ತರೀಕೆರೆಮಕ್ಕಳು ನಾಯಕತ್ವದ ಗುಣಗಳನ್ನು ಈಗಿನಿಂದಲೇ ಬೆಳಸಿಕೊಳ್ಳಬೇಕು ಎಂದು ಶಾಲಾ ಸಂಸತ್ ಚುನಾವಣೆ ಉಸ್ತುವಾರಿ, ಶಿಕ್ಷಕಿ ಮಂಜುಳ ಮಲ್ಲಿಗವಾಡ ಹೇಳಿದರು.

ನೇರಲಕೆರೆ ಶ್ರೀ ಅಮೃತೇಶ್ವರ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್‌ನ ಮಂತ್ರಿ ಮಂಡಲ ರಚನೆ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ತರೀಕೆರೆ

ಮಕ್ಕಳು ನಾಯಕತ್ವದ ಗುಣಗಳನ್ನು ಈಗಿನಿಂದಲೇ ಬೆಳಸಿಕೊಳ್ಳಬೇಕು ಎಂದು ಶಾಲಾ ಸಂಸತ್ ಚುನಾವಣೆ ಉಸ್ತುವಾರಿ, ಶಿಕ್ಷಕಿ ಮಂಜುಳ ಮಲ್ಲಿಗವಾಡ ಹೇಳಿದರು.

ನೇರಲಕೆರೆ ಶ್ರೀ ಅಮೃತೇಶ್ವರ ಪ್ರೌಢ ಶಾಲೆಯಿಂದ ನಡೆದ ಸಂಸತ್‌ನ ಮಂತ್ರಿಮಂಡಲ ರಚನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಕ್ಕಳು ನಾಯಕತ್ವದ ಗುಣವನ್ನು ಇಂತಹ ಶಾಲಾ ಹಂತದ ಚುನಾವಣೆಗಳ ಮೂಲಕ ಗಳಿಸಿ ಕೊಳ್ಳಬಹುದು. ಶಿಸ್ತು ಮತ್ತು ಸಂಸ್ಕಾರದಂತಹ ಗುಣಗಳು ಕೂಡ ಮಕ್ಕಳಲ್ಲಿ ಮೇಳೈಸಲು ಇಂತಹ ಚುನಾವಣೆ ಕಾರಣ. ಇಂದು ಮಕ್ಕಳಿಗೆ ಖಾತೆಗಳನ್ನು ಹಂಚುತ್ತಿದ್ದು, ಅವುಗಳನ್ನು ಯಶಸ್ವಿಯಾಗಿ ಮತ್ತು ಅರ್ಥಪೂರ್ಣವಾಗಿ ಅನುಷ್ಠಾನಕ್ಕೆ ತರುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಾಲಾ ಸಂಸತ್ ಚುನಾವಣೆಯಲ್ಲಿ ವಿಜೇತರಾದ 8, 9, ಮತ್ತು 10ನೇ ತರಗತಿ ಮಕ್ಕಳಿಗೆ ಹಲವಾರು ಖಾತೆ ಹಂಚಿ, ಅವರು ನಿರ್ವಹಿಸಬೇಕಾದ ಜವಾಬ್ದಾರಿ ತಿಳಿಸಲಾಯಿತು.

ಶಾಲಾ ಪ್ರಧಾನ ಮಂತ್ರಿಯಾಗಿ ಭವ್ಯ ಈ. ಎಚ್, ಉಪಪ್ರಧಾನ ಮಂತ್ರಿಯಾಗಿ ರೇಖಾ ಟಿ, ಶಿಕ್ಷಣ ಮಂತ್ರಿಯಾಗಿ ಉಷಾ, ವಾರ್ತಾ ಸಚಿವರಾಗಿ ಕವನ ಎನ್, ಶಾಲಾ ಸ್ವಚ್ಛತೆ ಮಂತ್ರಿಯಾಗಿ ಲಾವಣ್ಯ ಕೆ ಎ, ಶಾಲಾ ಶಿಸ್ತು ಸಚಿವರಾಗಿ ಸಿಂಚನ ಪಿ. ಎ, ಕ್ರೀಡಾ ಸಚಿವರಾಗಿ ವಂದನ ಎನ್, ಸಾಂಸ್ಕೃತಿಕ ಮಂತ್ರಿಯಾಗಿ ಲೇಖನ ಡಿ ಎಲ್, ಗ್ರಂಥಾಲಯ ಸಚಿವರಾಗಿ ಮೋನಿಷ ಜಿ ಎಂ, ಶಾಲಾ ವಿಜ್ಞಾನ ಮತ್ತು ಪ್ರಯೋಗಾಲಯ ಮಂತ್ರಿಯಾಗಿ ಪರಿಣಿತ ಎ, ಆಹಾರ ಮಂತ್ರಿ ಯಾಗಿ ಮಾನಸ, ಆರೋಗ್ಯ ಮಂತ್ರಿಯಾಗಿ ನಮಿತ ಎ ಎನ್, ತೋಟಗಾರಿಕಾ ಮಂತ್ರಿಯಾಗಿ ಸಂಜನ ಎಸ್, ಪ್ರವಾಸ ಮಂತ್ರಿಯಾಗಿ ಹೇಮಂತ್ ಎನ್ ಎನ್ ರನ್ನು ಆಯ್ಕೆ ಮಾಡಲಾಯಿತು.

ಈ ಚುನಾವಣೆ ಮುಖ್ಯ ಚುನಾವಣಾಧಿಕಾರಿಯಾಗಿ ಶಾಲಾ ಮುಖ್ಯ ಶಿಕ್ಷಕ ಹಾಲೇಶ್ ಕೆ ಟಿ, ಮತದಾರದ ಸಾಕ್ಷರತಾ ಕ್ಲಬ್‌ನ ಸಂಚಾಲಕರಾಗಿ ಮಂಜುಳ ಮಲ್ಲಿಗವಾಡ, ಮತದಾನ ಪ್ರಕ್ರಿಯೆ ವಿವಿಧ ಅಧಿಕಾರಿಗಳಾಗಿ ಖಿಜರ್‌ಖಾನ್, ಪಂಚಾ ಕ್ಷರಪ್ಪ ಎಚ್, ರಮಾಕಾಂತ್ ಜೆ, ವೀಣಾ ಎಸ್, ಸತೀಶ್ ನಂದಿಹಳ್ಳಿ, ಪ್ರಭಾಕರ್ ಎ ಹೆಚ್ ಅವರು ತಮ್ಮ ಕರ್ತವ್ಯ ನಿರ್ವಹಿಸಿದರು.

-

22ಕೆಟಿಆರ್.ಕೆ.1ಃ ತರೀಕೆರೆ ಸಮೀಪದ ನೇರಲಕೆರೆ ಶ್ರೀ ಅಮೃತೇಶ್ವರ ಪ್ರೌಢಶಾಲೆಯಲ್ಲಿ ನಡೆದ ಶಾಲಾ ಸಂಸತ್ ಮಂತ್ರಿಮಂಡಲ ರಚನೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.