ಸಾರಾಂಶ
ಕಾರ್ಗಿಲ್ ಯುದ್ಧದಲ್ಲಿ ಮಡಿದ ಯೋಧರ ಸ್ಮರಣೆ ಮಾಡಿಕೊಂಡು ಯೋಧರ ಬಲಿದಾನದಿಂದಾಗಿ ನಾವು ಇಂದು ನೆಮ್ಮದಿಯ ಜೀವನ ನಡೆಸುತ್ತಿದ್ದೇವೆ. ಮಕ್ಕಳು ದೇಶಾಭಿಮಾನ ದೇಶಭಕ್ತಿ ಮೂಡಿಸಿಕೊಳ್ಳಬೇಕು ಎಂದು ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿದ ವೀರ ಯೋಧ ಬಸವರಾಜ ಬಾಗೇವಾಡಿ ಹೇಳಿದ್ದಾರೆ.
- ಪೊಲೀಸ್ ಪಬ್ಲಿಕ್ ಸ್ಕೂಲ್‌ನಲ್ಲಿ ಕಾರ್ಗಿಲ್ ವಿಜಯೋತ್ಸವ । ಸನ್ಮಾನ ಕಾರ್ಯಕ್ರಮ - - - ಕನ್ನಡಪ್ರಭ ವಾರ್ತೆ, ದಾವಣಗೆರೆ ಕಾರ್ಗಿಲ್ ಯುದ್ಧದಲ್ಲಿ ಮಡಿದ ಯೋಧರ ಸ್ಮರಣೆ ಮಾಡಿಕೊಂಡು ಯೋಧರ ಬಲಿದಾನದಿಂದಾಗಿ ನಾವು ಇಂದು ನೆಮ್ಮದಿಯ ಜೀವನ ನಡೆಸುತ್ತಿದ್ದೇವೆ. ಮಕ್ಕಳು ದೇಶಾಭಿಮಾನ ದೇಶಭಕ್ತಿ ಮೂಡಿಸಿಕೊಳ್ಳಬೇಕು ಎಂದು ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿದ ವೀರ ಯೋಧ ಬಸವರಾಜ ಬಾಗೇವಾಡಿ ಹೇಳಿದರು.
ನಗರದ ಪೊಲೀಸ್ ಪಬ್ಲಿಕ್ ಸ್ಕೂಲ್‌ನಲ್ಲಿ ಯೋಧರ ತ್ಯಾಗ ಬಲಿದಾನವನ್ನು ಸ್ಮರಿಸುವ ಹಾಗೂ ಅವರ ಶೌರ್ಯ ಸಾಹಸಕ್ಕೆ ಗೌರವ ಸಲ್ಲಿಸುವ ಉದ್ದೇಶದೊಂದಿಗೆ ಆಯೋಜಿಸಿದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.ಯೋಧ ಕೆ.ಎಸ್.ಮಂಜಪ್ಪ ಮಾತನಾಡಿ, ಯುದ್ಧ ಭೂಮಿಯಲ್ಲಿ ತಾವು ಅನುಭವಿಸಿದ ಕಷ್ಟದ ದಿನಗಳ ಬಗ್ಗೆ ಮಕ್ಕಳಿಗೆ ತಿಳಿಸಿದರು. ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಿ ದಂತಹ ಯೋಧರು ತಮಗೆ ನೀಡಲಾಗುವ ತರಬೇತಿ, ಅಲ್ಲಿ ತಾವು ಅನುಭವಿಸಿದ ಕಷ್ಟದ ದಿನಗಳು ಬಗ್ಗೆ ತಿಳಿಸಿ ಯೋಧರ ಬಗ್ಗೆ ಮಕ್ಕಳಲ್ಲಿ ಹೆಮ್ಮೆ ಮೂಡುವಂತೆ ಮಾಡಿದರು.
ಐಡಿಎಆರ್ ಆರ್.ಎಸ್.ಮಹೇಶ್ ಪಾಟೀಲ್ ಮಾತನಾಡಿ, ಸೈನಿಕರ ತ್ಯಾಗ, ಶೌರ್ಯ, ಸಮರ್ಪಣಾಭಾವ, ದೇಶಭಕ್ತಿ ಮತ್ತು ಬಲಿದಾನಗಳು ನಮ್ಮೆಲ್ಲರಿಗೆ ಆದರ್ಶವಾಗಬೇಕೆಂದು ತಿಳಿಸಿದ ಅವರು, ದೇಶಕ್ಕಾಗಿ ಮಡಿದ ಎಲ್ಲಾ ಯೋಧರಿಗೆ ನುಡಿ ನಮನವನ್ನು ಸಲ್ಲಿಸಿದರು.ಶಾಲೆ ಪ್ರಾಚಾರ್ಯ ಎಚ್.ವಿ.ಯತೀಶ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಜಗದೀಶ್ ಶೀಗೇಹಳ್ಳಿ, ಶಿಕ್ಷಕರಾದ ಮಂಜುಳಾ ಮಾಗೋಡ್, ಹರ್ಷಿತಾ, ಹಾಗೂ ವಿದ್ಯಾರ್ಥಿಗಳಾದ ಪ್ರಣವ್, ಭುವನಾ, ಸಾನ್ವಿ, ಕೆ.ಎಂ.ಚೇತನ್ ಹಾಗೂ ವಿದ್ಯಾರ್ಥಿಗಳು ಇದ್ದರು. ವಿದ್ಯಾರ್ಥಿಗಳು ದೇಶಭಕ್ತಿ ಗೀತಗಾಯನ ಮತ್ತು ನೃತ್ಯಗಳ ಮೂಲಕ ಕಾರ್ಗಿಲ್ ಧೀರಯೋಧರನ್ನು ಸ್ಮರಿಸಿದರು. - - - -27ಕೆಡಿವಿಜಿ41ಃ:ದಾವಣಗೆರೆ ಪೊಲೀಸ್ ಪಬ್ಲಿಕ್ ಸ್ಕೂಲ್‌ನಲ್ಲಿ ನಡೆದ ಕಾರ್ಗಿಲ್ ವಿಜಯೋತ್ಸವದಲ್ಲಿ ವೀರಯೋಧರನ್ನು ಸನ್ಮಾನಿಸಲಾಯಿತು.