ಸಾರಾಂಶ
ಚಿತ್ತಾಪುರ ಪಟ್ಟಣದ ವಾರ್ಡ್ ೨೧, ೨೨, ೨೩ರಲ್ಲಿ ಹಮ್ಮಿಕೊಳ್ಳಲಾಗಿದ್ದು ಜನಸ್ಪಂದನಾ ಕಾರ್ಯಕ್ರಮದಲ್ಲಿ ವಾರ್ಡ್‌ಗಳಲ್ಲಿ ೫೧ ಅರ್ಜಿಗಳು ಸ್ವೀಕಾರಗೊಂಡಿವೆ ಎಂದು ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಚಿತ್ತಾಪುರ
ಜಿಲ್ಲಾಧಿಕಾರಿ ಆದೇಶದ ಮೇರೆಗೆ ಚಿತ್ತಾಪುರ ಪಟ್ಟಣದ ವಾರ್ಡ್ ೨೧, ೨೨, ೨೩ರಲ್ಲಿ ಹಮ್ಮಿಕೊಳ್ಳಲಾಗಿದ್ದು ಜನಸ್ಪಂದನಾ ಕಾರ್ಯಕ್ರಮದಲ್ಲಿ ವಾರ್ಡ್‌ಗಳಲ್ಲಿ ೫೧ ಅರ್ಜಿಗಳು ಸ್ವೀಕಾರಗೊಂಡಿವೆ ಎಂದು ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ ತಿಳಿಸಿದ್ದಾರೆ.ತಹಸೀಲ್ದಾರ ಅಧ್ಯಕ್ಷತೆಯಲ್ಲಿ ನಡೆದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆ, ಜೆಸ್ಕಾಂ, ಸಿಡಿಪಿಓ ಸೇರಿದಂತೆ ವಿವಿಧ ಇಲಾಖೆಗಳ ಕುರಿತು ಅರ್ಜಿಗಳು ಸಲ್ಲಿಕೆಯಾಗಿದ್ದು ಅತೀ ಹೆಚ್ಚು ಪುರಸಭೆ ಕುರಿತಾಗಿ ೨೨ ಅರ್ಜಿಗಳು, ಕಂದಾಯ ಇಲಾಖೆಯ ೧೫, ಜೆಸ್ಕಾಂ ಇಲಾಖೆಯ ೨, ಸಿಡಿಪಿಓ ಇಲಾಖೆಯ ೧೪ ಅರ್ಜಿಗಳು ಸ್ವೀಕರಗೊಂಡಿದ್ದು ಅವುಗಳಲ್ಲಿ ಕೆಲವು ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸಲಾಗಿದ್ದು ಬಾಕಿ ಉಳಿದ ಬೇಡಿಕೆಗಳಿಗೆ ಸ್ಥಳ ಪರಿಶೀಲನೆ ಮಾಡಿ ಆದ್ಯತೆ ಮೇಲೆ ಕ್ರಮ ವಹಿಸುವದಾಗಿ ಅರ್ಜಿದಾರರಿಗೆ ತಿಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಸಂದರ್ಬದಲ್ಲಿ ಪುರಸಭೆ ಸದಸ್ಯರಾದ ಪ್ರಭು ಗಂಗಾಣಿ, ರಮೇಶ ಬೊಮ್ಮನಳ್ಳಿ, ಕಂದಾಯ, ಪುರಸಭೆ ಆಧಿಕಾರಿಗಳು, ಸಿಬ್ಬಂದಿ ಇದ್ದರು.