ಬೆಳ್ತಂಗಡಿ: ತಾಲೂಕು ಚಿತ್ಪಾವನ ಬ್ರಾಹ್ಮಣರ ಸಂಘದ ವತಿಯಿಂದ ಉಜಿರೆ-ಬೆಳ್ತಂಗಡಿ ಚಿತ್ಪಾವನ ಬಳಗದ ಸಹಯೋಗದಲ್ಲಿ ನಾಲ್ಕನೇ ಚಿತ್ಪಾವನಿ ಭಾಷಾ ಕವಿಗೋಷ್ಠಿ ಭಾನುವಾರ ಉಜಿರೆಯ ಶ್ರೀ ಜನಾರ್ದನ ದೇವಸ್ಥಾನದ ಸಭಾಂಗಣದಲ್ಲಿ ಜರಗಿತು.
ಬೆಳ್ತಂಗಡಿ: ತಾಲೂಕು ಚಿತ್ಪಾವನ ಬ್ರಾಹ್ಮಣರ ಸಂಘದ ವತಿಯಿಂದ ಉಜಿರೆ-ಬೆಳ್ತಂಗಡಿ ಚಿತ್ಪಾವನ ಬಳಗದ ಸಹಯೋಗದಲ್ಲಿ ನಾಲ್ಕನೇ ಚಿತ್ಪಾವನಿ ಭಾಷಾ ಕವಿಗೋಷ್ಠಿ ಭಾನುವಾರ ಉಜಿರೆಯ ಶ್ರೀ ಜನಾರ್ದನ ದೇವಸ್ಥಾನದ ಸಭಾಂಗಣದಲ್ಲಿ ಜರಗಿತು.ಹಿರಿಯ ಕವಿ, ಸಾಹಿತಿ ಬಾಲಕೃಷ್ಣ ಸಹಸ್ರಬುದ್ಧೆ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರಿನ ವಾಣಿ ಗೋಖಲೆ,ತಾಲೂಕು ಚಿತ್ಪಾವನ ಬ್ರಾಹ್ಮಣ ಸಂಘದ ಅಧ್ಯಕ್ಷ ತ್ರಿವಿಕ್ರಮ ಹೆಬ್ಬಾರ್, ಕಾರ್ಯದರ್ಶಿ ಸುಷ್ಮಾ ಭಿಡೆ, ಬೆಳ್ತಂಗಡಿ-ಉಜಿರೆ ಚಿತ್ಪಾವನ ಬಳಗದ ಅಧ್ಯಕ್ಷ ಪಾಂಡುರಂಗ ಮರಾಠೆ, ಕಾರ್ಯದರ್ಶಿ ಆದರ್ಶ ಡೋಂಗ್ರೆ ಕಾರ್ಯಕ್ರಮ ನಿರ್ವಾಹಕ ಪ್ರವೀಣ್ ಗೋರೆ,ಸಂದೀಪ್ ಪಟವರ್ಧನ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ವಿವೇಕ್ ಕೇಳ್ಕರ್ ಸಹಕರಿಸಿದರು.
ಸ್ವರಚಿತ ಕವನ ವಾಚನ: ಅನ್ನಪೂರ್ಣಾ ಅಭ್ಯಂಕರ್, ಅನುಪಮಾ ಭಿಡೆ, ಅಶ್ವಿನಿ ಎ.ಹೆಬ್ಬಾರ್, ಕರುಣಾಕರ ಗೋಗಟೆ, ಗಾಯತ್ರಿ ಮೆಹೆಂದಳೆ, ಗೋಪು ಗೋಖಲೆ, ಗೋವಿಂದ ದಾಮಲೆ, ಚಂದ್ರಕಾಂತ ಗೋರೆ, ನಾರಾಯಣ ಫಡಕೆ, ನಾರಾಯಣ ಗೋಖಲೆ, ನಾರಾಯಣ ಹೆಬ್ಬಾರ್, ಪದ್ಮಾ ಬೆಡೇಕರ್, ಪ್ರಜ್ಞಾ ಮೆಹೆಂದಳೆ, ಪುರುಷೋತ್ತಮ ತುಳುಪುಳೆ, ಬಾಲಕೃಷ್ಣ ಸಹಸ್ರಬುದ್ಧೆ, ಭಾರತಿ ತಾಮ್ಹನ್ಕರ್, ರತ್ನಾಕರ ಹೆಬ್ಬಾರ್, ಲತಾ ಗೋರೆ, ವನಜಾ ಜೋಶಿ, ವಾಣಿ ಗೋಖಲೆ, ವಿನಯಾ ರಾನಡೆ, ವಸುಧೇಶ ಫಾಟಕ್, ವಿಘ್ನೇಶ್ ಭಿಡೆ, ವೀಣಾ ಬೆಂಡೆ, ವೃಂದಾ ಬೋಡಸ್, ವೃಷಾಂಕ ಖಾಡಿಲ್ಕರ್, ಶಕುಂತಲಾ ನಾತು,ಸವಿತಾ ಹೆಬ್ಬಾರ್, ಸಂಧ್ಯಾ ಪಾಳಂದ್ಯೆ, ಸುಷ್ಮಾ ಶಶಾಂಕ ಭಿಡೆ,ನಾಗಶ್ರೀ ದಾತೆ, ರಾಜಾರಾಮ ಸಹಸ್ರಬುದ್ಧೆ ತಮ್ಮ ಸ್ವರಚಿತ ಕವನಗಳನ್ನು ವಾಚಿಸಿದರು.