1979ರಲ್ಲಿ ಪ್ರಾರಂಭವಾದ ಸಿ.ಎಸ್.ಐ, ಕ್ರೈಸ್ತ ಮತ್ತು ನರ್ಸರಿ ಹಿರಿಯ ಪ್ರಾಥಮಿಕ ಶಾಲೆ ಅಂದು ಕೇವಲ 25 ವಿದ್ಯಾರ್ಥಿಗಳಿಂದ ಆರಂಭಿಸಿ ಇಂದು 400 ವಿದ್ಯಾರ್ಥಿಗಳು ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ತರೀಕೆರೆ

1979ರಲ್ಲಿ ಪ್ರಾರಂಭವಾದ ಸಿ.ಎಸ್.ಐ, ಕ್ರೈಸ್ತ ಮತ್ತು ನರ್ಸರಿ ಹಿರಿಯ ಪ್ರಾಥಮಿಕ ಶಾಲೆ ಅಂದು ಕೇವಲ 25 ವಿದ್ಯಾರ್ಥಿಗಳಿಂದ ಆರಂಭಿಸಿ ಇಂದು 400 ವಿದ್ಯಾರ್ಥಿಗಳು ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳನ್ನು ನಡೆಸುತ್ತ ಪೋಷಕರ ಸಹಕಾರದಿಂದ ವಿದ್ಯಾರ್ಥಿಗಳ ಸರ್ವೋತೋಮುಖ ಅಭಿವೃದ್ದಿಗಾಗಿ ಶಾಲೆ ಅವಿರತ ಸೇವೆ ಸಲ್ಲಿಸುತ್ತಿದೆ. ಪ್ರಾಂಶುಪಾಲರಾದ ಶಾಂತಿ ಜೆ.ಸೆಲ್ವಿನ್, ಸಮಾಜ ಸೇವಕ ಸೆಲ್ವಿನ್ ನೇತೃತ್ವದಲ್ಲಿ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಅಭಿವೃದ್ದಿ ಹೊಂದಲಿ ಎಂದು ಕರ್ನಾಟಕ ದಕ್ಷಿಣ ಪ್ರಾಂತ್ಯದ ಬಿಷಪ್ ಚಂದ್ರಕುಮಾರ್ ಹೇಳಿದರು.

ಸಿಎಸ್‌ಐ ಕ್ರಿಸ್ತ ನರ್ಸಿರಿ ಮತ್ತು ಹಿರಿಯ ಪ್ರಾಥಮಿಕ ಶಾಲಾ ಕ್ರಿಸ್ಮಸ್ ಮತ್ತು ಸಾಂಸ್ಕೃತಿಕ ಉತ್ಸವ 2025-26ರ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಿ.ಎಸ್.ಐ ಕ್ರಿಸ್ತ ಶಾಲಾ ವಿದ್ಯಾರ್ಥಿಗಳು ಓದಿನೊಂದಿಗೆ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ, ಮತ್ತು ಕರಾಟೆ ಸ್ಪರ್ಧೆಗಳಲ್ಲೂ ಭಾಗವಹಿಸಿ ತಾಲ್ಲೂಕು, ಜಿಲ್ಲೆ ಮತ್ತು ರಾಜ್ಯ ಮಟ್ಟದ ಸ್ಪರ್ಧೆಗಳಲ್ಲು ಪಾಲ್ಗೊಂಡಿರುವುದು ಹೆಮ್ಮೆಯ ವಿಷಯವಾಗಿದ್ದು ಈ ಶಾಲೆಗೆ ತಮ್ಮ ಎಲ್ಲ ಸಲಹೆ ಸಹಕಾರಗಳನ್ನು ಸದಾ ಕಾಲವು ನೀಡುವುದಾಗಿ ಹೇಳಿದರು.

ಸಿಎಸ್‌ಐ ಸೆಂಟ್ ಪೀಟರ್ಸ್‌ ಚರ್ಚ್‌ನ ಫಾದರ್ ಎಸ್.ಕೃಪಕಾರನ್, ಮಾಜಿ ಪುರಸಭಾ ಸದಸ್ಯ ಕೃಷ್ಣ, ಜಿ.ಎಚ್. ಶ್ರೀನಿವಾಸ್ ಜನಸೇವಾ ಟ್ರಸ್ಟ್‌ ಅಧ್ಯಕ್ಷೆ ವಾಣಿ ಶ್ರೀನಿವಾಸ್, ಮದರ್ ಆಶಾ, ಸಿಆರ್‌ಪಿಗಳಾದ ಶಿಲ್ಪ ವಸಂತ್, ಕಮಲ ಶಾಲಾ ಮುಖ್ಯ ಶಿಕ್ಷಕಿ ಶಾಂತಿ ಜೆ.ಸೆಲ್ವಿನ್, ಸಮಾಜ ಸೇವಕ ಸೆಲ್ವಿನ್, ವಿದ್ಯಾರ್ಥಿಗಳು, ಪೋಷಕರು ಹಾಜರಿದ್ದರು.

ವಿವಿಧ ಕ್ರೀಡಾ ಕೂಟ ಪ್ರತಿಭಾ ಕಾರಂಜಿ, ಕರಾಟೆ, ಇತರ ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆದ್ದ ಶಾಲಾ ವಿದ್ಯಾರ್ಥಿಗಳನ್ನು ಗೌರವಿಸಿ ಪ್ರೋತ್ಸಾಹಿಸಲಾಯಿತು. ನಂತರ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು.