ಸಾರಾಂಶ
ಚಿಕ್ಕಮಗಳೂರು, ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರವನ್ನೂ ಕಲಿಸದಿದ್ದರೆ ಏನಾಗುತ್ತದೆ ಎಂಬುವುದಕ್ಕೆಇತ್ತೀಚೆಗೆ ದೆಹಲಿಯಲ್ಲಿ ನಡೆದ ವಿದ್ವಂಸಕ ಕೃತ್ಯವೇ ನಿದರ್ಶನ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿ ನುಡಿದರು.
- ಸಂಸ್ಕಾರ ವಿಲ್ಲದಿದ್ದರೆ ಸಮಾಜಘಾತಕರಾಗುವ ಆತಂಕ । ಸಂಜೀವಿನಿ ವಿದ್ಯಾಸಂಸ್ಥೆ ವಾರ್ಷಿಕೋತ್ಸವ,
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರವನ್ನೂ ಕಲಿಸದಿದ್ದರೆ ಏನಾಗುತ್ತದೆ ಎಂಬುವುದಕ್ಕೆಇತ್ತೀಚೆಗೆ ದೆಹಲಿಯಲ್ಲಿ ನಡೆದ ವಿದ್ವಂಸಕ ಕೃತ್ಯವೇ ನಿದರ್ಶನ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿ ನುಡಿದರು.ನಗರದ ಸಂಜೀವಿನಿ ವಿದ್ಯಾ ಸಂಸ್ಥೆಯಲ್ಲಿ ಶುಕ್ರವಾರ ನಡೆದ ವಾರ್ಷಿಕೋತ್ಸವ ಉದ್ಘಾಟಿಸಿ ಆಶೀರ್ವಚನ ನೀಡಿದರು. ಜೀವ ಉಳಿಸಬೇಕಾದ ವೈದ್ಯರೇ ದೆಹಲಿಯಲ್ಲಿ ವಿದ್ವಂಸಕ ಕೃತ್ಯ ನಡೆಸುವ ಮೂಲಕ ಜನರ ಪ್ರಾಣ ತೆಗೆಯುವ ಕೆಲಸ ಮಾಡಿದ್ದಾರೆ. ಇದಕ್ಕೆ ಮೂಲ ಕಾರಣ ಆ ವೈದ್ಯರಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿಸದಿರುವುದು ಎಂದ ಅವರು ವಿದ್ಯಾವಂತರೇ ವಿದ್ವಂಸಕ ಕೃತ್ಯಗಳನ್ನು ನಡೆಸಿದರೆ ಅವರು ಕಲಿತ ವಿದ್ಯೆಗೆ ಏನು ಬೆಲೆ ಬಂತು ಎಂದು ವಿಷಾದಿಸಿದ ಶ್ರೀಗಳು, ಸಂಸ್ಕಾರವಿಲ್ಲದ ವಿದ್ಯೆ, ಸಂಸ್ಕಾರ ನೀಡದ ಶಿಕ್ಷಣದಿಂದ ಹೀಗಾಗುತ್ತದೆ ಎಂದು ಪ್ರತಿಪಾದಿಸಿದರು.
ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿಸದಿರುವುದರಿಂದ ಅವರು ಸಮಾಜಘಾತಕರಾಗಿ ಬೆಳೆಯುತ್ತಿದ್ದಾರೆ. ವಿದ್ಯಾವಂತರೇ ವಿದ್ವಂಸಕ ಕೃತ್ಯಗಳನ್ನು ನಡೆಸುತ್ತಾ ಅಪರಾಧಗಳಲ್ಲಿ ಭಾಗಿಯಾಗುತ್ತಿದ್ದಾರೆ. ಇದರಿಂದಾಗಿ ದೇಶದಲ್ಲಿ ಅಪರಾಧಗಳ ದಿನೇ ದಿನೇ ಸಂಖ್ಯೆ ಹೆಚ್ಚುತ್ತಿದೆ ಎಂದು ವಿಷಾದಿಸಿದರು.ಜನತೆ ರಾಕ್ಷಸರಾಗಬಾರದು. ಸಾಕ್ಷರರಾಗಬೇಕು. ರಾಷ್ಟ್ರಭಕ್ತಿ, ದೇಶಪ್ರೇಮ, ಪ್ರೀತಿ, ಪ್ರೇಮ, ಸ್ನೇಹ, ವಿಶ್ವಾಸ ಮೈಗೂಡಿಸಿಕೊಳ್ಳಬೇಕು. ನಾವು ಕಲಿತ ವಿದ್ಯೆ ಸಮಾಜಕ್ಕೆ, ದೇಶಕ್ಕೆ ಉಪಯೋಗವಾಗಬೇಕು. ಕಂಟಕವಾಗಬಾರದು ಎಂದು ಕಿವಿಮಾತು ಹೇಳಿದರು.ಮಕ್ಕಳೇ ಈ ದೇಶದ ಭವಿಷ್ಯ, ಅವರೇ ಮುಂದೆ ರಾಷ್ಟ್ರವನ್ನು ಮುನ್ನಡೆಸಬೇಕಾದವರು. ಅವರಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿಸುವುದು ಅತ್ಯಗತ್ಯ. ಸಂಸ್ಕಾರ ಕಲಿಸದ ಶಿಕ್ಷಣ ವ್ಯರ್ಥ ಎಂದು ಬಲವಾಗಿ ಅಭಿಪ್ರಾಯಪಟ್ಟ ಸ್ವಾಮೀಜಿ, ಈ ನಿಟ್ಟಿನಲ್ಲಿ ವಿದ್ಯಾಸಂಸ್ಥೆಗಳು ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರವನ್ನೂ ಕಲಿಸಬೇಕು. ಅವರಲ್ಲಿ ರಾಷ್ಟ್ರ ಭಕ್ತಿ, ದೇಶ ಪ್ರೇಮ ಬೆಳೆಸಬೇಕು ಎಂದು ಹೇಳಿದರು.ಸಂಜೀವಿನಿ ವಿದ್ಯಾ ಸಂಸ್ಥೆ ಖಾಸಗೀ ಸಂಸ್ಥೆ, ಆದರೆ ವ್ಯಾಪಾರಿ ಸಂಸ್ಥೆಯಲ್ಲ, 43 ವರ್ಷಗಳಿಂದ ವಿದ್ಯಾದಾನ ಮಾಡುತ್ತಿರುವ ಈ ಸಂಸ್ಥೆ, ಸುವರ್ಣ ಮಹೋತ್ಸವದ ಹೊತ್ತಿಗೆ ಇನ್ನಷ್ಟು ಬೆಳೆಯಲಿ ಎಂದು ಆಶೀರ್ವದಿಸಿದರು.ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿ, ವಿದ್ಯಾಸಂಸ್ಥೆಗಳು ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಸಂಸ್ಕಾರ ವನ್ನೂ ಕಲಿಸಬೇಕು. ಅವರನ್ನು ಬರೀ ಅಂಕಗಳಿಸುವ ಯಂತ್ರಗಳನ್ನಾಗಿಸದೆ ಅವರಲ್ಲಿ ಆತ್ಮವಿಶ್ವಾಸ ಬೆಳೆಸಬೇಕು. ಬದುಕು, ಸಮಸ್ಯೆ ಮತ್ತು ಪರಿಸ್ಥಿತಿಯನ್ನು ಸವಾಲಾಗಿ ಸ್ವೀಕರಿಸಿ ಎದುರಿಸುವ ಮನೋಭಾವ ಬೆಳೆಸಬೇಕು ಎಂದು ಕಿವಿ ಮಾತು ಹೇಳಿದರು.