ಸಾರಾಂಶ
ಯಜ್ಞ ಕುಂಡ ಎಲ್ಲಿ ಹಾಕುವುದು ಎಂದು ತಂತ್ರಿಗಳೊಂದಿಗೆ ಚರ್ಚಿಸುತ್ತಿರುವ ಸಮಯದಲ್ಲಿ ಎರಡು ಗೋವುಗಳು ಮುಂದೆ ಬಂದು ಸರಿಯಾದ ದಿಕ್ಕಿಗೆ ಕೂತು ಆ ಜಾಗವನ್ನು ಗೋವುಗಳೇ ಸೂಚಿಸಿದ್ದು ಒಂದು ವಿಶೇಷವಾಗಿದ್ದು, ಶುಭ ಸೂಚನೆಯಾಗಿದೆ.
ಕನ್ನಡಪ್ರಭ ವಾರ್ತೆ ಮೂಲ್ಕಿ
ಗಾಯತ್ರಿ ಸಂಗಮ, ಸಾಂಘಿಕ ಕೋಟಿ ಗಾಯತ್ರಿ ಜಪಯಜ್ಞದ ಮೂಲಕ ಬ್ರಾಹ್ಮಣ ಸಮಾಜದ ಒಗ್ಗಟ್ಟು ಮತ್ತು ಹಿಂದೂ ಸಮಾಜ, ಭಾರತ ದೇಶವು ಸುಭಿಕ್ಷೆಯಿಂದ ಕೂಡಿ, ಲೋಕಕ್ಕೆ ಮಂಗಳವಾಗಲೆಂದು ಸಾಂಘಿಕ ಕೋಟಿ ಗಾಯತ್ರಿ ಜಪಯಜ್ಞ ಸಮಿತಿಯ ಸಂಚಾಲಕ, ಶ್ರೀ ಕ್ಷೇತ್ರ ಕಟೀಲಿನ ವೇದಮೂರ್ತಿ ಶ್ರೀಹರಿನಾರಾಯಣ ದಾಸ ಆಸ್ರಣ್ಣ ಹೇಳಿದರು.ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಕೇಂದ್ರ ಸಮಿತಿ ಹಾಗೂ ಮಹಾಸಭಾದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಸಂಯುಕ್ತ ಆಶ್ರಯದಲ್ಲಿ ಚಿತ್ರಾಪುರ ಮಠದ ಸಹಕಾರದೊಂದಿಗೆ ಅ.26, 27ರಂದು ನಡೆಯಲಿರುವ ಗಾಯತ್ರಿ ಸಂಗಮ, ಸಾಂಘಿಕ ಕೋಟಿ ಗಾಯತ್ರಿ ಜಪಯಜ್ಞದ ಚಪ್ಪರ ಮುಹೂರ್ತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಚಿತ್ರಾಪುರ ಮಠಾಧೀಶ ಶ್ರೀ ವಿದ್ಯೆಂದ್ರ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಕುಡುಪು ಕೃಷ್ಣರಾಜ ತಂತ್ರಿಗಳು ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು. ಚಿತ್ರಾಪುರ ಕ್ಷೇತ್ರದ ಅರ್ಚಕರಾದ ಕಾರ್ತಿಕ್ ಭಟ್, ಯಾಗ ಸಮಿತಿಯ ಕಾರ್ಯಾಧ್ಯಕ್ಷ ನ್ಯಾಯವಾದಿ ಮಹೇಶ್ ಕಜೆ, ಪ್ರಧಾನ ಸಂಚಾಲಕ, ವಿದ್ವಾನ್ ಶ್ರೀಧರ ಹೊಳ್ಳ, ಸಂಚಾಲಕ ಸುರೇಶ್ ರಾವ್ ಚಿತ್ರಾಪುರ, ಉಪಾಧ್ಯಕ್ಷರಾದ ಸಿಎ ಆರ್.ಡಿ. ಶಾಸ್ತ್ರಿ, ಶ್ರೀಕರ ದಾಮ್ಲೆ, ಸುಬ್ರಹ್ಮಣ್ಯ ಪ್ರಸಾದ್ ಕೋರಿಯಾರ್, ಪ್ರಕಾಶ್ ಕೋಟೆಕಾರು, ಕಗ್ಗಿ ಶ್ರೀನಿವಾಸ ಆಚಾರ್, ವಿಶ್ವೇಶ್ವರ ಕಾರಂತ್, ವಿಶ್ವೇಶ್ವರ, ಎಂ.ಎಸ್. ಗುರುರಾಜ್, ಭಾಸ್ಕರ್ ರಾವ್ ಬಾಳ, ಕಾರ್ಯದರ್ಶಿ ಕದ್ರಿ ಕೃಷ್ಣಭಟ್. ಕೃಷ್ಣರಾಜ ಭಟ್, ಜಪ ಸಮಿತಿಯ ರವೀಶ್, ಅನಂತಶಯನ ಭಟ್ ಆಡ್ವತಿಮಾರ್, ಸುಬ್ರಹ್ಮಣ್ಯ, , ವಿಶ್ವನಾಥ ಭಟ್ ಕುಂಚಾರು, ನ್ಯಾಯವಾದಿ ಪುರುಷೋತ್ತಮ ಭಟ್, ರಾಜೇಂದ್ರ ಕಲ್ಬಾವಿ, ಜಯರಾಮ್ ಭಟ್ ಕೊಮ್ಮುಂಚೆ, ಅಂಶುಮಾಲಿ, ಕಡಬ ಮಾತೃ ಸಮಿತಿಯ ನ್ಯಾಯವಾದಿ ಉಮಾ ಸೋಮಯಾಜಿ, ಎಚ್. ಎಲ್. ರಾವ್, ಕಲಾವತಿ ಟೀಚರ್, ಸಾವಿತ್ರಿ ಕುಳಾಯಿ, ಶೋಭಾ ಚಿತ್ರಾಪುರ, ಚೇತನ ದತ್ತಾತ್ರೇಯ ಮತ್ತಿತರರಿದ್ದರು.ಇಂದು ಸಂಪನ್ನಗೊಂಡ ಚಪ್ಪರ ಮುಹೂರ್ತ ಮತ್ತು ಯಜ್ಞಕುಂಡ ಮುಹೂರ್ತದ ವೇಳೆ ಪವಾಡವೆಂಬಂತೆ ಗೋವುಗಳು ಆಗಮಿಸಿದವು. ಯಜ್ಞ ಕುಂಡ ಎಲ್ಲಿ ಹಾಕುವುದು ಎಂದು ತಂತ್ರಿಗಳೊಂದಿಗೆ ಚರ್ಚಿಸುತ್ತಿರುವ ಸಮಯದಲ್ಲಿ ಎರಡು ಗೋವುಗಳು ಮುಂದೆ ಬಂದು ಸರಿಯಾದ ದಿಕ್ಕಿಗೆ ಕೂತು ಆ ಜಾಗವನ್ನು ಗೋವುಗಳೇ ಸೂಚಿಸಿದ್ದು ಒಂದು ವಿಶೇಷವಾಗಿದ್ದು, ಶುಭ ಸೂಚನೆಯಾಗಿದೆ.