ಸಾರಾಂಶ
- ಸಿದ್ಧಗಂಗಾ ವಿದ್ಯಾಸಂಸ್ಥೆ ವಾರ್ಷಿಕ ಸಂಭ್ರಮಾಚರಣೆಯಲ್ಲಿ ಡಾ. ಸಿ.ಆರ್.ಚಂದ್ರಶೇಖರ್
- - - ಕನ್ನಡಪ್ರಭ ವಾರ್ತೆ ದಾವಣಗೆರೆಶಿಸ್ತು, ಪ್ರೀತಿಯನ್ನು ಅಳವಡಿಸಿಕೊಂಡರೆ ಸಾಧನೆಯ ಹಾದಿ ಸುಲಭ ಎಂಬುದನ್ನು ಪ್ರತಿಯೊಂದು ಮಗುವೂ ಮನನ ಮಾಡಿಕೊಂಡು, ಓದಿನ ಕಡೆಗೆ ಗಮನ ಕೇಂದ್ರೀಕರಿಸಬೇಕು ಎಂದು ಮನೋವೈದ್ಯ, ಪದ್ಮಶ್ರೀ ಡಾ. ಸಿ.ಆರ್. ಚಂದ್ರಶೇಖರ ಹೇಳಿದರು.
ನಗರದ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ 55ನೇ ವಾರ್ಷಿಕ ಸಂಭ್ರಮಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ತಾವು ಹೇಳಿದ್ದನ್ನು ಕೊಡಿಸದ ತಂದೆ, ತಾಯಿ ಮೇಲೆ ಸಿಟ್ಟು ಮಾಡುವುದು, ರೇಗುವುದನ್ನು ಮಕ್ಕಳು ಮಾಡಬಾರದು. ಆರ್ಥಿಕ ಸಂಕಷ್ಟವಿದ್ದಾಗ ಪಾಲಕರಿಗೆ ಕೇಳಿದ್ದನ್ನೆಲ್ಲಾ ಕೊಡಿಸಲು ಸಾಧ್ಯವಾಗದು. ಇದನ್ನು ಮಕ್ಕಳು ಅರಿತು, ಶಾಂತಿಚಿತ್ತರಾಗಿ ನಡೆದುಕೊಳ್ಳಬೇಕಿದೆ ಎಂದರು.ನ್ಯಾಷನಲ್ ಕ್ರೈಂ ರಿಪೋರ್ಟ್ ಬ್ಯೂರೋ ವರದಿ ಅನ್ವಯ ನಿಮಿಷಕ್ಕೊಬ್ಬರು ಹಾಗೂ ಗಂಟೆಗೊಬ್ಬ ವಿದ್ಯಾರ್ಥಿ, ಕೋಪ, ಆತಂಕಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಪೋಷಕರು, ಗುರು, ಹಿರಿಯರು ಮತ್ತು ಸಹಪಾಠಿಗಳೊಂದಿಗೆ ಪ್ರೀತಿ, ವಿಶ್ವಾಸದಿಂದ ಮಾತನಾಡುವುದನ್ನು ರೂಢಿಸಿಕೊಳ್ಳಬೇಕು. ಕೋಪಗೊಳ್ಳುವಿಕೆ ಕಡಿಮೆ ಮಾಡಿಕೊಳ್ಳಬೇಕು. ಹೀಗಾದಾಗ ಜೀವನದಲ್ಲಿ ಏನನ್ನು ಸಾಧಿಸಬೇಕೆಂದ ಕನಸು ಕಂಡಿದ್ದೀರೋ, ಅದನ್ನು ಸಾಧಿಸಲು ಸಾಧ್ಯ ಎಂದು ತಿಳಿಸಿದರು.
