200 ವರ್ಷಗಳ ಹಿಂದೆಯೇ ಶಿಕ್ಷಣ, ಸಾಹಿತ್ಯ ಹಾಗೂ ಧರ್ಮ ಪ್ರಸಾರಕ್ಕೆಂದು ಕ್ರೈಸ್ತರು ಧಾರವಾಡಕ್ಕೆ ಬಂದು ನೆಲೆಯೂರಿದ್ದರಿಂದ ಏಳು ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆ ಕ್ರೈಸ್ತರದ್ದಿದೆ. ಇಲ್ಲಿ ಪ್ರೊಟೆಸ್ಟೆಂಟ್ ಹಾಗೂ ಕ್ಯಾಥೋಲಿಕ್‌ನ ಎರಡೂ ಜನಾಂಗಗಳ ಸದಸ್ಯರಿದ್ದು, ಈಗಾಗಲೇ ಕ್ರಿಸ್‌ಮಸ್ ಹಬ್ಬದ ಸಂಭ್ರಮ ಎಲ್ಲೆಡೆ ನಡೆಯುತ್ತಿದೆ.
ಧಾರವಾಡ:
ಡಿಸೆಂಬರ್ ಬಂತೆಂದರೆ ಕ್ರೈಸ್ತರಿಗೆ ಇಡೀ ತಿಂಗಳು ಹಬ್ಬದ ವಾತಾವರಣ. ಯೇಸುಕ್ರಿಸ್ತನ ಜನ್ಮದಿನವಾಗಿ ಆಚರಿಸುವ ಕ್ರಿಸ್‌ಮಸ್ ಹಬ್ಬದಾಚರಣೆಗೆ ಈಗಾಗಲೇ ಧಾರವಾಡದಲ್ಲಿ ಕಳೆಗಟ್ಟಿದ್ದು, ಇಲ್ಲಿಯ ಎಲ್ಲ ಚರ್ಚ್‌ಗಳು ಹಾಗೂ ಕ್ರೈಸ್ತರು ಹಬ್ಬದಾಚರಣೆಗೆ ಸಿದ್ಧರಾಗಿದ್ದಾರೆ.ಸುಮಾರು 200 ವರ್ಷಗಳ ಹಿಂದೆಯೇ ಶಿಕ್ಷಣ, ಸಾಹಿತ್ಯ ಹಾಗೂ ಧರ್ಮ ಪ್ರಸಾರಕ್ಕೆಂದು ಕ್ರೈಸ್ತರು ಧಾರವಾಡಕ್ಕೆ ಬಂದು ನೆಲೆಯೂರಿದ್ದರಿಂದ ಏಳು ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆ ಕ್ರೈಸ್ತರದ್ದಿದೆ. ಇಲ್ಲಿ ಪ್ರೊಟೆಸ್ಟೆಂಟ್ ಹಾಗೂ ಕ್ಯಾಥೋಲಿಕ್‌ನ ಎರಡೂ ಜನಾಂಗಗಳ ಸದಸ್ಯರಿದ್ದು, ಈಗಾಗಲೇ ಕ್ರಿಸ್‌ಮಸ್ ಹಬ್ಬದ ಸಂಭ್ರಮ ಎಲ್ಲೆಡೆ ನಡೆಯುತ್ತಿದೆ.
ಐತಿಹಾಸಿಕ ಹೆಬಿಕ್ ಚರ್ಚ್:ಧಾರವಾಡದಲ್ಲಿ 188 ವರ್ಷಗಳ ಇತಿಹಾಸ ಹೊಂದಿರುವ ಹೆಬಿಕ್ ಚರ್ಚ್ ಇದ್ದು, ಇಡೀ ಕ್ರೈಸ್ತರ ಇತಿಹಾಸವನ್ನು ಬಿಂಬಿಸುತ್ತದೆ. ಇದರೊಂದಿಗೆ ಕರ್ನಾಟಕ ಉತ್ತರ ಸಭಾ ಪ್ರಾಂತ, ಬಾಸೆಲ್ ಮಿಶನ್ ಸಂಸ್ಥೆಗಳಿವೆ. ಇಲ್ಲಿಯ ಉತ್ತರ ಸಭಾ ಪ್ರಾಂತಕ್ಕೆ ರಾಜ್ಯದ 13 ಜಿಲ್ಲೆಗಳಲ್ಲಿರುವ 100 ದೇವಾಲಯಗಳು ಬರುತ್ತಿವೆ. ರೆ. ಮಾರ್ಟಿನ್ ಸಿ. ಬೋರ್ಗಾಯಿ ಬಿಷಪ್ ಇದ್ದಾರೆ. ಈ ಸಭಾ ಇದರೊಂದಿಗೆ ಸೆಂಟ್ ಜೋಸೆಫ್, ನಿರ್ಮಲ ನಗರದಲ್ಲಿ ಚರ್ಚ್‌ಗಳಿವೆ. ಈಗಾಗಲೇ ಎಲ್ಲ ಚರ್ಚ್‌ಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಿದ್ದು ಡಿ. 1ರಿಂದ ಯೇಸು ಆಗಮಿಸಿದ್ದು ಅಂದಿನಿಂದಲೇ ನಾಲ್ಕು ವಾರ ಹಬ್ಬದ ಸಿದ್ಧತೆ ನಡೆಯುತ್ತವೆ. ಡಿ. 24ರಂದು ಮಕ್ಕಳ ಕ್ರಿಸ್‌ಮಸ್, ಯೇಸು ಜನನದ ರೂಪಕಗಳ ಪ್ರದರ್ಶನ ನಡೆಯಲಿದೆ.
