ಸಾರಾಂಶ
ಓವೆಲ್ ಮೈದಾನದಲ್ಲಿ ನಡೆದ ಓಟವು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು
ಕನ್ನಡಪ್ರಭ ವಾರ್ತೆ ಮೈಸೂರುರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ನಗರದಲ್ಲಿ ಆಯೋಜಿಸಿದ್ದ ಮ್ಯಾರಥಾನ್ ಓಟಕ್ಕೆ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಲನೆ ನೀಡಿದರು.ನಗರದ ಓವೆಲ್ ಮೈದಾನದಲ್ಲಿ ನಡೆದ ಓಟವು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ವಿವಿಧ ವಯೋಮಾನದವರಿಗೆ ಪ್ರತ್ಯೇಕ ಓಟ ಆಯೋಜಿಸಲಾಗಿತ್ತು.10 ರಿಂದ 15 ವರ್ಷದ ಬಾಲಕ, ಬಾಲಕಿಯರಿಗೆ 2 ಕಿ.ಮೀ. ಓಟ, 15 ರಿಂದ 30 ವರ್ಷದವರಿಗೆ 3 ಕಿ.ಮೀ. ಓಟ, 31 ರಿಂದ 50 ವರ್ಷದವರಿಗೆ 3 ಕಿ.ಮೀ. ಓಟ, 50 ವರ್ಷ ಮೇಲ್ಪಟ್ಟವರಿಗೆ 2 ಕಿ.ಮೀ. ಓಟ ಮತ್ತು ನಡಿಗೆ ಮತ್ತು ಸೈನಿಕರು ಹಾಗು ಮಾಜಿ ಸೈನಕರಿಗೆ 2 ಕಿ.ಮೀ. ಸೌಹಾರ್ದ ಓಟ ಆಯೋಜಿಸಲಾಗಿತ್ತು.ಮೊದಲು ಮೂರು ವಿಭಾಗಗಳಿಗೆ ನಗದು ಬಹುಮಾನ ನೀಡಲಾಯಿತು. ಪಾಲ್ಗೊಂಡಿದ್ದ ಎಲ್ಲರಿಗೂ ಟೀ ಶರ್ಟ್, ಮೆಡಲ್, ಸರ್ಟಿಫಿಕೇಟ್, ಹಣ್ಣು ಮತ್ತು ಪಾನೀಯ ನೀಡಲಾಯಿತು.
ಈ ವೇಳೆ ಮಾಜಿ ಸಚಿವ ಸಾ.ರಾ. ಮಹೇಶ್, ಲಾ ಗೈಡ್ಪತ್ರಿಕೆ ಸಂಪಾದಕ ವೆಂಕಟೇಶ್, ನಗರ ಪಾಲಿಕೆ ಮಾಜಿ ಸದಸ್ಯ ಎಂ.ಡಿ. ಪಾರ್ಥಸಾರಥಿ, ಅಥ್ಲೆಟಿಕ್ಸ್ ತರಬೇತುದಾರ ಟಿ,ಎಸ್. ರವಿ ಮೊದಲಾದವರು ಇದ್ದರು.