ಮಕ್ಕಳ ಜ್ಞಾನಾರ್ಜನೆಗೆ ಮಕ್ಕಳ ಸಾಹಿತ್ಯ ಸಂಭ್ರಮ ಪೂರಕ: ತಹಸೀಲ್ದಾರ್‌ ಬಸವರಾಜ ತೆನ್ನಳ್ಳಿ

| Published : Feb 23 2024, 01:45 AM IST

ಮಕ್ಕಳ ಜ್ಞಾನಾರ್ಜನೆಗೆ ಮಕ್ಕಳ ಸಾಹಿತ್ಯ ಸಂಭ್ರಮ ಪೂರಕ: ತಹಸೀಲ್ದಾರ್‌ ಬಸವರಾಜ ತೆನ್ನಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

ತಿಯೊಂದು ಮಕ್ಕಳಲ್ಲಿ ಕಥೆ, ಕವನ, ರಚನೆ, ನಾಟಕ ರಚನೆ, ವರದಿಗಾರಿಕೆ ಮತ್ತು ನಿರ್ದೇಶನ ಇತ್ಯಾದಿ ಸೃಜನಶೀಲತೆ ಹೆಚ್ಚಿಸಲು ಇಂತಹ ಸಂಭ್ರಮ ಅತ್ಯಾವಶ್ಯಕವಾಗಿದೆ.

ಯಲಬುರ್ಗಾ: ಮಕ್ಕಳ ಸೃಜನಶೀಲತೆ, ಜ್ಞಾನಾರ್ಜನೆಗೆ ಮಕ್ಕಳ ಸಾಹಿತ್ಯ ಸಂಭ್ರಮ ಪೂರಕವಾಗಿದೆ ಎಂದು ತಹಸೀಲ್ದಾರ ಬಸವರಾಜ ತೆನ್ನಳ್ಳಿ ಹೇಳಿದರು.ತಾಲೂಕಿನ ಮುಧೋಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲೂಕಿನ ಹಿರೇಮ್ಯಾಗೇರಿ, ಕರಮುಡಿ, ಸಂಕನೂರ, ಮುಧೋಳ ಗ್ರಾಪಂಗಳ ಹಾಗೂ ಜಿಪಂ, ತಾಪಂ, ಶಾಲಾ ಶಿಕ್ಷಣ ಇಲಾಖೆ ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿ ಸಹಯೋಗದಲ್ಲಿ ನಡೆದ ತಾಲೂಕು ಮಟ್ಟದ ಮಕ್ಕಳ ಸಾಹಿತ್ಯ ಸಂಭ್ರಮ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಕ್ಕಳಲ್ಲಿರುವ ಕೌಶಲ್ಯಗಳಿಗೆ ಪ್ರೋತ್ಸಾಹ ದೊರೆತಂತಾಗುತ್ತದೆ ಎಂದರು.ಪ್ರತಿಯೊಂದು ಮಕ್ಕಳಲ್ಲಿ ಕಥೆ, ಕವನ, ರಚನೆ, ನಾಟಕ ರಚನೆ, ವರದಿಗಾರಿಕೆ ಮತ್ತು ನಿರ್ದೇಶನ ಇತ್ಯಾದಿ ಸೃಜನಶೀಲತೆ ಹೆಚ್ಚಿಸಲು ಇಂತಹ ಸಂಭ್ರಮ ಅತ್ಯಾವಶ್ಯಕವಾಗಿದೆ. ಪ್ರತಿಯೊಂದು ಶಾಲೆಗಳಲ್ಲಿ ಶಿಕ್ಷಕರು ಮಕ್ಕಳಲ್ಲಿ ಕಲೆ, ಸಂಗೀತ, ಸಾಹಿತ್ಯದ ಅಭಿರುಚಿ ಬೆಳೆಸುವ ಜೊತೆಗೆ ಪ್ರೋತ್ಸಾಹ ನೀಡುವ ಕಾರ್ಯವಾಗಬೇಕು ಎಂದರು.ಮಕ್ಕಳಲ್ಲಿ ವಿಭಿನ್ನ ಚಟುವಟಿಕೆಗಳಲ್ಲಿ ಆಸಕ್ತಿ ಇರುವ ಕುರಿತು ಸಾಹಿತ್ಯ ಸಂಭ್ರ‍್ರಮವು ಒಂದು ಸದಾವಕಾಶ ಕಲ್ಪಿಸುತ್ತದೆ. ಇಂತಹ ಸಾಹಿತ್ಯ ಸಂಭ್ರ‍್ರಮಗಳು ಮಕ್ಕಳ ಜ್ಞಾನಾರ್ಜನೆಗೆ ಪೂರಕವಾಗಿವೆ. ಮಕ್ಕಳ ಶಾಲಾ ಹಂತದಲ್ಲಿ ಸಾಹಿತ್ಯದ ಬಗ್ಗೆ ಹೆಚ್ಚೆಚ್ಚು ಕಾರ್ಯಾಗಾರ ನಡೆದಾಗ ಮಕ್ಕಳಲ್ಲಿರುವ ಕಲೆ ಸಾಹಿತ್ಯ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದು ಹೇಳಿದರು.ತಾಪಂ ಇಒ ಸಂತೋಷ ಪಾಟೀಲ ಬಿರಾದಾರ ಮಾತನಾಡಿ, ಶಿಕ್ಷಕರಾದವರು ಮಕ್ಕಳ ಕಲಿಕೆಯ ಜೊತೆಗೆ ಕನ್ನಡಾಭಿಮಾನ ಹಾಗೂ ಸಾಹಿತ್ಯದ ಬಗ್ಗೆ ಹೆಚ್ಚಾಗಿ ತಿಳಿಸಬೇಕು ಎಂದರು.ಈ ಸಂದರ್ಭದಲ್ಲಿ ಕರಮುಡಿ ಗ್ರಾಪಂ ಅಧ್ಯಕ್ಷ ಕಲ್ಲಿನಾಥ ಲಿಂಗಣ್ಣನವರ, ಅಕ್ಷರದಾಸೋಹ ಅಧಿಕಾರಿ ಎಫ್.ಎಂ.ಕಳ್ಳಿ, ಮುಧೋಳ ಗ್ರಾಪಂ ಅಧ್ಯಕ್ಷ ಮಮತಾಬೇಗಂ ಹಿರೇಮನಿ, ಹಿರೇಮ್ಯಾಗೇರಿ ಗ್ರಾಪಂ ಅಧ್ಯಕ್ಷ ಕಳಕಪ್ಪ ಹಿರೇಮ್ಯಾಗೇರಿ, ಸಂಕನೂರ ಗ್ರಾಪಂ ಅಧ್ಯಕ್ಷೆ ನಾಗಮ್ಮ ತಳವಾರ, ಪಿಡಿಒಗಳಾದ ಫಕ್ಕೀರಪ್ಪ ಕಟ್ಟಿಮನಿ, ಬಸವರಾಜ ಕಿಳ್ಳಿಕ್ಯಾತರ, ಗುಂಡಮ್ಮ, ವೀರಭದ್ರಗೌಡ ಸೇರಿದಂತೆ ಸಿಆರ್‌ಪಿ ಎಲ್ಲ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು, ಗ್ರಾಪಂ ಸದಸ್ಯರು, ಶಾಲಾ ಮಕ್ಕಳು ಇದ್ದರು.