ಸಾರಾಂಶ
ಪಟ್ಟಣದ ಬಿಜಿಎಸ್ ಶಾಲೆ ಆವರಣದಲ್ಲಿ 3 ಮತ್ತು 4ನೇ ತರಗತಿ ಮಕ್ಕಳಿಗೆ ಆಯೋಜಿಸಿದ್ದ ‘ಮಕ್ಕಳ ಸಂತೆ’ಯಶಸ್ವಿ
ಕನ್ನಡಪ್ರಭ ವಾರ್ತೆ, ಕಡೂರುಹಾಕಿದ ಬಂಡವಾಳಕ್ಕಿಂತ ಲಾಭದ ರೂಪದಲ್ಲಿ ಗಳಿಸುವ ಹಣದ ವ್ಯವಹಾರ ಕಲಿಯಲು ಮಕ್ಕಳಿಗೆ ಮಕ್ಕಳ ಸಂತೆ ನಡೆಸುವ ಮೂಲಕ ವ್ಯವಹಾರಿಕ ಹಾಗೂ ವ್ಯಾಪಾರ ಜ್ಞಾನ ಹೆಚ್ಚಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ಕಡೂರು ಬಿಜಿಎಸ್ ಶಿಕ್ಷಣ ಸಂಸ್ಥೆ ಮುಖ್ಯಸ್ಥೆ ಎಚ್.ಎಸ್.ಸುಮಿತ್ರ ಹೇಳಿದರು.ಸೋಮವಾರ ಪಟ್ಟಣದ ಬಿಜಿಎಸ್ ಶಾಲೆ ಆವರಣದಲ್ಲಿ 3 ಮತ್ತು 4ನೇ ತರಗತಿ ಮಕ್ಕಳಿಗೆ ಆಯೋಜಿಸಿದ್ದ ‘ಮಕ್ಕಳ ಸಂತೆ’ಯಶಸ್ವಿಯಾಗಿ ನಡೆಸಿದ ಮಕ್ಕಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ ಮಾತನಾಡಿದರು. ಮಕ್ಕಳು ವರ್ಷಪೂರ್ತಿ ಪಠ್ಯ, ಕ್ರೀಡಾ ಚಟುವಟಿಕೆಗಳ ಕಲಿಯುತ್ತಿರುತ್ತಾರೆ. ಇದರಿಂದ ಅವರ ಜ್ಞಾನ ಮತ್ತು ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾದ್ಯವಾಗುತ್ತದೆ. ಅದರೆ ಮಕ್ಕಳ ಸಂತೆ ನಡೆಸುವ ಮೂಲಕ ಮಕ್ಕಳಲ್ಲಿ ಲೆಕ್ಕಾಚಾರ, ಲಾಭ-ನಷ್ಟಗಳು ಹಾಗೂ ಸಾರ್ವಜನಿಕರೊಂದಿಗೆ ವ್ಯವಹಾರಿಕವಾಗಿ ನಡೆದುಕೊಳ್ಳುವ ಬಗ್ಗೆ ವ್ಯವಹಾರ ಜ್ಞಾನ ಹೆಚ್ಚಿಸಿಕೊಳ್ಳಲು ಮಕ್ಕಳ ಸಂತೆ ನೆರ ವಾಗುತ್ತದೆ. ಈ ನಿಟ್ಟಿನಲ್ಲಿ ಮಕ್ಕಳಿಗಾಗಿ ಆಯೋಜಿಸಿದ್ದ ಸಂತೆ ಯಶಸ್ವಿಯಾಗಿದ್ದು ಅವರಲ್ಲಿ ವ್ಯವಹಾರಿಕ ಜ್ಞಾನ ಅಲ್ಪಸ್ವಲ್ಪ ಮೂಡಿದೆ ಎಂದರೆ ತಪ್ಪಾಗಲಾರದು ಎಂದರು. ಬೆಳಗ್ಗೆಯಿಂದಲೆ ಮಕ್ಕಳು ವಿವಿಧ ಬಗೆ ತರಕಾರಿ, ಹಣ್ಣು, ತಿಂಡಿ ತಿನಿಸುಗಳು, ಎಳನೀರು, ಮಜ್ಜಿಗೆ ಮತ್ತಿತರ ಪದಾರ್ಥಗಳನ್ನು ಮಾರಾಟ ಮಾಡಿ ಸಂಭ್ರಮಿಸಿದರು. ಪೋಷಕರು ಮಕ್ಕಳಿಗೆ ಬಂಡವಾಳದ ರೂಪದಲ್ಲಿ ಹಣ ನೀಡಿದ್ದು ಆ ಹಣದಲ್ಲಿ ತರಕಾರಿ, ಹಣ್ಣು, ಎಳನೀರು ತಂದು ಮಾರಾಟ ಮಾಡಿ ಲಾಭದ ಹಣವನ್ನು ವ್ಯವಹಾರಿಕವಾಗಿ ಕಂಡ ಮಕ್ಕಳಲ್ಲಿ ಸಂಭ್ರಮ ಮನೆ ಮಾಡಿತ್ತು.
