ಕನ್ನಡಪ್ರಭ ವಾರ್ತೆ ಅಥಣಿಹೊಸ ತಂತ್ರಜ್ಞಾನದ ಅರಿವಿರುವ ಮಕ್ಕಳಿಗೆ ಗೂಗಲ್ ಗುರುವಿನ ಜ್ಞಾನ, ಶಿಕ್ಷಣ ನೀಡುವುದು ಇಂದಿನ ಅಗತ್ಯವಾಗಿದೆ. ಕೇವಲ ಹೆಚ್ಚು ಅಂಕಗಳಿಸುವ ಬುದ್ದಿವಂತ ಮಕ್ಕಳನ್ನು ಬೆಳೆಸಿದರೆ ಸಾಲದು, ಗುಣಮಟ್ಟದ ಶಿಕ್ಷಣದ ಜೊತೆಗೆ ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳನ್ನು ಮಕ್ಕಳಲ್ಲಿ ಬೆಳೆಸಬೇಕು ಎಂದು ವೈದ್ಯ ಹಾಗೂ ಸಾಹಿತಿ ಡಾ.ಅಣ್ಣಪ್ಪ ಪಾಂಗಿ ಹೇಳಿದರು.
ಕನ್ನಡಪ್ರಭ ವಾರ್ತೆ ಅಥಣಿ
ಹೊಸ ತಂತ್ರಜ್ಞಾನದ ಅರಿವಿರುವ ಮಕ್ಕಳಿಗೆ ಗೂಗಲ್ ಗುರುವಿನ ಜ್ಞಾನ, ಶಿಕ್ಷಣ ನೀಡುವುದು ಇಂದಿನ ಅಗತ್ಯವಾಗಿದೆ. ಕೇವಲ ಹೆಚ್ಚು ಅಂಕಗಳಿಸುವ ಬುದ್ದಿವಂತ ಮಕ್ಕಳನ್ನು ಬೆಳೆಸಿದರೆ ಸಾಲದು, ಗುಣಮಟ್ಟದ ಶಿಕ್ಷಣದ ಜೊತೆಗೆ ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳನ್ನು ಮಕ್ಕಳಲ್ಲಿ ಬೆಳೆಸಬೇಕು ಎಂದು ವೈದ್ಯ ಹಾಗೂ ಸಾಹಿತಿ ಡಾ.ಅಣ್ಣಪ್ಪ ಪಾಂಗಿ ಹೇಳಿದರು.ಪಟ್ಟಣದ ಕೆಎಲ್ಇ ಸಂಸ್ಥೆಯ ಖೋತ ಸಭಾಂಗಣದಲ್ಲಿ ಲಯನ್ಸ್ ಕ್ಲಬ್ ಆಫ್ ಅಥಣಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನದ ಪ್ರಯುಕ್ತ ತಾಲೂಕಿನ ಅತ್ಯುತ್ತಮ ಶಿಕ್ಷಕರಿಗೆ ತಾಲೂಕಾ ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿದರು. ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬಂತೆ ಪ್ರತಿಯೊಬ್ಬರ ಜೀವನದಲ್ಲಿ ಗುರುವಿನ ಮಾರ್ಗದರ್ಶನ ಅಗತ್ಯವಾಗಿದೆ. ಶಿಕ್ಷಕರು ದೇಶದ ಭವಿಷ್ಯ ರೂಪಿಸುವ ಶಿಲ್ಪಿಗಳು. ಭಾರತೀಯ ಪರಂಪರೆಯಲ್ಲಿ ಗುರುವಿಗೆ ಮಹತ್ವದ ಸ್ಥಾನ ನೀಡಲಾಗಿದೆ. ಅತ್ಯುತ್ತಮ ಶಿಕ್ಷಕರನ್ನು ಗುರುತಿಸಿ ಗೌರವಿಸುತ್ತಿರುವ ಲಯನ್ಸ್ ಕ್ಲಬ್ ಆಫ್ ಅಥಣಿ ಕಾರ್ಯ ಶ್ಲಾಘನೀಯ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್.