ಶಿವಮೊಗ್ಗ: ರಾಷ್ಟ್ರಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಶಿವಮೊಗ್ಗದ ನೇಹಾ ಅಬಾಕಸ್ - ವೇದಿಕ್ ಮ್ಯಾಥ್ಸ್ ಮತ್ತು ಹ್ಯಾಂಡ್ ರೈಟಿಂಗ್ ಸೆಂಟರ್‌ನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಗೋವಾದಲ್ಲಿ ಜನವರಿ 31 ಮತ್ತು ಫೆಬ್ರವರಿ 1 ರಂದು ನಡೆದ ರಾಷ್ಟ್ರಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಶಿವಮೊಗ್ಗ ವಿನೋಬನಗರದ ನೇಹಾ ಅಬಾಕಸ್ - ವೇದಿಕ್ ಮ್ಯಾಥ್ಸ್ ಮತ್ತು ಹ್ಯಾಂಡ್ ರೈಟಿಂಗ್ ಸೆಂಟರ್‌ನ 9 ವಿದ್ಯಾರ್ಥಿಗಳು ಭಾಗವಹಿಸಿ ಅತ್ಯುತ್ತಮ ಬಹುಮಾನಗಳನ್ನು ಪಡೆದು ಶಿವಮೊಗ್ಗ ಜಿಲ್ಲೆಯ ಗೌರವಕ್ಕೆ ಪಾತ್ರರಾಗಿದ್ದಾರೆ.

ಅಬಾಕಸ್ ಸ್ಪರ್ಧೆಯಲ್ಲಿ ಚನಸ್ಯಾ . ಕೆ. ದಾನಳ್ಳಿ- ಸೂಪರ್ ಚಾಂಪಿಯನ್, ರೆಹಾನ್ಸಿ . ಎಂ . ಜಿ - ಸೂಪರ್ ಚಾಂಪಿಯನ್, ಎ.ಜೆ. ಖುಷಿ- ಸೂಪರ್ ಚಾಂಪಿಯನ್, ರಿಶಿಕಾ, ಎಸ್.ಕೆ - ಸೂಪರ್ ಚಾಂಪಿಯನ್, ಬಿ.ಎಸ್. ಪೂರ್ವಿ - ಚಾಂಪಿಯನ್, ಮೊನಾಲಿಕಾ . ಜಿ. ಆರ್.- ಚಾಂಪಿಯನ್, ರುತು. ಪಿ ಹೆಚ್ - ಚಾಂಪಿಯನ್, ನೇಹಾ ಒಡೆಯರ್. ಎಚ್ ಎಂ - ಚಾಂಪಿಯನ್, ವೇದಿಕ್ ಒಡೆಯರ್ . ಹೆಚ್ ಎಂ - ರನ್ನರ್ ಆಫ್- 2 ಅತ್ಯುತ್ತಮ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಎಲ್ಲಾ ವಿಧ್ಯಾರ್ಥಿಗಳು ಮತ್ತು ಪೋಷಕರನ್ನು ನೇಹಾ ಅಬಾಕಸ್ - ವೇದಿಕ್ ಮ್ಯಾಥ್ಸ್ ಮತ್ತು ಹ್ಯಾಂಡ್ ರೈಟಿಂಗ್ ಸೆಂಟರ್‌ನ ಮುಖ್ಯಸ್ಥರಾದ ಶ್ರೀಮತಿ ರೂಪ ಮಂಜುನಾಥ್ ಅಭಿನಂದಿಸಿದ್ದಾರೆ.