ಚರ್ಚ್ ಧರ್ಮ ಗುರುಗಳಾದ ಘನ ರೆವರೆಂಟ್ ಜಾನ್ ಬಾಬು ಅವರ ಉಪಸ್ಥಿತಿಯಲ್ಲಿ ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ ನಡೆಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡವರು ಕ್ರಿಸ್ ಮಸ್ ಹಬ್ಬಕ್ಕೆ ಪರಸ್ಪರ ಶುಭಕೋರಿ ಸಿಹಿ ಹಚ್ಚುವ ಮೂಲಕ ಹಬ್ಬವನ್ನು ಸಂಭ್ರಮಿಸಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಎಂ ಎ ಗೋಪಾಲಸ್ವಾಮಿ ಹಾಗೂ ಕಾಂಗ್ರೆಸ್ ಮಹಿಳಾ ನಾಯಕಿ ಗೀತಾ ಗೋಪಾಲಸ್ವಾಮಿ ಕ್ರೈಸ್ತ ಬಾಂಧವರಿಗೆ ಕ್ರಿಸ್‌ಮಸ್ ಹಬ್ಬಕ್ಕೆ ಶುಭಕೋರಿದರು.
ಕನ್ನಡಪ್ರಭವಾರ್ತೆ ನುಗ್ಗೇಹಳ್ಳಿ
ಹೋಬಳಿ ಕೇಂದ್ರದ ಹಿರಿಸಾವೆ ರಸ್ತೆಯಲ್ಲಿರುವ ಸಿಎಸ್‌ಐ ಗ್ರೇಸ್ ದೇವಾಲಯದಲ್ಲಿ ಕ್ರೈಸ್ತರು ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುವ ಮೂಲಕ ಕ್ರಿಸ್‌ಮಸ್ ಹಬ್ಬವನ್ನು ಆಚರಿಸಿದ್ದರು.ಚರ್ಚ್ ಧರ್ಮ ಗುರುಗಳಾದ ಘನ ರೆವರೆಂಟ್ ಜಾನ್ ಬಾಬು ಅವರ ಉಪಸ್ಥಿತಿಯಲ್ಲಿ ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ ನಡೆಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡವರು ಕ್ರಿಸ್ ಮಸ್ ಹಬ್ಬಕ್ಕೆ ಪರಸ್ಪರ ಶುಭಕೋರಿ ಸಿಹಿ ಹಚ್ಚುವ ಮೂಲಕ ಹಬ್ಬವನ್ನು ಸಂಭ್ರಮಿಸಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಎಂ ಎ ಗೋಪಾಲಸ್ವಾಮಿ ಹಾಗೂ ಕಾಂಗ್ರೆಸ್ ಮಹಿಳಾ ನಾಯಕಿ ಗೀತಾ ಗೋಪಾಲಸ್ವಾಮಿ ಕ್ರೈಸ್ತ ಬಾಂಧವರಿಗೆ ಕ್ರಿಸ್‌ಮಸ್ ಹಬ್ಬಕ್ಕೆ ಶುಭಕೋರಿದರು. ಈ ಸಂದರ್ಭದಲ್ಲಿ ತಾಲೂಕು ಗ್ಯಾರಂಟಿ ಯೋಜನಾ ಸಮಿತಿ ಸದಸ್ಯ ನಿಶ್ಚಲ್ ಐಸಾಕ್, ಪ್ರಮುಖರಾದ ಭಾಗ್ಯ ಜೇಮ್ಸ್, ಮೇಬಲ್ ದೇವಪ್ರಸಾದ್, ಸಮೀಲ್ ಪ್ರಕಾಶ್, ಜಾನ್ ವಿಲ್ಸನ್, ಸಂಜಯ್, ಜೋಸೆಫ್, ಮಂಜುನಾಥ್, ಮೈಕಲ್, ಅಣ್ಣಪ್ಪ, ಆಲ್ವಿನ್, ಗುರು ಶಾಂತ, ಪ್ರಕಾಶ್, ಪಾರ್ವತಿ, ಅರುಣ ನಿಶ್ಚಲ್, ಮೊನಾಲಿಸಾ, ಸಿಮ್ರಾನ್, ಲೂಯಿಸ್ ಪ್ರಕಾಶ್, ಶೋಭಾ ಜಾನ್, ಜಯಶೀಲ, ಭಾಸ್ಕರ್, ಮುಖಂಡರಾದ ಲಕ್ಷ್ಮಣ್, ಫೈನಾನ್ಸ್ ಪ್ರಕಾಶ್, ಬಾಣನಕೆರೆ ಅಶೋಕ್ ಸೇರಿದಂತೆ ಇತರರು ಹಾಜರಿದ್ದರು.