ಸಾರಾಂಶ
ಕನ್ನಡ ಪ್ರಭ ವಾರ್ತೆ ಚಿತ್ತಾಪುರ
ಚಿತ್ತಾಪುರ ಪಟ್ಟಣದ ನಾಗಾವಿ ಚೌಕ ನಿವಾಸಿ ಪರಶುರಾಮ ಎದುರುಮನಿ ಅವರ ಮನೆ ಮುಂದೆ ನಿಂತಿದ್ದ ಮೋಟಾರ್ ಸೈಕಲ್ ಕಳ್ಳತನ ಮಾಡಿರುವ ಆರೋಪಿ ಬಂಧಿಸಿ, ಆತನಿಂದ ಬೈಕ್ ವಶಪಡಿಸಿಕೊಳ್ಳಲಾಗಿದೆ.ಆ.೮ ರಂದು ಮನೆಯ ಮುಂದೆ ನಿಲ್ಲಿಸಿದ್ದ ಮೋಟಾರ್ ಸೈಕಲ್ ನಂ. ಕೆಎ-೩೨ ಈಡಿ ೨೧೮೭ ವಾಹನವು ಕಳವು ಆಗಿರುವ ಕುರಿತು ಚಿತ್ತಾಪುರ ಠಾಣೆಯಲ್ಲಿ ಪ್ರಕರಣ ದಾಖಲಾದ ಹಿನ್ನೆಲೆ, ಆರೋಪಿ ಪತ್ತೆಗಾಗಿ ಕಲಬುರಗಿ ಜಿಲ್ಲಾ ಎಸ್‌ಪಿ ಅಡ್ಡೂರ ಶ್ರೀನಿವಾಸಲು, ಅಪರ ಪೊಲೀಸ್ ಅಧೀಕ್ಷಕರಾದ ಶ್ರೀನಿಧಿ, ಡಿವೈಎಸ್‌ಪಿ ಶಂಕರಗೌಡ ಪಾಟೀಲ್, ಸಿಪಿಐ ಚಂದ್ರಶೇಖರ ತಿಗಡಿ ಮಾರ್ಗದರ್ಶನದಲ್ಲಿ ಚಿತ್ತಾಪುರ ಕ್ರೈಂ ಪಿಎಸ್‌ಐ ಚಂದ್ರಾಮಪ್ಪ ಬಳಚಕ್ರ, ಕಾ.ಸು. ಪಿಎಸ್‌ಐ ಶ್ರೀಶೈಲ ಅಂಬಾಟಿ ಹಾಗೂ ಸಿಬ್ಬಂದಿ ನಾಗೇಂದ್ರ, ಬಸವರಾಜ, ಸವಿಕುಮಾರ, ದತ್ತಾತ್ರೇಯ, ಶಿವಯ್ಯ ಸ್ವಾಮಿ, ಬಸವರಾಜ, ಮಂಜುನಾಥ, ಈರೇಶ, ಸಿದ್ದರಾಮೇಶ ಅವರನೊಳಗೊಂಡ ತಂಡವನ್ನು ರಚಿಸಿ ಸಂಶಾಯಾಶಸ್ಪದ ವ್ಯಕ್ತಿ ವಶಕ್ಕೆ ಪಡೆದುಕೊಂಡು ವಿಚಾರಣೆ ಮಾಡಲಾಗಿ ಆರೋಪಿ ಅಹಮದ್ ಸೈಯದ ಇಸ್ಮಾಯಿಲ್ ಶೇಖ ಸಾ. ತಾಂಡೂರ ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದು, ಕಳುವಾದ ಮೋಟಾರ್ ಸೈಕಲ್ ಮತ್ತು ಆರೋಪಿತನಿಂದ ಈ ಹಿಂದೆ ತೆಲಂಗಾಣ ರಾಜ್ಯದ ತಾಂಡೂರ ಸಮಿಪದ ಹಳ್ಳಿಯಲ್ಲಿ ಕಳ್ಳತನ ಮಾಡಿಕೊಂಡು ಬಂದಿರುವ ಮೋಟಾರ್ ಸೈಕಲ್ ಎಪಿ-೧೨ ಎನ್-೪೨೮೯ ವಾಹನವನ್ನು ಜಪ್ತಿ ಮಾಡಿಕೊಂಡು ನ್ಯಾಯಾಂಗ ಬಂದನಕ್ಕೆ ಒಪ್ಪಿಸಲಾಗಿದೆ.
ಸದರಿ ಪ್ರಕರಣವನ್ನು ಪತ್ತೆ ಹಚ್ಚಿ ಅಂತರ್ ರಾಜ್ಯ ಕಳ್ಳನನ್ನು ಬಂಧಿಸಿದ ಅಧಿಕಾರಿ ಹಾಗೂ ಸಿಬ್ಬಂದಿಗೆ ಮೇಲಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.