ಸಾರಾಂಶ
ಕನ್ನಡಪ್ರಭವಾರ್ತೆ ತುರುವೇಕೆರೆ
ಮಕ್ಕಳಲ್ಲಿ ವ್ಯವಹಾರ ಜ್ಞಾನ ಮೂಡಿಸಲು ಶಾಲೆಗಳಲ್ಲಿ ನಡೆಸುವ ಮಕ್ಕಳ ಸಂತೆ ಪ್ರಯೋಜನಕಾರಿಯಾದುದು ಎಂದು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಅಧ್ಯಕ್ಷರಾದ ಆನಂದ ರಾಜ್ ಅಭಿಪ್ರಾಯಪಟ್ಟರು.ಇಲ್ಲಿಯ ವಿಶ್ವವಿಜಯ ವಿದ್ಯಾ ಶಾಲೆಯಲ್ಲಿ ನಡೆಸಿದ ಮಕ್ಕಳ ಸಂತೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಮಕ್ಕಳ ಸಂತೆ ಮಕ್ಕಳಿಗೆ ಕೃಷಿ ಕಾಯದ ಕಷ್ಟ ಸುಖಗಳನ್ನು ತಿಳಿಸಲಿದೆ. ತಮ್ಮ ತಂದೆ ತಾಯಿ ನಮ್ಮ ಪೋಷಣೆಗೆ ಪಡುವ ಕಷ್ಠ ಕಾರ್ಪಣ್ಯಗಳ ಅರಿವು ಮೂಡಲಿಸಲಿದೆ. ಮಕ್ಕಳಿಗೆ ವ್ಯಾಪಾರದ ಮನೋಭಾವ ಮಕ್ಕಳ ಸಂತೆಯಲ್ಲಿ ಮೂಡಲಿದೆ. ತಮ್ಮ ಶ್ರಮಕ್ಕೆ ಸಿಗುವ ಲಾಭವೇನು ಎಂಬ ಬಗ್ಗೆ ಮಕ್ಕಳಲ್ಲಿ ಚಿಂತನೆ ಮೂಡಲಿದೆ ಎಂದರು.ಶಾಲಾ ಪ್ರಾಂಶುಪಾಲೆ ವಿಜಯ ವಿಶ್ವೇಶ್ವರಯ್ಯ ಮಾತನಾಡಿ, ಮಕ್ಕಳಲ್ಲಿ ವ್ಯಾಪಾರದ ಮನೋಭಾವ ಮೂಡಿಸಬೇಕು. ವಸ್ತುಗಳನ್ನು ಉತ್ಪಾದಿಸುವುದು ದೊಡ್ಡ ವಿಷಯವಲ್ಲ. ಅದನ್ನು ಮಾರುಕಟ್ಟೆಯಲಿ ಹೇಗೆ ಮಾರಾಟ ಮಾಡಬೇಕೆಂಬ ಕಲೆಯನ್ನು ಕಲಿಸುವ ಸಲುವಾಗಿ ಮಕ್ಕಳ ಸಂತೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಕೆಳ ಅಂತಸ್ಥಿನಲ್ಲಿ ನಡೆದ ಮಕ್ಕಳ ಸಂತೆಯಲ್ಲಿ ಮಕ್ಕಳು ಪಾನೀಪೂರಿ, ಚಿರುಮುರಿ, ನಿಪ್ಪಟ್ ಮಸಾಲಾ, ಬ್ರೆಡ್, ಬಿಸಿ ಬಿಸಿ ಬೋಂಡ, ಪಕೋಡಾ, ಹಪ್ಪಳ, ಚಿಕ್ಕಿ, ಕಡ್ಲೆ ಮಿಠಾಯಿ, ಕುರುಕುರೆ, ಗೋಬಿ ಮಂಚೂರಿ, ರವೆ ಉಂಡೆ, ಕೋಡುಬಳೆ, ವಿಧವಿಧವಾದ ಬಿಸ್ಕತ್ ಗಳು ಸೇರಿದಂತೆ ಇನ್ನಿತರ ಕುರುಕುಲು ಐಟಮ್ ಗಳನ್ನು ಮಕ್ಕಳು ಮಾರಾಟ ಮಾಡುತ್ತಿದ್ದರು. ಬಂದಿದ್ದ ಬಹುಪಾಲು ಪೋಷಕರು ಮತ್ತು ಸಾರ್ವಜನಿಕರು ಕುರುಕುಲಿನ ಸವಿಯನ್ನು ಸವಿದು ಸಂತಸಪಟ್ಟರು. ಮೇಲ್ಬಾಗದ ಅಂತಸ್ಥಿನಲ್ಲಿ ರೈತರು ಬೆಳೆಯುವ ಉತ್ಪನ್ನಗಳಾದ ಎಲ್ಲಾ ವಿಧಧ ತರಕಾರಿಗಳು, ಸೊಪ್ಪು, ನಿಂಬೆ, ಹೆರಳೇಕಾಯಿ, ಹಲಸಿನಕಾಯಿ, ಅವರೇಕಾಯಿ, ಕೊತ್ತಂಬರಿ ಸೊಪ್ಪು, ತೆಂಗಿನಕಾಯಿ, ಕೊಬರಿ ಸೇರಿದಂತೆ ವಿವಿಧ ಬಗೆಯ ಹಸಿರು ತರಕಾರಿಗಳನ್ನು ಕೂಗಿ ಮಾರುತ್ತಿದ್ದರು. ಮಕ್ಕಳೊಂದಿಗೆ ಅವರ ಪೋಷಕರೂ ಸಹ ವ್ಯಾಪಾರದಲ್ಲಿ ಮಕ್ಕಳಿಗೆ ಸಹಕಾರಿಯಾದರು. ಈ ವೇಳೆ ಶಾಲೆಯ ನಿರ್ದೇಶಕರಾದ ಶೋಭಾ ಸುಬ್ರಹ್ಮಣ್ಯ, ಮಂಜುಳಾ ಸೇರಿದಂತೆ ಶಾಲೆಯ ಮುಖ್ಯ ಶಿಕ್ಷಕರು ಮತ್ತು ಸಹ ಶಿಕ್ಷಕರು ಮಕ್ಕಳ ಸಂತೆಯಲ್ಲಿ ಪಾಲ್ಗೊಂಡಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))