ಹಬ್ಬದ ಆಚರಣೆ:ಯೇಸುಕ್ರಿಸ್ತ್‌ನು ದನದ ಕೊಟ್ಟಿಗೆಯಲ್ಲಿ ಜನಿಸಿದ ಹಿನ್ನೆಲೆಯಲ್ಲಿ ಹಬ್ಬದ ನಿಮಿತ್ತ ಪ್ರತಿ ಕ್ರೈಸ್ತರ ಮನೆಗಳಲ್ಲಿ ಪುಟ್ಟದಾದ ಕೊಟ್ಟಿಗೆ ನಿರ್ಮಿಸಿ ಯೇಸು ಜನನದ ಗೊಂಬೆಗಳನ್ನಿಡಲಾಗಿದೆ. ಕ್ರಿಸ್‌ಮಸ್ ವೃಕ್ಷ ಇಟ್ಟು ಅಲಂಕಾರ ಮಾಡಲಾಗಿದೆ. ಹಬ್ಬದ ಅಂಗವಾಗಿ ವಿಶೇಷ ಕೇಕ್, ಸಿಹಿ ತಿಂಡಿಗಳನ್ನು ತಯಾರಿಸಲಾಗಿದೆ. ಬಡವರಿಗೆ ಬಟ್ಟೆ ವಿತರಣೆ, ಉಡುಗೊರೆ ನೀಡುವುದು ಸಹ ಹಬ್ಬದ ಸಂಪ್ರದಾಯ. ಈ ಹಬ್ಬದಲ್ಲಿ ಮಕ್ಕಳಿಗೆ ಉಡುಗೊರೆ ಕೊಡಲು ಸಾಂತಾ ಕ್ಲಾಸ್ ಸಹ ಬರುತ್ತಾನೆ ಎಂಬ ನಂಬಿಕೆ ಕ್ರೈಸ್ತರಲ್ಲಿದೆ.
ಕ್ರಿಸ್‌ಮಸ್ ಸಮಯದಲ್ಲಿ ಸಮೂಹ ಗೀತೆ ಹಾಡುವ ಪದ್ಧತಿ ಹಲವು ವರ್ಷಗಳಿಂದ ಇದೆ. ಚರ್ಚ್‌ಗಳಲ್ಲಿ ಹಬ್ಬದ ಆಚರಣೆ ಕುರಿತಾಗಿ ಹಾಡು ಮತ್ತು ನೃತ್ಯ ಇರುತ್ತದೆ. ಹಬ್ಬದಲ್ಲಿ ಮೇಣಬತ್ತಿ ಸಹ ಮಹತ್ವ ಪಡೆದಿದ್ದು, ಕ್ರೈಸ್ತರ ಚರ್ಚ್‌ಗಳಲ್ಲಿ ಕ್ಯಾಂಡಲ್ ಮಾಸ್ ಎಂಬ ವಿಶೇಷ ಉತ್ಸವ ಸಹ ನಡೆಯಲಿದೆ. ಇದು ಹಬ್ಬಕ್ಕೆ ಮತ್ತಷ್ಟು ಮೆರಗು ತರಲಿದೆ.ಯೇಸುವಿನ ಜನ್ಮಸ್ಥಳಕ್ಕೆ ಭೇಟಿ...ಈ ಬಾರಿಯ ಕ್ರಿಸ್‌ಮಸ್ ನಮಗೆಲ್ಲ ಮತ್ತಷ್ಟು ಸಂತಸ ತಂದಿದೆ. ಬೆಂಗಳೂರಿನ ಎಎಫ್‌ಬಿ ಬೋರ್ಡ್ ವತಿಯಿಂದ ಯೇಸುಕ್ರಿಸ್ತ ಹುಟ್ಟಿದ ಇಸ್ರೇಲಿನ ಬೆತ್ಲೆಹೇಮ್‌ಗೆ ಹೋಗಿ ಬಂದಿದ್ದು, ಯೇಸುವಿನ ಜನ್ಮಸ್ಥಳ, ಅಲ್ಲಿ ಮಾಡಿದ್ದ ಕಾರ್ಯಗಳನ್ನು ನೋಡಿದೆವು. ನಾವು ನಂಬಿದ ಆರಾಧ್ಯ ದೈವದ ಮೂಲ ಸ್ಥಳದ ಮಹತ್ವ ಅರಿತಿದ್ದು, ಜೀವನ ಸಾರ್ಥಕಗೊಂಡಿದೆ.
ವಿಲ್ಸನ್ ಮೈಲಿ, ಉತ್ತರ ಸಭಾ ಪ್ರಾಂತದ ಕಾರ್ಯದರ್ಶಿ