ಸಾರಾಂಶ
ಮಗುವಿನ ಮೇಲೆ ದಾಳಿ ಮಾಡಿ ಹೊತ್ತೊಯಲು ಯತ್ನಿಸಿದ ಚಿರತೆಯನ್ನು ಬೆದರಿಸಿ ಮಗುವನ್ನು ಉಳಿಸಿಕೊಂಡ ಘಟನೆ ತುಮಕೂರು ತಾಲೂಕು ಚಿಕ್ಕಬೆಳ್ಳಾವಿ ಗ್ರಾಮದಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ, ತುಮಕೂರು
ಮಗುವಿನ ಮೇಲೆ ದಾಳಿ ಮಾಡಿ ಹೊತ್ತೊಯಲು ಯತ್ನಿಸಿದ ಚಿರತೆಯನ್ನು ಬೆದರಿಸಿ ಮಗುವನ್ನು ಉಳಿಸಿಕೊಂಡ ಘಟನೆ ತುಮಕೂರು ತಾಲೂಕು ಚಿಕ್ಕಬೆಳ್ಳಾವಿ ಗ್ರಾಮದಲ್ಲಿ ನಡೆದಿದೆ. 7 ವರ್ಷದ ಬಾಲಕಿ ಲೇಖನ ಮನೆ ಮುಂದೆ ಆಟವಾಡುತ್ತಿದ್ದ ವೇಳೆ ಚಿರತೆಯೊಂದು ಎಗರಿ ಹೊತ್ತೊಯ್ಯಲು ಮುಂದಾದ ವೇಳೆ ಸಮೀಪದಲ್ಲೇ ಇದ್ದ ತಂದೆ ರಾಕೇಶ್ ಜೋರಾಗಿ ಕೂಗಿಕೊಂಡು ದೊಣ್ಣೆಯೊಂದಿಗೆ ಚಿರತೆಗೆ ಬೆದರಿಸಿದ್ದಾರೆ. ಕೂಡಲೇ ಚಿರತೆ, ಮಗುವನ್ನು ಬಿಟ್ಟು ಓಡಿ ಹೋಗಿದೆ.ಚಿರತೆಯ ದಾಳಿಯಿಂದಾಗಿ ಮಗುವಿನ ಕೈ ಕಾಲು ಪರಚಿದ ಗಾಯಗಲಾಗಿವೆ.
ಚಿರತೆ ದಾಳಿಯಲ್ಲಿ ಬಾಲಕಿ ಲೇಖನ ಪ್ರಾಣಾಪಾಯದಿಂದ ಪಾರಾಗಿದ್ದಾಳೆ