ಮಕ್ಕಳಿಗೆ ಶಿಸ್ತು, ಸಂಸ್ಕಾರ ತಿಳಿಸಬೇಕು: ಮಡೇನಹಳ್ಳಿ ಸ್ವಾಮೀಜಿ

| Published : Aug 04 2024, 01:16 AM IST

ಮಕ್ಕಳಿಗೆ ಶಿಸ್ತು, ಸಂಸ್ಕಾರ ತಿಳಿಸಬೇಕು: ಮಡೇನಹಳ್ಳಿ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳಿಗೆ ಶಿಸ್ತು, ಸಂಸ್ಕಾರ, ಆಚಾರ, ವಿಚಾರ ಹಾಗೂ ಧರ್ಮದ ಬಗ್ಗೆ ತಿಳಿ ಹೇಳುವ ಕೆಲಸವನ್ನು ಪಾಲಕರು ಮಾಡಬೇಕು. ತಿಯೊಬ್ಬರೂ ಧರ್ಮ ಉಳಿಸುವ ಕೆಲಸ ಮಾಡಬೇಕು. ಧರ್ಮ ಉಳಿದರೆ ಮಾತ್ರ ನಾವು ಉಳಿಯಲು ಸಾಧ್ಯ.

ಕನ್ನಡಪ್ರಭ ವಾರ್ತೆ ಮದ್ದೂರು

ಮಕ್ಕಳಿಗೆ ಶಿಸ್ತು, ಸಂಸ್ಕಾರ, ಆಚಾರ, ವಿಚಾರ ಹಾಗೂ ಧರ್ಮದ ಬಗ್ಗೆ ತಿಳಿ ಹೇಳುವ ಕೆಲಸವನ್ನು ಪಾಲಕರು ಮಾಡಬೇಕು ಎಂದು ಮಡೇನಹಳ್ಳಿ ಮಠದ ಸದಾಶಿವ ಸ್ವಾಮೀಜಿ ತಿಳಿಸಿದರು.

ಪಟ್ಟಣದ ಕೇಂಬ್ರಿಡ್ಜ್ ಸ್ಕೂಲ್‌ನಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕಕ್ಕೆ ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಚುನಾವಣಾ ಪತ್ರ ನೀಡಿ ಮಾತನಾಡಿ, ಪ್ರತಿಯೊಬ್ಬರೂ ಧರ್ಮ ಉಳಿಸುವ ಕೆಲಸ ಮಾಡಬೇಕು. ಧರ್ಮ ಉಳಿದರೆ ಮಾತ್ರ ನಾವು ಉಳಿಯಲು ಸಾಧ್ಯ ಎಂದರು.

ಸಮಾರಂಭದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಘಟಕದ ಅಧ್ಯಕ್ಷ ಕೆಸ್ತೂರು ಗ್ರಾಮದ ಸಿ.ಜಿ.ಗೌರಿಶಂಕರ್, ನಿದೇಶಕರಾದ ಮದ್ದೂರಿನ ಪಿ.ರಾಜಶೇಖರ್, ಎಂ.ವೀರಭದ್ರಸ್ವಾಮಿ, ಎಚ್.ಬಿ.ಸ್ವಾಮಿ, ಕೆ.ಶಿವಕುಮಾರ್, ಬೂದಗುಪ್ಪೆ ಬಿ.ಎಸ್.ಬಸವಲಿಂಗಶಾಸ್ತ್ರಿ, ಎಸ್.ಮರಿಲಿಂಗಪ್ಪ, ಬೆಸಗರಹಳ್ಳಿ ಬಿ.ಎಸ್.ನಾಗರಾಜು, ದೊಡ್ಡ ಅರಸಿನಕೆರೆ ಡಿ.ಎಂ.ರವಿಕುಮಾರ್, ಅಣ್ಣೂರು ಆರ್.ಸಿದ್ದಪ್ಪ, ಭಾರತೀನಗರ ಕೆ.ಎಸ್.ಸಿದ್ದೇಶ್ವರ್, ಕಾಡುಕೊತ್ತನಹಳ್ಳಿ ದಯಾನಂದ್, ಎಸ್.ಐ.ಹೊನ್ನಲಗೆರೆ ಎಚ್.ಆರ್.ರೇವಣ್ಣ ಸ್ವಾಮಿ, ಬಿದರಕೋಟೆ ಯೋಗೇಶ್ ಹಾಗೂ ಮಹಿಳಾ ನಿರ್ದೇಶಕರಾದ ಶಿವಪುರ ಶಿಲ್ಪಶ್ರೀ, ಭಾರತೀನಗರ ಜೆ.ಕವಿತಾ, ಮಡೇನಹಳ್ಳಿ ಎಂ.ಎಸ್.ನೇತ್ರಾವತಿ, ಕೆ.ಹೊನ್ನಲಗೆರೆ ಎಂ.ಎಸ್.ಮಂಜುಳಾ, ಭೀಮನಕೆರೆ ಶಶಿಕಲಾ, ಎಸ್.ಐ.ಹೊನ್ನಲಗೆರೆ ನಿಲಾಂಬಿಕ ಹಾಗೂ ತಗ್ಗಹಳ್ಳಿ ಶಿವಕುಮಾರಿ ಹಾಗೂ ಜಿಲ್ಲಾ ನಿರ್ದೇಶಕ ಬಿ.ವಿ.ಮಂಜುನಾಥ್ ಅವರನ್ನು ಅಭಿನಂದಿಸಲಾಯಿತು.

ಎಸ್.ಐ.ಹೊನ್ನಗೆರೆ ಮಠದ ಶಿವಲಿಂಗ ಶಿವಚಾರ್ಯ ಮಹಾಲಿಂಗ ಸ್ವಾಮೀಜಿ, ಮಹಾಸಭಾದ ತಾಲೂಕು ಅಧ್ಯಕ್ಷ ಸಿ.ಜಿ.ಗೌರಿಶಂಕರ್ ಮಾತನಾಡಿದರು. ಚುನಾವಣಾಧಿಕಾರಿ ಚಂದ್ರಶೇಖರಪ್ಪ, ಮುಖಂಡರಾದ ಶಿವಮಲ್ಲಪ್ಪ, ಬಸವರಾಜಪ್ಪ, ಎಲ್ಐಸಿ ವೀರಣ್ಣ, ಶ್ರೀನಾಥ್, ಹೋಂಡಾ ಮಹೇಶ್, ಕಾರ್ಕಳ್ಳಿ ಗಿರೀಶ್, ರವಿಕುಮಾರ್ ಇದ್ದರು.ಮಂಜುನಾಥಗೌಡ ಆಡಳಿತ ಮಂಡಳಿ ಅಧ್ಯಕ್ಷರಾಗಿ ನೇಮಕ

ನಾಗಮಂಗಲ: ತಾಲೂಕಿನ ಬಿ.ಶೆಟ್ಟಹಳ್ಳಿಯ ಎಸ್.ಆರ್. ಮಂಜುನಾಥಗೌಡ ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಆಡಳಿತ ಮಂಡಳಿ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.ಮಂಡ್ಯ ಜಿಲ್ಲಾ ಕೃಷಿಕ ಸಮಾಜದಿಂದ ರಾಜ್ಯ ಪ್ರತಿನಿಧಿಯಾಗಿದ್ದ ಎಸ್.ಆರ್. ಮಂಜುನಾಥಗೌಡರನ್ನು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರ ಆದೇಶದ ಮೇರೆಗೆ ಕರ್ನಾಟಕ ಪ್ರದೇಶ ಕೃಷಿ ಸಮಾಜದ ರಾಜ್ಯಾಧ್ಯಕ್ಷರನ್ನಾಗಿ ನೇಮಕಗೊಳಿಸಿ ರಾಜ್ಯ ಕೃಷಿಕ ಸಮಾಜದ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

ಅಧ್ಯಕ್ಷರಾಗಿ ನೇಮಕಗೊಂಡಿರುವ ಎಸ್.ಆರ್.ಮಂಜುನಾಥಗೌಡ, ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಮತ್ತು ಮಾಜಿ ಶಾಸಕ ಸುರೇಶ್‌ಗೌಡ ಬೆಂಬಲಿತರಾಗಿ ಹಲವು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದರು. ಇತ್ತೀಚೆಗೆ ಸಂಸತ್ ಚುನಾವಣೆ ವೇಳೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಪರ ಸಕ್ರಿಯವಾಗಿದ್ದರು. ತಾಲೂಕು ಕೃಷಿಕ ಸಮಾಜದ ಅಧ್ಯಕ್ಷರಾಗಿದ್ದ ಎಸ್.ಆರ್. ಮಂಜುನಾಥ್‌ಗೌಡ ರೈತ ಪರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಕೃಷಿಕ ಸಮಾಜದ ಚಟುವಟಿಕೆಗಳ ಬಗ್ಗೆ ಆಸಕ್ತಿ ಹೊಂದಿರುವ ಎಸ್.ಆರ್.ಮಂಜುನಾಥಗೌಡರಿಗೆ ಸರ್ಕಾರಿ ಕಾರು ಮತ್ತು ಒಂದು ಕಚೇರಿಯನ್ನು ಸಹ ನೀಡಲಾಗಿದೆ. ಇದು ರಾಜ್ಯ ಮಟ್ಟದ ಹುದ್ದೆಯಾಗಿದೆ. ಮಂಜುನಾಥಗೌಡರ ಆಯ್ಕೆಯನ್ನು ಜಿಲ್ಲಾ ಹಾಗೂ ತಾಲೂಕು ಕೃಷಿಕ ಸಮಾಜದ ಪದಾಧಿಕಾರಿಗಳು ಸ್ವಾಗತಿಸಿದ್ದಾರೆ. ನೇಮಕಗೊಳಿಸಿದ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರನ್ನು ಅಭಿನಂದಿಸಿದ್ದಾರೆ.