ವಿದ್ಯಾರ್ಥಿಗಳಾದ ಸಮರ್ಥ, ಭಾರ್ಗವ, ತನ್ಮಯಿ, ಪ್ರತೀಕಾ ಸಂತೆಯ ಅನುಭವ ಹಂಚಿಕೊಂಡರು. ಶಾಲೆಯ ಶಿಕ್ಷಕರಾದ ಹನುಮಂತಪ್ಪ, ಬಸವರಾಜು, ಸುನೀತಾ, ಅರ್ಪಿತಾ, ಮನೋಜ್, ಲೋಹೀತ್, ಭಾಗ್ಯ ಮತ್ತು ಪ್ರವೀಣ್ ಮಕ್ಕಳಿಗೆ ಸಹಕಾರ ನೀಡಿದರು. ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಮಕ್ಕಳ ವ್ಯವಹಾರವನ್ನು ಕಣ್ಣಾರೆ ಕಂಡು ಸಂತಸ ಪಟ್ಟರು.---ಬಾಕ್ಸ್ ಸುದ್ದಿ --
ಒಂದು ಸಾವಿರ ಬಂಡವಾಳ ಹಾಕಿ ಅವರೇಕಾಯಿ, ಜವಳಿಕಾಯಿ, ಬದನೆಕಾಯಿ, ತೆಂಗಿನಕಾಯಿಗಳನ್ನು ತಂದು ಮಾರಾಟ ಮಾಡಿದ್ದು ₹110 ನಿವ್ವಳ ಲಾಭ ಗಳಿಸಿದೆ. ಇದು ಕೇವಲ ಒಂದು ಗಂಟೆಯಲ್ಲಿ ಮಾಡಿರುತ್ತೇನೆ. ನಾನು ಮೂಲವಾಗಿ ಖರೀದಿಸಿದ ತರಕಾರಿಗೆ ಶೇ.15 ಲಾಭ ಇಟ್ಟು ಸಂತೆ ಮಾರಾಟ ಮಾಡಿದೆ ಇದೊಂದು ಹೊಸ ಅನುಭವ.-- ತೇಜಪ್ರಭು, 4 ನೇ ತರಗತಿ ವಿದ್ಯಾರ್ಥಿ
2. ನಾನು ₹3,650 ಬಂಡವಾಳ ಹಾಕಿ ಟೋಮಾಟೋ, ಈರುಳ್ಳಿ, ಶುಂಟಿ, ಬೆಳ್ಳುಳ್ಳಿ ಮಾರಾಟ ಮಾಡಿದ್ದು, ₹1450 ಲಾಭ ಗಳಿಸಿದ್ದೇನೆ. ಈ ಸಂತೆಯಿಂದ ವ್ಯವಹಾರ ಜ್ಞಾನ ಹೆಚ್ಚಿದ್ದು ಭವಿಷ್ಯದಲ್ಲಿ ಸಹಕಾರಿಯಾಗುತ್ತದೆ.ಶಹೀರ್, 4ನೇ ತರಗತಿ ವಿದ್ಯಾರ್ಥಿ17ಕೆಕೆಡಿಯು1. ಕಡೂರು ಬಿಜಿಎಸ್ ಶಾಲೆಯ ಆವರಣದಲ್ಲಿ ಸೋಮವಾರ ಮಕ್ಕಳ ಸಂತೆ ನಡೆಯಿತು.