ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ಬಿಜಿಎಸ್ ಶಾಲಾ ಆವರಣದಲ್ಲಿ ನಡೆದ ಮಕ್ಕಳ ಸಂತೆಯಲ್ಲಿ ತರಕಾರಿ, ಹಣ್ಣು, ಹೂ, ಮನೆಯಲ್ಲಿ ಮಾಡಿಕೊಂಡು ಬಂದಿದ್ದ ತಿಂಡಿ ಪದಾರ್ಥಗಳು, ಎಳನೀರು, ಬಳೆ, ಕರುಂಗಲಿಮಾಲೆ, ಫ್ಯಾಷನ್ ವಸ್ತುಗಳ ಮಾರಾಟದ ಅಂಗಡಿ ಜೊತೆಗೆ ಇದೇ ಪ್ರಥಮ ಬಾರಿಗೆ ರೈತರಿಗೆ ಉಪಯುಕ್ತವಾದ ಯಂತ್ರಗಳನ್ನು ಮಾರಾಟ ಮಾಡಿ ಶಾಲಾ ಮಕ್ಕಳು ಗಮನ ಸೆಳೆದರು.ಎಲ್ಲಾ ವ್ಯಾಪಾರವನ್ನು ಮಕ್ಕಳೇ ಮಾಡಿದರೂ ಕೂಡಾ ಪೋಷಕರು ಸಹ ಜೊತೆಯಲ್ಲಿ ಮಕ್ಕಳ ಲೆಕ್ಕಾಚಾರಕ್ಕೆ ನೆರವಾದರು. ಇದಕ್ಕೂ ಮುನ್ನ ಮಕ್ಕಳ ಸಂತೆಯನ್ನು ಬಿಜಿಎಸ್ ಹೇಮಗಿರಿ ಶಾಖಾ ಮಠದ ಕಾರ್ಯದರ್ಶಿ ಜೆ.ಎನ್.ರಾಮಕೃಷ್ಣೇಗೌಡ ಹಾಗೂ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಅವರು ಸ್ವತಃ ತಾವೇ ಖರೀದಿದಾರರಾಗಿ ಮಕ್ಕಳಿಂದ ಹಣ್ಣು, ಹೂಗಳನ್ನು ವ್ಯಾಪಾರ ಮಾಡಿ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ವ್ಯಾವಹಾರಿಕ ಜ್ಞಾನ ಬೆಳೆಯಲು ಮಕ್ಕಳ ಸಂತೆ ಸಹಕಾರಿಯಾಗಿದೆ. ವಿದ್ಯಾರ್ಥಿಗಳಿಗೆ ಕ್ರಿಯಾಶೀಲತೆ ಮತ್ತು ಸೃಜನಶೀಲತೆಯನ್ನು ಕಲಿಯಲು ಇದು ಬಹುದೊಡ್ಡ ವೇದಿಕೆಯಾಗಿದೆ ಎಂದರು.ಹೇಮಗಿರಿ ಬಿಜಿಎಸ್ ಶಾಖಾ ಮಠದ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ ಮಾತನಾಡಿ, ಬಿಜಿಎಸ್ ಸಂಸ್ಥೆ ಮಕ್ಕಳು ಬುದ್ದಿವಂತಿಕೆ ಹಾಳು ಮಾಡಿಕೊಳ್ಳದೆ ಅವರಲ್ಲಿರುವ ಆಸಕ್ತಿಯನ್ನು ಗುರುತಿಸಿ ಪ್ರೋತ್ಸಾಹಿಸಲು ಶಿಕ್ಷಣ ನೀಡುತ್ತಿದೆ ಎಂದರು.
ಮಕ್ಕಳ ಸಂತೆಯಲ್ಲಿ ವಿದ್ಯಾರ್ಥಿಗಳು ಚುರುಮುರಿ, ಬೇಲ್‌ಪುರಿ, ಒಗ್ಗರಣೆ ಅವಲಕ್ಕಿ, ಪಾನಿಪೂರಿ, ಸೌತೇಕಾಯಿ, ಹಣ್ಣಿನ ಜ್ಯೂಸ್, ಕುರುಕಲು ತಿಂಡಿಗಳು, ಸಿಹಿ ತಿನಿಸುಗಳು, ಮುಸುಕಿನ ಜೋಳ, ಚಿಪ್ಸ್, ದಹಿಪುರಿ, ಮಸಾಲ ಮಜ್ಜಿಗೆ, ರವೆ ಉಂಡೆ, ಜೋಳದ ರೊಟ್ಟಿ ಚಟ್ನಿಪುಡಿ, ಹೆಸರುಬೇಳೆ ಸೇರಿದಂತೆ ವಿವಿಧ ಬಗೆಯ ಆಹಾರದ ಮಳಿಗೆಗಳನ್ನು ಸ್ಥಾಪಿಸಿ ವ್ಯಾಪಾರ ಮಾಡಿ ಮೆಚ್ಚುಗೆಗೆ ಪಾತ್ರವಾದರು.ಕಾರ್ಯಕ್ರಮದಲ್ಲಿ ಸಮಾಜ ಸೇವಕ ಆರ್‌ಟಿಒ ಮಲ್ಲಿಕಾರ್ಜುನ್, ಟಿಎಪಿಸಿಎಂಎಸ್ ಅಧ್ಯಕ್ಷ ಟಿ.ಬಲದೇವ್, ಬಿಜಿಎಸ್ ಸಂಸ್ಥೆ ಆಡಳಿತ ಮಂಡಳಿ ನಿರ್ದೇಶಕರಾದ ಲಾಯರ್ ವಿಜಯಕುಮಾರ್, ಕಸಾಪ ಮಾಜಿ ಅಧ್ಯಕ್ಷರಾದ ಎಂ.ಕೆ.ಹರಿಚರಣತಿಲಕ್, ಕೆ.ಆರ್.ನೀಲಕಂಠ, ಮಾಜಿ ಕಾರ್ಯಾಧ್ಯಕ್ಷ ಬಳ್ಳೇಕೆರೆ ಮಂಜುನಾಥ್, ವೈದ್ಯರಾದ ಡಾ.ಕಾವ್ಯ, ಡಾ.ರಾಜೇಶ್ವರಿ, ತಾಲೂಕು ಬಿಜೆಪಿ ಅಧ್ಯಕ್ಷ ಸಾರಂಗಿ ನಾಗಣ್ಣ, ಪ್ರಾಂಶುಪಾಲ ಪ್ರಸಾದೇಗೌಡ, ಆಡಳಿತ ವಿಭಾಗದ ರಾಮಚಂದ್ರ, ಮುಖ್ಯ ಶಿಕ್ಷಕಿ ಶೃತಿ ಹಲವರು ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))