚಿಂತನೆ ಮೂಡಿಸಿದ್ದಾರೆ ಹಾಗಾಗಿ ಇದೊಂದು ಅತ್ಯಮೂಲ್ಯ ಮೌಲ್ಯಯುತ ಕಾರ್ಯಕ್ರಮ ಎಂದು ಹೇಳಿದರು.
ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಶಿಕ್ಷಕರಾದ ಪ್ರಕಾಶ್ , ಪ್ರೌಢಶಾಲೆ ಶಿಕ್ಷಕ ವೃಂದ ಮತ್ತು ಮಕ್ಕಳು ಉಪಸ್ಥಿತರಿದ್ದರು.ತರೀಕೆರೆ ಹಳಿಯೂರು ಗ್ರಾಮದ ಹೈಸ್ಕೂಲಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಯೂನಿಯನ್ ಬ್ಯಾಂಕ್ ವ್ಯವಸ್ಥಾಪಕ ಹಿಜೇತ್ ರಜಪೂತ್, ಆರ್ಥಿಕ ಸಾಕ್ಷರತಾ ಅಧಿಕಾರಿ ಶ್ರೀನಿವಾಸ್, ಮುಖ್ಯೋಪಾಧ್ಯಾಯ ಮಂಜುನಾಥ್ ಮತ್ತಿತರರು ಇದ್ದರು.