ಮುಂಜೆ ಮಾತನಾಡಿ, ಶಿಕ್ಷಕರು ಮೊದಲು ವೃತ್ತಿಯನ್ನು ಪ್ರೀತಿಸಬೇಕು, ಸೇವೆ ಸಲ್ಲಿಸುವ ಶಿಕ್ಷಣ ಸಂಸ್ಥೆಯನ್ನು ಪ್ರೀತಿಸಬೇಕು, ನಿಮ್ಮ ಆರೋಗ್ಯವನ್ನು ಪ್ರೀತಿಸಬೇಕು. ಮಕ್ಕಳಿಗೆ ಮೊದಲು ಪ್ರಥಮ ದ್ವಿತೀಯ ಹಾಗೂ ತೃತೀಯ ಭಾಷೆಗಳನ್ನು ಕಲಿಸಿದಾಗ ಇನ್ನಿತರ ವಿಷಯಗಳನ್ನು ಕಲಿಯಲು ಸಹಕಾರಿಯಾಗುತ್ತದೆ. ತಾಲೂಕಿನ ಮಕ್ಕಳು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಲು ಅವರ ಪ್ರತಿಭೆ ಪ್ರೋತ್ಸಾಹಿಸುವಂತೆ ಕರೆ ನೀಡಿದರು.ಅಥಣಿ ಲಯನ್ಸ್ ಕ್ಲಬ್ ಅಧ್ಯಕ್ಷ ವಿನೋದ ಕನಮಡಿ ಮಾತನಾಡಿ, ಅಥಣಿ ಪಟ್ಟಣದಲ್ಲಿ ಸಂಸ್ಥಾಪಕ ಅಧ್ಯಕ್ಷ ರಮೇಶ್ ಬುಲಬುಲೆ ನೇತೃತ್ವದಲ್ಲಿ ಸಮಾಜಮುಖಿ ಕಾರ್ಯಕ್ರಮಗಳನ್ನ ನೀಡುತ್ತಾ ಬಂದಿದೆ. ಸಮಾಜಕ್ಕೆ ಮತ್ತು ದೇಶಕ್ಕೆ ಒಳ್ಳೆಯ ಭವಿಷ್ಯ ರೂಪಿಸುವ ಶಿಲ್ಪಿಗಳು ಎಂದು ಕರೆಯಲ್ಪಡುವ ಶಿಕ್ಷಕರ ಸೇವೆಯನ್ನ ಗೌರವಿಸುವುದು ಮುಖ್ಯ. ಪ್ರಸಕ್ತ ವರ್ಷದಲ್ಲಿ 23 ಶಿಕ್ಷಕ ಮತ್ತು ಶಿಕ್ಷಕರಿಗೆ ಆದರ್ಶ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಗಿದ್ದು, ಮುಂದಿನ ವರ್ಷದಲ್ಲಿ ಇನ್ನಷ್ಟು ಸಮಾಜಮುಖಿ ಸೇವೆ ಹಮ್ಮಿಕೊಳ್ಳಲಿದೆ ಎಂದರು.ಈ ವೇಳೆ ಅಥಣಿ ಪಟ್ಟಣ ಮತ್ತು ತಾಲೂಕಿನ ವಿವಿಧ ಶಾಲೆಗಳ ಅತ್ಯುತ್ತಮ ಶಿಕ್ಷಕ ಮತ್ತು ಶಿಕ್ಷಕಿಯರಿಗೆಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ವೇಳೆ ಲಯನ್ಸ್ ಕ್ಲಬ್ ಸಂಸ್ಥಾಪಕ ಅಧ್ಯಕ್ಷ ರಮೇಶ ಬುಲಬುಲೆ, ಅಧ್ಯಕ್ಷ ವಿನೋದ ಕನಮಡಿ, ಕಾರ್ಯದರ್ಶಿ ಕಿರಣ ಶಿರಗುಪ್ಪಿ, ಖಜಾಂಚಿ ಅಭಿನಂದನ ಪಡನಾಡ, ಆನಂದ ಟೊಣಪಿ, ಶಶಿಕಾಂತ್ ಹುಲಕುಂದ, ಮಹಾಂತೇಶ ಕಮಲಾಪುರೆ, ಅಶೋಕ ಹೊಸೂರ, ನಿತಿನ್ ಗೊಂಗಡಿ, ಅಮಿತ್ ಮಹಾಜನ, ಪವನ ಶಿರಗುಪ್ಪಿ, ಡಾ.ರವೀಂದ್ರ ಗಾವಡೆ, ಡಾ.ಜಿ.ಎಸ್.ಪಾಟೀಲ,ಬಾವುಸಾಹೇಬ ನಾಯಿಕ, ಭಾರತಿ ಕೋರೆ, ಅಶ್ವಿನಿ ಕನಮಡಿ, ಇರಾವತ ಕಮಲಾಪುರ, ಭಾರತಿ ಸಂಕ್ರಟ್ಟಿ ಸೇರಿ ಇನ್ನಿತರರು ಉಪಸ್ಥಿತರಿದ್ದರು. ಅಭಿನಂದನ ಪಡನಾಡ ಸ್ವಾಗತಿಸಿದರು, ಮಂಜುನಾಥ ಬಡಿಗೇರ ನಿರೂಪಿಸಿದರು. ಕಿರಣ ಶಿರಗುಪ್ಪಿ ವಂದಿಸಿದರು.