ಶಾಲಾ ಅಂಗಳದಲ್ಲಿ ಮತ್ತೆ ಮಕ್ಕಳ ಕಲರವ

| Published : Jun 01 2024, 01:45 AM IST

ಸಾರಾಂಶ

ದಾಬಸ್‌ಪೇಟೆ: ಬೇಸಿಗೆಯ 50 ದಿನಗಳ ಸುದೀರ್ಘ ರಜೆಯ ನಂತರ ಶಾಲೆಗಳು ಪುನರಾರಂಭವಾಗಿದ್ದು, ಶಾಲಾ ಅಂಗಳದಲ್ಲಿ ಶುಕ್ರವಾರ ಮತ್ತೆ ಮಕ್ಕಳ ಕಲರವ ಕಂಡುಬಂತು. ನೆಲಮಂಗಲ ತಾಲೂಕಿನಾದ್ಯಂತ ಮೊದಲ ದಿನ ಶಾಲೆಗೆ ಬಂದ ವಿದ್ಯಾರ್ಥಿಗಳನ್ನು ಶಿಕ್ಷಕರು ಹೂವು ನೀಡಿ ಸಂಭ್ರದಿಂದ ಸ್ವಾಗತಿಸಿದರು.

ಶಾಲೆಗಳನ್ನು ತಳಿರು ತೋರಣ ಮತ್ತು ಬಲೂನ್‌ಗಳಿಂದ ಅಲಂಕರಿಸಲಾಗಿತ್ತು. ಆವರಣದಲ್ಲಿ ಬಣ್ಣಬಣ್ಣದ ಆಕರ್ಷಕ ರಂಗೋಲಿ ಚಿತ್ತಾರ ಬಿಡಿಸಲಾಗಿತ್ತು. ಶಾಲಾ ಸಮಯಕ್ಕೆ ಹಾಜರಾದ ವಿದ್ಯಾರ್ಥಿಗಳ ಮೇಲೆ ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು ಹಾಗೂ ಸ್ಥಳೀಯ ಮುಖಂಡರು ಪುಷ್ಪವೃಷ್ಟಿ ಮಾಡಿದರು. ನಂತರ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿ–ವಿದ್ಯಾರ್ಥಿನಿಯರಿಗೆ ಪಠ್ಯಪುಸ್ತಕ ಮತ್ತು ಸಮವಸ್ತ್ರಗಳನ್ನು ವಿತರಿಸಲಾಯಿತು.

ಮೊದಲ ದಿನವೇ ಪಠ್ಯಪುಸ್ತಕ ಮತ್ತು ಸಮವಸ್ತ್ರ ಪಡೆದ ಮಕ್ಕಳ ಮೊಗದಲ್ಲಿ ಖುಷಿ ಕಂಡುಬಂತು. ವಿದ್ಯಾರ್ಥಿಗಳು ಇಡೀ ದಿನ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಂಡು ಸಂಭ್ರಮದಿಂದ ಕಾಲಕಳೆದರು.ಪೋಟೋ 7 : ಶಿವಗಂಗೆಯ ಸರ್ಕಾರಿ ಕಿರಿಯ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಾಲಾ ಪ್ರಾರಂಭೋತ್ಸವದಲ್ಲಿ ಶಿಕ್ಷಕರು ವಿದ್ಯಾರ್ಥಿಗಳು ವಿಕ್ಟರಿ ಸಿಂಬಲ್ ತೋರಿಸಿ ಶಾಲೆಗೆ ಆಗಮಿಸಿದರು.