ಸಾರಾಂಶ
ಸಿಂದಗಿ ಪಟ್ಟಣದ ಪತ್ರಕರ್ತ, ಯುವ ಬರಹಗಾರ ನಾಗೇಶ ತಳವಾರ ಅವರ ಚಿಮಣಿ ಬೆಳಕಿನ ಬದುಕು ಎಂಬ ನಾಟಕ ಕೃತಿಯ ಮುಖಪುಟವನ್ನು ಸಾಹಿತಿಗಳಾದ ಡಾ. ಚನ್ನಪ್ಪ ಕಟ್ಟಿ ಹಾಗೂ ಡಾ.ಎಂ.ಎಂ.ಪಡಶೆಟ್ಟಿ ಗುರುವಾರ ಬಿಡುಗಡೆಗೊಳಿಸಿದರು.
ಕನ್ನಡಪ್ರಭ ವಾರ್ತೆ ಸಿಂದಗಿ
ಪಟ್ಟಣದ ಪತ್ರಕರ್ತ, ಯುವ ಬರಹಗಾರ ನಾಗೇಶ ತಳವಾರ ಅವರ ಚಿಮಣಿ ಬೆಳಕಿನ ಬದುಕು ಎಂಬ ನಾಟಕ ಕೃತಿಯ ಮುಖಪುಟವನ್ನು ಸಾಹಿತಿಗಳಾದ ಡಾ. ಚನ್ನಪ್ಪ ಕಟ್ಟಿ ಹಾಗೂ ಡಾ.ಎಂ.ಎಂ.ಪಡಶೆಟ್ಟಿ ಗುರುವಾರ ಬಿಡುಗಡೆಗೊಳಿಸಿದರು. ಈ ವೇಳೆ ಕೃತಿ ರಚನಾಕಾರ ನಾಗೇಶ ತಳವಾರ ಮಾತನಾಡಿ, ಮೈಸೂರಿನಲ್ಲಿ ಫೆ.10 ರಂದು ಮೈಸೂರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಸಿಂದಗಿಯ ಮಾಧ್ಯಮರಂಗ ಫೌಂಡೇಶನ್, ಮೈಸೂರಿನ ಸ್ವಜನ್ಯ ಕಲಾ ವೇದಿಕೆಗಳ ಜಂಟಿಯಾಗಿ ಕೃತಿ ಬಿಡುಗಡೆಯಾಗಲಿದೆ. ಚಾಮರಾಜನಗರ ವಿಶ್ವವಿದ್ಯಾಲಯದ ಕುಲಪತಿ ಪ್ರೊ ಎಂ.ಆರ್. ಗಂಗಾಧರ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಮೈಸೂರು ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕಿ ವಿಜಯಲಕ್ಷ್ಮೀ ಕರಿಕಲ್ಲ್ ಕೃತಿಯ ಬಗ್ಗೆ ಮಾತನಾಡಲಿದ್ದಾರೆ. ಪತ್ರಕರ್ತ ಅಂಶಿ ಪ್ರಸನ್ನಕುಮಾರ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.ಈ ವೇಳೆ ಸಾಹಿತಿ ಡಾ.ಎಂ.ಎಂ.ಪಡಶೆಟ್ಟಿ, ಸಾಹಿತಿ ಚನ್ನಪ್ಪ ಕಟ್ಟಿ ಮಾತನಾಡಿದರು.