ಮಕ್ಕಳನ್ನು ಬರೀ ಅಂಕಗಳಿಸುವ ಯಂತ್ರಗಳನ್ನಾಗಿಸಿದರೆ ಅವರು ಫಸ್ಟ್ ರಾಂಕ್ ರಾಜು ಸಿನಿಮಾದ ಹೀರೋತರ ಸಾಮಾನ್ಯ ಜ್ಞಾನವಿಲ್ಲದವರಂತಾಗುತ್ತಾರೆ ಎಂದು ಎಚ್ಚರಿಸಿದರು. ಹಾಗಾಗಿ ಮಕ್ಕಳಿಗೆ ಸಾಮಾನ್ಯ ಜ್ಞಾನವನ್ನೂ ಕಲಿಸಬೇಕು ಎಂದು ಸಲಹೆ ಮಾಡಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆ ಅಧ್ಯಕ್ಷೆ ಎಸ್. ಶಾಂತಕುಮಾರಿ 1982 ರಲ್ಲಿ ಆರಂಭಗೊಂಡ ಸಂಜೀವಿನಿ ವಿದ್ಯಾ ಸಂಸ್ಥೆ ಕಳೆದ 43 ವರ್ಷಗಳಿಂದ ನಿರಂತರವಾಗಿ ವಿದ್ಯಾದಾನ ಮಾಡುತ್ತಿದೆ. ದಾನಿಗಳ ನೆರವು ಮತ್ತು ಸಹಕಾರದಿಂದ ಸಂಸ್ಥೆಯನ್ನುಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿಸಿದರು.ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ತಿಮ್ಮರಾಜು ಮಾತನಾಡಿದರು, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸಮಾರಂಭದಲ್ಲಿ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು, ಸಂಸ್ಥೆ ಚಿಗುರು ವಾರ್ಷಿಕ ಸಂಚಿಕೆ ಬಿಡುಗಡೆಗೊಳಿಸಲಾಯಿತು.ಸಂಜೀವಿನಿ ವಿದ್ಯಾಸಂಸ್ಥೆ ಉಪಾಧ್ಯಕ್ಷ ಪಿ.ಕೆ.ಶ್ರೀಕಾಂತ್, ಕಾರ್ಯದರ್ಶಿ ಎಂ.ಪಿ.ಉಡುಪ, ಖಜಾಂಚಿ ಗೋಪಿನಾಥ್, ಆಡಳಿತ ಮಂಡಳಿ ಸದಸ್ಯರಾದ ಲೀಲಾಧರ್ ಪಟೇಲ್, ಗೋಪಿನಾಥ್ ಆಡಳಿತ, ಸುಮಂತ್, ಮಲ್ಲಿಕಾರ್ಜುನರಾವ್, ರಂಗನಾಥ್, ಸಿದ್ದಲಿಂಗೇಶ್ವರ, ಪ್ರಾಂಶುಪಾಲೆ ಎಸ್.ಆರ್. ಹೇಮಾ, ಮುಖ್ಯ ಶಿಕ್ಷಕಿ ಕುಮುದಾ ಎಂ. ಕಿಣಿ, ವಿದ್ಯಾರ್ಥಿಗಳಾದ ವೈ.ಎಸ್. ಸೇವಂತಿಕ, ಡಿ. ಎ. ವರಲಕ್ಷ್ಮಿ, ಕೆ.ಆರ್. ಧನ್ಯಶ್ರೀಉಪಸ್ಥಿತರಿದ್ದರು. 22 ಕೆಸಿಕೆಎಂ 1
ಚಿಕ್ಕಮಗಳೂರಿನ ಸಂಜೀವಿನಿ ವಿದ್ಯಾ ಸಂಸ್ಥೆಯಲ್ಲಿ ಶುಕ್ರವಾರ ನಡೆದ ವಾರ್ಷಿಕೋತ್ಸವವನ್ನು ಪೇಜಾವರ ಮಠಾಧೀಶ ಶ್ರೀ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿ ಉದ್ಘಾಟಿಸಿದರು. ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ, ಶಾಂತಕುಮಾರಿ, ಶ್ರೀಕಾಂತ್, ಎಂ.ಪಿ. ಉಡುಪ ಇದ್ದರು.;Resize=(128,128))
;Resize=(128,128))
;Resize=(128,128))
;Resize=(128,128))