ಬಾಪೂಜಿ ಪ್ರೌಢಶಾಲೆ ನಿವೃತ್ತ ನಿರ್ದೇಶಕ, ಶಿಕ್ಷಣ ಸಂತರೆಂದೇ ಹೆಸರಾದ ಕೆ.ಇಮಾಂ ಅವರಿಗೆ ಸಿದ್ಧಗಂಗಾ ಸಂಸ್ಥೆ ಸಂಸ್ಥಾಪಕ ಶಿಕ್ಷಣ ಶಿಲ್ಪಿ ಎಂ.ಎಸ್. ಶಿವಣ್ಣನವರ ಸ್ಮರಣಾರ್ಥ ಕೊಡಲಾಗುವ ''''''''ಎಂ.ಎಸ್.ಎಸ್ ಸ್ಮಾರಕ ಪ್ರಶಸ್ತಿ ಪ್ರದಾನ ಮಾಡಲಾಯಿತು, ಸಂಸ್ಥೆಯ ''''''''ಎಂ.ಎಸ್.ಎಸ್ ಕ್ರೀಡಾ ರತ್ನ'''''''' ಪ್ರಶಸ್ತಿಯನ್ನು ಎಂ.ಕೆ.ಅಭಿಷೇಕ್ಎಂ, ಪ್ರೌಢಶಾಲೆ ಉತ್ತಮ ವಿದ್ಯಾರ್ಥಿನಿ ಪ್ರಶಸ್ತಿಯನ್ನು ಕೆ.ಪಿ.ಯಶಸ್ವಿನಿ ಅವರಿಗೆ ಪ್ರದಾನ ಮಾಡಿ, ಗೌರವಿಸಲಾಯಿತು.ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿಸೌಜ, ಕಾರ್ಯದರ್ಶಿ ಡಿ.ಎಸ್.ಹೇಮಂತ್, ನಿರ್ದೇಶಕ ಡಾ. ಡಿ.ಎಸ್. ಜಯಂತ್, ಕಾಲೇಜು ಪ್ರಾಚಾರ್ಯರಾದ ವಾಣಿಶ್ರೀ, ಸಿಬಿಎಸ್ಇ ಪ್ರಾಚಾರ್ಯರಾದ ಗಾಯತ್ರಿ ಚಿಮ್ಮಡ್, ಪ್ರೌಢಶಾಲೆ ಮುಖ್ಯ ಶಿಕ್ಷಕಿ ಕೆ.ಎಸ್.ರೇಖಾರಾಣಿ ಇತರರು ಉಪಸ್ಥಿತರಿದ್ದರು. ನಂತರ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನಡೆದರು.
- - -ಕೋಟ್ ಪ್ರತಿಯೊಂದು ಸನ್ನಿವೇಶ, ಸಂದರ್ಭ, ಪರಿಸ್ಥಿತಿಯಲ್ಲೂ ನಾವು ಶಾಂತ ಚಿತ್ತರಾಗಿದ್ದರೆ ನಮ್ಮ ಬುದ್ಧಿವಂತಿಕೆ ಆಚೆ ಬರುತ್ತದೆ. ಆದರೆ, ದೇಶದಲ್ಲಿ ಶಾಂತಿ ಕಡಿಮೆಯಾಗುತ್ತಿದ್ದು, ದೊಡ್ಡವರು ಎನಿಸಿಕೊಂಡವರೆ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಮಕ್ಕಳು ಪ್ರೀತಿ ಮತ್ತು ಶಾಂತಿಯನ್ನು ಸೃಷ್ಟಿ ಮಾಡಬೇಕು
- ಡಾ. ಸಿ.ಆರ್.ಚಂದ್ರಶೇಖರ, ಮನೋವೈದ್ಯ- - - -25ಕೆಡಿವಿಜಿ10:
ದಾವಣಗೆರೆಯ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ 55ನೇ ವಾರ್ಷಿಕ ಸಂಭ್ರಮಾಚರಣೆಯಲ್ಲಿ ಮನೋವೈದ್ಯ ಪದ್ಮಶ್ರೀ ಡಾ. ಸಿ.ಆರ್. ಚಂದ್ರಶೇಖರ ಅವರಿಗೆ ಗೌರವಿಸಲಾಯಿತು.