ಸಾರಾಂಶ
ಯಲಬುರ್ಗಾ: ಪ್ರತಿಯೊಬ್ಬ ಮಕ್ಕಳು ತಮಗೆ ದೊರಕುವ ಅವಕಾಶ ಸದ್ಭಳಕೆ ಮಾಡಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಿವಿಲ್ ನ್ಯಾಯಾಧೀಶ ಸಂಜುಕುಮಾರ ಪಚ್ಚಪೂರೆ ಹೇಳಿದರು.
ತಾಲೂಕಿನ ಹೊಸಳ್ಳಿ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಕಾನೂನು ಸೇವಾ ಸಮಿತಿ, ತಾಲೂಕು ವಕೀಲರ ಸಂಘ, ಅಭಿಯೋಜನ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ದಿನಾಚರಣೆ ಹಾಗೂ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ವಿದ್ಯಾರ್ಥಿಗಳು ಕಲಿಕೆಯ ಹಂತದಲ್ಲಿಯೇ ಜೀವನದಲ್ಲಿ ಸಂಸ್ಕಾರ, ಸಂಸ್ಕೃತಿ ಅಳವಡಿಸಿಕೊಂಡು ಉತ್ತಮ ನಾಗರಿಕರಾಗಬೇಕು. ಇದಕ್ಕೆ ಶಿಕ್ಷಕರು ಮತ್ತು ಪಾಲಕರು ಕೂಡ ಪ್ರೇರೇಪಿಸಬೇಕು.ಇಂದಿನ ಮಕ್ಕಳು ನಾಳಿನ ಉತ್ತಮ ಪ್ರಜೆಗಳಾಗಲಿದ್ದಾರೆ. ವಿದ್ಯಾರ್ಥಿಗಳು ಒಳ್ಳೆಯ ರೀತಿಯಲ್ಲಿ ಅಧ್ಯಯನ ಮಾಡುವ ಮೂಲಕ ಹೆತ್ತವರ ಹೆಸರು ತರಬೇಕು ಎಂದರು.
ಅಪರ ಸರ್ಕಾರಿ ವಕೀಲ ಮಲ್ಲನಗೌಡ ಪಾಟೀಲ್ ಮಕ್ಕಳ ಹಕ್ಕುಗಳು ಕುರಿತು ಮಾತನಾಡಿದರು. ವಕೀಲರ ಸಂಘದ ಕಾರ್ಯದರ್ಶಿ ಮಹಾಂತೇಶ ಈಟಿ ಪೋಸ್ಕೋ ಕಾಯ್ದೆ ಕುರಿತು ಮಾತನಾಡಿದರು.ಪ್ರಾಚಾರ್ಯ ವಿ.ಬಿ. ಹನುಮಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಸಹಾಯಕ ಸರ್ಕಾರಿ ಅಭಿಯೋಜಕಿ ಗೀತಾ ಅಸೂಟಿ, ವಕೀಲ ಎಸ್.ಎನ್. ಶ್ಯಾಗೋಟಿ, ಬಸವರಾಜ ತುರಾಕಾನಿ, ಎಂ.ಎಸ್. ನಾಯ್ಕರ್, ಅಮೀನ್‌ಸಾಬ್ ನದಾಫ್, ಸಮಾಜ ಕಲ್ಯಾಣ ಅಧಿಕಾರಿ ಶಶಿಧರ ಸಕ್ರಿ, ಎಎಸ್ಐ. ಬಸವರಾಜ ಮಾಲಗತ್ತಿ, ಶಿಕ್ಷಕ ಪುರುಷೋತ್ತಮ ಪೂಜಾರ್, ವಿಜಯಕುಮಾರ ದೊಡ್ಮನಿ, ಹನುಮಪ್ಪ ಬಡಿಗೇರ್, ಕಳಕೇಶ ಅರಕೇರಿ, ಮಲ್ಲಿಕಾರ್ಜುನ ಅಂಗಡಿ, ಶಾಂತವೀರಯ್ಯ ಬಲವಂಚಿಮಠ, ಶಂಕರ ಇಂಗಳದಾಳ, ರಾಜೇಶ್ವರಿ ಬಿರಾದಾರ, ಮಂಜುಳಾ ನರೇಂದ್ರ, ಶಿವಲೀಲಾ ಜಕ್ಕಲಿ, ಫಾತಿಮಾ ಬೆಟಗೇರಿ, ನಿಲಯ ಪಾಲಕಿ ರೇಣುಕಾ ಪಾಟೀಲ್ ಉಪಸ್ಥಿತರಿದ್ದರು.
;Resize=(128,128))
;Resize=(128,128))
;Resize=(128,128))