ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಬೇಕು: ಬಿಇಒ ಆರ್.ಎಸ್. ಸೀತಾರಾಮು

| Published : Jul 19 2024, 12:52 AM IST

ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಬೇಕು: ಬಿಇಒ ಆರ್.ಎಸ್. ಸೀತಾರಾಮು
Share this Article
  • FB
  • TW
  • Linkdin
  • Email

ಸಾರಾಂಶ

ಸೇವೆಗಳಲ್ಲಿ ವಿದ್ಯಾರ್ಜನೆಗಾಗಿ ಮಾಡುವ ದಾನಿಗಳ ಸೇವೆ ಬಲು ದೊಡ್ಡದಾಗಿದೆ. ಸಮಾಜವನ್ನು ಕಟ್ಟುವ ಕೆಲಸಕ್ಕೆ ವಿದ್ಯಾರ್ಥಿಗಳನ್ನು ಪ್ರೇರಕ ಶಕ್ತಿಯಾಗಿಸುವ ಅವಿರತ ಸಂಸ್ಥೆಯಂತೆ ದಾನಿಗಳು ಮುಂದೆ ಬರಬೇಕು. ಸರ್ಕಾರಿ ಶಾಲೆಗಳಲ್ಲಿ ನೈಜ್ಯ ಪ್ರತಿಭೆಗಳಿವೆ. ಗುರುತಿಸಿ ಮುಖ್ಯವಾಹಿನಿಗೆ ತರುವ ಕೆಲಸಕ್ಕೆ ಶಿಕ್ಷಕರು ಹುರಿದುಂಬಿಸಬೇಕು.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಮಕ್ಕಳಲ್ಲಿರುವ ಅಗಾಧವಾದ ಪ್ರತಿಭೆ, ಜ್ಞಾನ ಶಕ್ತಿಯನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವಾಗಬೇಕಿದೆ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಆರ್.ಎಸ್.ಸೀತಾರಾಮು ತಿಳಿಸಿದರು.

ಹೋಬಳಿಯ ಚುಜ್ಜಲಕ್ಯಾತನಹಳ್ಳಿ ಮತ್ತಿತರ ಗ್ರಾಮಗಳ ಸರ್ಕಾರಿ ಪ್ರೌಢಶಾಲೆ, ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿ ಅವಿರತ ಸಂಸ್ಥೆಯಿಂದ ಹಮ್ಮಿಕೊಳ್ಳಲಾಗಿದ್ದ ಉಚಿತ ನೋಟ್ ಬುಕ್ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.

ಸೇವೆಗಳಲ್ಲಿ ವಿದ್ಯಾರ್ಜನೆಗಾಗಿ ಮಾಡುವ ದಾನಿಗಳ ಸೇವೆ ಬಲು ದೊಡ್ಡದಾಗಿದೆ. ಸಮಾಜವನ್ನು ಕಟ್ಟುವ ಕೆಲಸಕ್ಕೆ ವಿದ್ಯಾರ್ಥಿಗಳನ್ನು ಪ್ರೇರಕ ಶಕ್ತಿಯಾಗಿಸುವ ಅವಿರತ ಸಂಸ್ಥೆಯಂತೆ ದಾನಿಗಳು ಮುಂದೆ ಬರಬೇಕು ಎಂದರು.

ಸರ್ಕಾರಿ ಶಾಲೆಗಳಲ್ಲಿ ನೈಜ್ಯ ಪ್ರತಿಭೆಗಳಿವೆ. ಗುರುತಿಸಿ ಮುಖ್ಯವಾಹಿನಿಗೆ ತರುವ ಕೆಲಸಕ್ಕೆ ಶಿಕ್ಷಕರು ಹುರಿದುಂಬಿಸಬೇಕು. ಅವಿರತ ಸಂಸ್ಥೆ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆ ಮಕ್ಕಳಿಗಾಗಿ 17 ವರ್ಷಗಳಿಂದ ಮಾಡುತ್ತಿರುವ ಕಾರ್ಯ ನಿರಂತರವಾಗಿರಲಿ ಎಂದರು.

ಅವಿರತ ಸಂಸ್ಥೆಯ ಗುರುಪ್ರಸಾದ್ ಮಾತನಾಡಿ, ಕೋವಿಡ್ ವೇಳೆಯಲ್ಲಿ ಮಕ್ಕಳಿಗೆ ಮೊಬೈಲ್ ಪಾಠ ಇಂದು ಕೆಟ್ಟ ಚಟವಾಗಿದೆ. ಮೊಬೈಲ್ ಓದುವ ಗೀಳಾಗುವ ಬದಲು ಚಾಟಿಂಗ್, ಗೇಮಿಂಗ್, ಟಿಕ್‌ಟಾಕ್ ಎನ್ನುವ ವಿನೋದಕ್ಕೆ ದುರ್ಬಳಕೆಯಾಗುತ್ತಿದೆ. ಆರೋಗ್ಯ, ಭವಿಷ್ಯಕ್ಕೆ ಮಾರಕವಾಗುತ್ತಿರುವ ಮೊಬೈಲ್, ಟಿವಿಯಿಂದ ಮಕ್ಕಳನ್ನು ದೂರವಿರಿಸಲು ಪೋಷಕರು ಮುಂದಾಗಬೇಕು ಎಂದರು.

ಪತ್ರಿಕೆ, ಪುಸ್ತಕ ಓದುವ ಅಭಿರುಚಿ ಮೂಡಿಸಿ ಮಕ್ಕಳೊಂದಿಗೆ ಪೋಷಕರು ಹೆಚ್ಚು ಬೆರೆತು ಸ್ನೇಹಮಯಿ ವಾತಾವರಣ ರೂಪಿಸಬೇಕು. ಶಿಕ್ಷಕರು ಮಕ್ಕಳಲ್ಲಿ ಮೌಲ್ಯಧಾರಿತ, ಸಂಸ್ಕಾರಯುತ ಶಿಕ್ಷಣದ ಬೀಜ ಬಿತ್ತಿ ಆತ್ಮಸ್ಥೈರ್ಯವನ್ನು ಗಟ್ಟಿಗೊಳಿಸಬೇಕು ಎಂದು ವಿನಂತಿಸಿದರು.

ನಂತರ ತೆಂಗಿನಘಟ್ಟ, ಕೋಟಹಳ್ಳಿ, ಕಾಳೇನಹಳ್ಳಿ, ಚುಜ್ಜಲಕ್ಯಾತನಹಳ್ಳಿ ಗ್ರಾಮಗಳ ಸರ್ಕಾರಿ ಶಾಲೆ ಮಕ್ಕಳಿಗೆ ನೋಟ್‌ಬುಕ್ ವಿತರಿಸಲಾಯಿತು. ಅವಿರತ ಗುರುಪ್ರಸಾದ್, ಮುಖಂಡ ಮಲ್ಲೇಶ್, ಕಾಳೇಗೌಡ, ಚಿನ್ನೇನಹಳ್ಳಿ ತಿಲಕ್, ಶಿಕ್ಷಕರಾದ ಜಿ.ಎಸ್.ಮಂಜು, ದಯಾನಂದ್, ನಟರಾಜು, ಕುಮಾರಸ್ವಾಮಿ, ರಮೇಶ್, ಲವಣ್ಣ, ನಟರಾಜು, ವರಲಕ್ಷ್ಮಿ, ರುಕ್ಮಿಣಿ, ಲಲಿತಾ, ನೇತ್ರಾ ಮುಂತಾದವರು ಉಪಸ್ಥಿತರಿದ್ದರು.