ಸಾರಾಂಶ
ವಿದ್ಯಾರ್ಥಿಗಳು ಪ್ರಾಣಿ-ಪಕ್ಷಿಗಳ ಬಗ್ಗೆ ತಿಳಿದುಕೊಂಡು ಅದನ್ನು ರಕ್ಷಿಸುವ ನಿಟ್ಟಿನಲ್ಲಿ ಮುಂದಾಗಬೇಕು ಎಂದು ಡಿಆರ್‌ಎಫ್‌ಒ ಗಿರೀಶ್ ತಿಳಿಸಿದರು. ಹನೂರಿನಲ್ಲಿ ಹೊಗೇನಕಲ್ ಜಲಪಾತ ವೀಕ್ಷಿಸಲು ವಿದ್ಯಾರ್ಥಿಗಳಿಗೆ ಅನುವು ಮಾಡಿಕೊಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಹನೂರು: ವಿದ್ಯಾರ್ಥಿಗಳು ಪ್ರಾಣಿ-ಪಕ್ಷಿಗಳ ಬಗ್ಗೆ ತಿಳಿದುಕೊಂಡು ಅದನ್ನು ರಕ್ಷಿಸುವ ನಿಟ್ಟಿನಲ್ಲಿ ಮುಂದಾಗಬೇಕು ಎಂದು ಡಿಆರ್‌ಎಫ್‌ಒ ಗಿರೀಶ್ ತಿಳಿಸಿದರು.
ಪಟ್ಟಣದ ಜಿ.ವಿ.ಗೌಡ ಪ್ರೌಢಶಾಲೆಯ ವಿದ್ಯಾರ್ಥಿಗಳು ತಾಲೂಕಿನ ಗೋಪಿನಾಥಂ ಮಿಸ್ಟರಿ ಕ್ಯಾಂಪ್ ಮತ್ತು ಹುತಾತ್ಮ ಶ್ರೀನಿವಾಸನ್ ಸ್ಮಾರಕ ಸೇರಿದಂತೆ ಹೊಗೇನಕಲ್ ಜಲಪಾತ ವೀಕ್ಷಿಸಲು ವಿದ್ಯಾರ್ಥಿಗಳಿಗೆ ಅನುವು ಮಾಡಿಕೊಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಚಿಣ್ಣರ ವನದರ್ಶನ:
ಅರಣ್ಯ ಇಲಾಖೆ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಮತ್ತು ಪ್ರಾಣಿ ಪಕ್ಷಿಗಳ ಬಗ್ಗೆ ಅರಿವು ಮೂಡಿಸುವ ಜತೆಗೆ ಅರಣ್ಯ ಪ್ರದೇಶವನ್ನು ಕಾಪಾಡುವ ನಿಟ್ಟಿನಲ್ಲಿ ಮಕ್ಕಳು ಶಾಲಾ ಹಂತದಿಂದಲೇ ಮೈಗೂಡಿಸಿಕೊಂಡು ಪರಿಸರ ಉಳಿಸಿ ಬೆಳೆಸುವ ಜತೆಗೆ ಪ್ರಾಣಿ-ಪಕ್ಷಿಗಳನ್ನು ಸಹ ಸಂರಕ್ಷಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಮುಂದಾಗಬೇಕು ಎಂದು ತಿಳಿಸಿದರು.ಶಿಕ್ಷಕ ಶಾಂತರಾಜು ಮಾತನಾಡಿ, ಚಿಣ್ಣರ ವನದರ್ಶನ ವೇಳೆಯಲ್ಲಿ ವಿದ್ಯಾರ್ಥಿಗಳು ಅರಣ್ಯ ಪ್ರದೇಶದಲ್ಲಿ ವೀಕ್ಷಿಸಿದ ಪ್ರಾಣಿ ಪಕ್ಷಿಗಳ ಹಾಗೂ ಅರಣ್ಯ ಪ್ರದೇಶದ ಮತ್ತು ಹೊಗೇನಕಲ್ ಜಲಪಾತದ ವೈಭವದ ಬಗ್ಗೆ ವಿದ್ಯಾರ್ಥಿಗಳಿಗೆ ಅರಣ್ಯ ಇಲಾಖೆ ಉತ್ತಮ ಕಾರ್ಯಕ್ರಮ ನೀಡುವ ಮೂಲಕ ಮಕ್ಕಳಿಗೆ ಅನುಕೂಲ ಕಲ್ಪಿಸಿರುವುದು ಶ್ಲಾಘನೀಯ ವಿಚಾರವಾಗಿದೆ ಎಂದು ತಿಳಿಸಿದರು. ಚಿಣ್ಣರ ದರ್ಶನದಲ್ಲಿ ವಿದ್ಯಾರ್ಥಿಗಳಿಗೆ ಕ್ಯಾಪ್, ಟ್ಯಾಗ್, ಪ್ಯಾಡ್, ಪೆನ್ ಅನ್ನು ಅರಣ್ಯ ಇಲಾಖೆ ವತಿಯಿಂದ ವಿತರಿಸಲಾಯಿತು. ಇದೇ ವೇಳೆ ಅರಣ್ಯಪಾಲಕ ಅಭಿಷೇಕ್ ಹಾಗೂ ಶಿಕ್ಷಕ ಶಾಂತರಾಜ್ ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು.