ಮಕ್ಕಳ ಪ್ರತಿಭೆ ಹೊರತರಲು ಚಿಣ್ಣರ ಸಂಭ್ರಮ ಅಗತ್ಯ: ಡಾ.ಆರ್.ನಿಂಗರಾಜು

| Published : Feb 19 2024, 01:32 AM IST

ಮಕ್ಕಳ ಪ್ರತಿಭೆ ಹೊರತರಲು ಚಿಣ್ಣರ ಸಂಭ್ರಮ ಅಗತ್ಯ: ಡಾ.ಆರ್.ನಿಂಗರಾಜು
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳು ಯಾವ ಕ್ಷೇತ್ರದಲ್ಲಿ ಉತ್ತಮ ಆಸಕ್ತಿ ಹಾಗೂ ಅಭಿರುಚಿ ಹೊಂದಿದ್ದಾರೆ ಎಂಬುದನ್ನು ಗುರುತಿಸಿ ಅವರಿಗೆ ಪೂರಕ ವೇದಿಕೆ ಕಲ್ಪಿಸಿಕೊಡಬೇಕು. ಆ ನಿಟ್ಟಿನಲ್ಲಿ ಕಲರವ ಟ್ರಸ್ಟ್ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ. ನಮ್ಮ ದೇಶವು ಸಾವಿರಾರು ವರ್ಷಗಳ ಕಲೆ, ಸಾಂಸ್ಕೃತಿಕ ಇತಿಹಾಸ ಹೊಂದಿದೆ. ಹಲವು ಮುಖಗಳನ್ನು ಚಿಣ್ಣರ ಸಂಭ್ರಮ ಕಾರ್ಯಕ್ರಮದಲ್ಲಿ ಕಾಣಬಹುದು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಮಕ್ಕಳಲ್ಲಿರುವ ಪ್ರತಿಭೆ ಹೊರತರಲು ಚಿಣ್ಣರ ಸಂಭ್ರಮದಂತಹ ವೇದಿಕೆಗಳು ಅತ್ಯವಶ್ಯಕ ಎಂದು ಮೈಸೂರು ವಿವಿ ಸಂಜೆ ಕಾಲೇಜು ಅಧ್ಯಾಪಕ ಡಾ. ಆರ್.ನಿಂಗರಾಜು ಹೇಳಿದರು.

ತಾಲೂಕಿನ ಮೇಳಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಕಲರವ ಸಾಂಸ್ಕೃತಿಕ ಮತ್ತು ಸಾಮಾಜಿಕ ಟ್ರಸ್ಟ್, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ವೈಟ್ ಫೆದರ್ ಟ್ರಸ್ಟ್ ಮೈಸೂರು ವತಿಯಿಂದ ಆಯೋಜಿಸಿದ್ದ ಚಿಣ್ಣರ ಸಂಭ್ರಮಕ್ಕೆ ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಮಕ್ಕಳು ಯಾವ ಕ್ಷೇತ್ರದಲ್ಲಿ ಉತ್ತಮ ಆಸಕ್ತಿ ಹಾಗೂ ಅಭಿರುಚಿ ಹೊಂದಿದ್ದಾರೆ ಎಂಬುದನ್ನು ಗುರುತಿಸಿ ಅವರಿಗೆ ಪೂರಕ ವೇದಿಕೆ ಕಲ್ಪಿಸಿಕೊಡಬೇಕು. ಆ ನಿಟ್ಟಿನಲ್ಲಿ ಕಲರವ ಟ್ರಸ್ಟ್ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು.

ಶಾಲಾ ಮುಖ್ಯ ಶಿಕ್ಷಕ ಗೌಶ ಷರೀಪ್ ಮಾತನಾಡಿ, ನಮ್ಮ ದೇಶವು ಸಾವಿರಾರು ವರ್ಷಗಳ ಕಲೆ, ಸಾಂಸ್ಕೃತಿಕ ಇತಿಹಾಸ ಹೊಂದಿದೆ. ಹಲವು ಮುಖಗಳನ್ನು ಚಿಣ್ಣರ ಸಂಭ್ರಮ ಕಾರ್ಯಕ್ರಮದಲ್ಲಿ ಕಾಣಬಹುದು ಎಂದರು.

ಇದೇ ವೇಳೆ ಅಂಗನವಾಡಿ ಶಿಕ್ಷಕಿಯರಾದ ಎಚ್.ಪಿ.ಅಶಾ, ದುಂಡಮ್ಮ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಪಿಡಿಒ ಬಿ.ಎನ್ ತಿಲಕ್ ಕುಮಾರ್, ಎಸ್‌ಡಿಎಂಸಿ ಅಧ್ಯಕ್ಷ ನಾರಯಣ, ಮೈಸೂರು ನಗರ ಕಾಂಗ್ರೆಸ್ ಪದವೀಧರ ಕೋಶ ಉಪಾಧ್ಯಕ ಡಾ.ರಾಕೇಶ್‌ಗೌಡ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್. ಕುಮಾರ್, ಕಲರವ ಟ್ರಸ್ಟ್ ಅಧ್ಯಕ್ಷ ಎಂ.ಸಿ ಸುಮಂತ್, ಪ್ರಧಾನ ಕಾರ್ಯದರ್ಶಿ ಕೆ.ವಿ ಪ್ರತಾಪ್, ಖಜಾಂಜಿ ಎಂ.ಡಿ ಹೇಮಂತ್, ಶಿಕ್ಷಕರಾದ ರಾಘವೇಂದ್ರ ಸೇರಿದಂತೆ ಇತರರು ಇದ್ದರು.

ನಂತರ ಶಾಲಾ ಮಕ್ಕಳು ಡೊಳ್ಳುಕುಣಿತ, ಕಂಸಾಳೆ, ಮಾರಿಕುಣಿತ, ಪಟಕುಣಿತ, ಜನಪದ ಗೀತೆ, ಸುಗ್ಗಿಪದ, ಸೋಬಾನೆ ಗೀತೆ ಸೇರಿದಂತೆ ಇತರೆ ಸಾಂಸ್ಕೃತಿಕ ಕಾರ್ಯಕ್ರಮ ಪ್ರರ್ದಶನ ನೀಡಿದರು.