ಸರ್ಕಾರ ಶಿಕ್ಷಣಕ್ಕೆ ವಿವಿಧ ಯೋಜನೆ ನೀಡುತ್ತದೆ. ಜತೆಗೆ ನಮ್ಮ ಸಂಸ್ಥೆಯು ಶಾಲಾ ಮಕ್ಕಳಿಗೆ ಅದರಲ್ಲು ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಸಹಾಯ ಸಹಕಾರ ನೀಡುತ್ತಾ ಬಂದಿದೆ
ಗಂಗಾವತಿ: ಮಕ್ಕಳು ಶಿಕ್ಷಣ ಮತ್ತು ಪರಿಸರದ ಕಡೆಗೆ ಗಮನ ಹರಿಸಬೇಕೆಂದು ರೋಟರಿ ರೈಸ್ ಬೌಲ್ ಗಂಗಾವತಿ ವುಮೆನ್ಸ್ ಕ್ಲಬ್ ನ ಕಾರ್ಯದರ್ಶಿ ಗೀತಾ ಚೌಧರಿ ಹೇಳಿದರು.
ಸಮೀಪದ ಸಿದ್ದಿಕೇರಿ ಕ್ಯಾಂಪ್ ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಸಿದ್ದಿಕೇರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ರೋಟರಿ ರೈಸ್ ಬೌಲ್ ಗಂಗಾವತಿ ವುಮೆನ್ಸ್ ಕ್ಲಬ್ ನಿಂದ ಬುಕ್, ಪೆನ್ನು ಮತ್ತು ವಿವಿಧ ಸಾಮಗ್ರಿ ವಿತರಿಸಿ ಮಾತನಾಡಿದರು.ಇಂದಿನ ಮಕ್ಕಳು ಮುಂದಿನ ದೇಶದ ಭಾವಿ ಪ್ರಜೆಗಳಾಗುತ್ತೀರಿ. ಇದ್ದ ಸಮಯ ವ್ಯರ್ಥ ಮಾಡದೇ ಶಿಕ್ಷಣದ ಕಡೆಗೆ ಗಮನಹರಿಸಬೇಕೆಂದರು.
ಸರ್ಕಾರ ಶಿಕ್ಷಣಕ್ಕೆ ವಿವಿಧ ಯೋಜನೆ ನೀಡುತ್ತದೆ. ಜತೆಗೆ ನಮ್ಮ ಸಂಸ್ಥೆಯು ಶಾಲಾ ಮಕ್ಕಳಿಗೆ ಅದರಲ್ಲು ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಸಹಾಯ ಸಹಕಾರ ನೀಡುತ್ತಾ ಬಂದಿದೆ ಎಂದರು.ಈಗಾಗಲೇ ಶಾಲಾ ಮಕ್ಕಳಿಗೆ ಪೀಠೋಪಕರಣ, ಮಹಿಳೆಯರಿಗೆ ಹೊಲಿಗೆ ಯಂತ್ರ, ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಶಿಬಿರ, ಚಿಕಿತ್ಸಾ ಶಿಬಿರ, ನೇತ್ರಾ ತಪಾಸಣೆ ಸೇರಿದಂತೆ ವಿವಿಧ ಶಿಬಿರ ಏರ್ಪಡಿಸುತ್ತಾ ಬಂದಿದೆ ಎಂದರು.
ಸಂಸ್ಥೆಯ ಅಧ್ಯಕ್ಷೆ ಬಸಮ್ಮ ಹಳವಾಣ ಮಾತನಾಡಿ, ಸಂಸ್ಥೆಯು ಸಮಾಜ ಸೇವಾ ಮುಖಿಯಾಗಿ ಕಾರ್ಯ ನಿರ್ವಹಿಸುತ್ತದೆ ಎಂದರು.ಈ ವೇಳೆ ರೋಟರಿ ಸದಸ್ಯ ಅಂಬಿಕಾ ಚೌಧರಿ, ಶ್ರೀದೇವಿ ಲಲಿತ ನಾಗರಾಜ್, ಶಾಹಿಂ ಕೌಸರ್, ನಾಗರತ್ನ, ಪಾರಮ್ಮ, ತುಳಜಾ ರಾವ್ ಗಾಯಕವಾಡ, ಶಿಲ್ಪಾ ತಿಪ್ಪನಾಳ್, ಚಂದ್ರಪ್ಪ, ಪಾರಮ್ಮ ಗೌಡಪ್ಪ, ಹನುಮಂತಪ್ಪ ಸಾವಜಿ, ಮುಖ್ಯ ಶಿಕ್ಷಕ ರಾಘವೇಂದ್ರ ಪಿ.ಕಲಾಲ್, ಶಿಕ್ಷಕ ಬಸವರಾಜ, ನಾಗರಾಜ್, ಈರಮ್ಮ ಸೇರಿದಂತೆ ಸ್ಥಳೀಯ ಮುಖಂಡರು ಭಾಗವಹಿಸಿದ್ದರು.