ಹೊರ ಬಂದು ಪಠ್ಯೇತರ ಚಟುವಟಿಕೆ ಮತ್ತು ಶಿಕ್ಷಕರು ನೀಡುವ ದಿನ ನಿತ್ಯದ ಕೆಲಸ ಮಾಡುವ ಕಡೆ ಗಮನ ಹರಿಸಬೇಕು

ಕುಷ್ಟಗಿ: ವಿದ್ಯಾರ್ಥಿಗಳು ಮೊಬೈಲ್ ಗೀಳಿನಿಂದ ಹೊರ ಬಂದು ಕಲಿಕೆಯತ್ತ ಗಮನ ನೀಡಬೇಕು ಎಂದು ಪಪಂ ಅಧ್ಯಕ್ಷ ನಾರಾಯಣಗೌಡ ಮೆದಿಕೇರಿ ಹೇಳಿದರು.

ತಾಲೂಕಿನ ತಾವರಗೇರಾ ಪಟ್ಟಣದ ವಿಶ್ವಚೇತನ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ನಡೆದ ಕನ್ನಡ ಭಾಷಾ ಕಲಾ ಮೇಳ, ಆಹಾರ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಶಾಲೆಯಿಂದ ಮನೆ ತಲುಪಿದ ನಂತರ ಮೊಬೈಲ್ ನೋಡುವದಕ್ಕೆ ಸಮಯ ನೀಡುತ್ತಿದ್ದು, ಇದರಿಂದ ಹೊರ ಬಂದು ಪಠ್ಯೇತರ ಚಟುವಟಿಕೆ ಮತ್ತು ಶಿಕ್ಷಕರು ನೀಡುವ ದಿನ ನಿತ್ಯದ ಕೆಲಸ ಮಾಡುವ ಕಡೆ ಗಮನ ಹರಿಸಬೇಕು ಎಂದರು.

ಸಿಆರ್‌ಪಿ ಕಾಶಿನಾಥ ನಾಗಲಿಕರ ಮಾತನಾಡಿ, ಮಕ್ಕಳ ಕಲಿಕೆ ದೃಷ್ಠಿಯಿಂದ ಇಂತಹ ವಸ್ತು ಪ್ರದರ್ಶನ ನಡೆಸಲಾಗುದು. ಶಿಕ್ಷಣ ಇಲಾಖೆ ಸಹ ಪಠ್ಯದ ಜತೆಗೆ ಮಕ್ಕಳಿಗೆ ಜೀವನ ನಡೆಸಲು ಬೇಕಾಗುವ ವ್ಯವಹಾರ ಜ್ಞಾನ ನೀಡುವ ಚಟುವಟಿಕೆ ಆಯೋಜನೆ ಮಾಡುವ ಯೋಜನೆ ರೂಪಿಸಿದೆ.ಇದರಿಂದ ಶಿಕ್ಷಣ ಮುಗಿಸಿ ನೌಕರಿ ಮಾಡುವುದು ಅಷ್ಟೆ ಅಲ್ಲ.ಸ್ವಂತ ದುಡಿಮೆಯಿಂದ ಜೀವನ ಸಾಗಿಸಲು ಚಟುವಟಿಕೆ ಕಲಿಸಲಾಗುವುದು ಎಂದರು.

ಪ್ರದರ್ಶನ: ಶಾಲಾ ಕೊಠಡಿಗಳಲ್ಲಿ ಏರ್ಪಡಿಸಿದ್ದ ವಿಜ್ಞಾನ, ಸಮಾಜ, ಗಣಿತ, ವಿನೂತನ ಪ್ರಕ್ರಿಯೇ ಮೂಲಕ ಮಕ್ಕಳು ತಯಾರಿಸಿದ್ದ ಕನ್ನಡ ಭಾಷೆ ಕಲಿಕೆಯ ಚಿತ್ರಣಗಳು, ಪ್ರಾತ್ಯಕ್ಷಿತ ಚಟುವಟಿಕೆ ಮಕ್ಕಳು ಪ್ರದರ್ಶನ ಮಾಡಿದರು.

ಗಣ್ಯರು ಮತ್ತು ಪೋಷಕರು ವಸ್ತು ಪ್ರದರ್ಶನ ಹಾಗೂ ಶಾಲಾ ಆವರಣದಲ್ಲಿ ಆಯೋಜಿಸಿದ ಆಹಾರ ಮೇಳ ವೀಕ್ಷಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆ ಅಧ್ಯಕ್ಷ ಡಾ. ರಮೇಶ ಬಂಡರಗಲ್, ಬಿಆರ್‌ಸಿ ಸೋಮನಾಥ ಗೋಟೂರು, ಪಪಂ ಸದಸ್ಯ ವೀರನಗೌಡ ಪಾಟೀಲ್, ರಾಜು ಕಾಂಬಳೆ, ಕವಿತಾ ಬಂಡರಗಲ್, ಮಹಾಂತೇಶ ಬಂಡರಗಲ್ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಶಿಕ್ಷಕರು, ಪೋಷಕರು ಇದ್ದರು. ಶಿಕ್ಷಕ ಬಸವಂತಪ್ಪ ನಾಡಗೌಡರ ಸ್ವಾಗತಿಸಿದರು. ಶಿಕ್ಷಕ ಮೌಲಾಸಾಬ್‌ ನಿರೂಪಿಸಿ ವಂದಿಸಿದರು.