ಒಂದು ದೇಶದ ಶಕ್ತಿ ಸಾಮರ್ಥ್ಯ, ಬೆಳವಣಿಗೆ, ಅಭಿವೃದ್ಧಿ, ಸ್ಥಿರವಾದ ಉತ್ತಮ ಆಡಳಿತ ಸೇರಿದಂತೆ ಪ್ರತಿಯೊಂದು ಅವಲಂಬಿಸಿರುವುದು ಮತದಾನದ ಶಕ್ತಿಯಲ್ಲಿ ಅಡಗಿದೆ ಎಂದು ಪ್ರಾಚಾರ್ಯ ಡಾ.ಎ.ವ್ಹಿ.ಸೂರ್ಯವಂಶಿ ಹೇಳಿದರು.
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಒಂದು ದೇಶದ ಶಕ್ತಿ ಸಾಮರ್ಥ್ಯ, ಬೆಳವಣಿಗೆ, ಅಭಿವೃದ್ಧಿ, ಸ್ಥಿರವಾದ ಉತ್ತಮ ಆಡಳಿತ ಸೇರಿದಂತೆ ಪ್ರತಿಯೊಂದು ಅವಲಂಬಿಸಿರುವುದು ಮತದಾನದ ಶಕ್ತಿಯಲ್ಲಿ ಅಡಗಿದೆ ಎಂದು ಪ್ರಾಚಾರ್ಯ ಡಾ.ಎ.ವ್ಹಿ.ಸೂರ್ಯವಂಶಿ ಹೇಳಿದರು.ಪಟ್ಟಣದ ಬಿಎಲ್‌ಡಿಇ ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶುಕ್ರವಾರ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಿ ಅವರು ಮಾತನಾಡಿದರು.
18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಪುರುಷ, ಮಹಿಳೆಯರು ಪ್ರಜಾಪ್ರಭುತ್ವದ ಹಬ್ಬವಾದ ಮತದಾನದಲ್ಲಿ ಅತ್ಯಂತ ಉತ್ಸಾಹದಿಂದ ಪಾಲ್ಗೊಳ್ಳಬೇಕು. ಮತದಾನದ ಸಂದರ್ಭದಲ್ಲಿ ಜಾತಿ, ಮತ, ಪಂಥಗಳನ್ನು ಗಮನಿಸದೆ ಉತ್ತಮ ಚಾರಿತ್ರ್ಯವಂತರು, ಪ್ರಜಾಪಾಲಕರು ಸಮಾಜದ ಕಟ್ಟಕಡೆ ವ್ಯಕ್ತಿಯನ್ನು ಪ್ರೀತಿ ವಾತ್ಸಲ್ಯದಿಂದ ಕಂಡು ಸಮಸ್ಯೆಗಳಿಗೆ ಸ್ಪಂದಿಸುವ ನಿಸ್ವಾರ್ಥ ವ್ಯಕ್ತಿಯನ್ನು ಆಯ್ಕೆಮಾಡುವುದು ನಮ್ಮೆಲ್ಲರ ಬಹುದೊಡ್ಡ ಜವಾಬ್ದಾರಿಯಾಗಿದೆ. ಆಯ್ಕೆಯಾದ ನಂತರ ಒಂದೇ ಸಮುದಾಯಕ್ಕೆ ಅಂಟಿಕೊಂಡು ಆಳ್ವಿಕೆ ಮಾಡುವಂತಹ ಅಭ್ಯರ್ಥಿಗಳನ್ನು ದೂರವಿಡುವ ಅಧಿಕಾರವನ್ನು ನಮ್ಮ ಸಂವಿಧಾನ ನಮಗೆ ನೀಡಿರುವುದರಿಂದ ಉತ್ತಮ ಜನನಾಯಕನನ್ನು ಆಯ್ಕೆಮಾಡಿಕೊಳ್ಳುವ ಹಬ್ಬದಲ್ಲಿ ಸಕ್ರಿಯರಾಗಬೇಕೆಂದರು.ಎನ್ಎಸ್ಎಸ್ ಘಟಕದ ಮುಖ್ಯಸ್ಥ ಡಾ.ವೈ.ಬಿ.ನಾಯಕ ಪ್ರತಿಜ್ಞಾ ವಿಧಿ ಬೋಧಿಸಿದರು. ಎಂ.ಕೆ.ಯಾದವ, ಆರ್.ಎನ್.ರಾಠೋಡ, ಪಿ.ಎಸ್.ನಾಟಿಕಾರ, ಸುಖದೇವ ಘಸ್ತಿ, ಡಾ.ಕಿರಣ ಸೂಡಿ, ಕಚೇರಿ ಮುಖ್ಯಸ್ಥ ಎಸ್.ಜಿ.ಪಾಟೀಲ, ಎಲ್.ಎಲ್.ರಾಠೋಡ, ಭೀಮು ಸಿಂಧೆ, ರೇಣುಕಾ ಹೇರಾಣವರ, ಜಿ.ಜಿ.ಪೂಜಾರಿ, ಬಸವರಾಜ ಮುದ್ದೇಬಿಹಾಳ, ಬಸಪ್ಪ ಮಾದರ, ಮಾರುತಿ ಕನಸೆ, ಟಿ.ಆರ್.ಗಜಾಕೋಶ ಹಾಗೂ ವಿದ್ಯಾರ್ಥಿಗಳು ಇದ್ದರು.