ಬಲಿಪೂಜೆ ಮತ್ತು ಸಾಮೂಹಿಕ ಪ್ರಾರ್ಥನೆಯಲ್ಲಿ ಏಸುಕ್ರೈಸ್ತರನ್ನು ಸ್ಮರಿಸುತ್ತ, ಶಾಂತಿದೂತ ಏಸುಕ್ರಿಸ್ತರು ಸಾಧಕರಲ್ಲಿ ವಿಶಿಷ್ಟ ಸಾಧಕರು ಎಂದು ನಗರದ ಸಂತ ಪೌಲರ ದೇವಾಲಯದ ಫಾದರ್ ಸಿ. ಆಂತೋಣಪ್ಪ ಹೇಳಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಜಿಲ್ಲೆಯಾದ್ಯಂತ ಬುಧವಾರ ಮಧ್ಯ ರಾತ್ರಿಯಿಂದ ಗುರುವಾರದವರೆಗೆ ಕ್ರೈಸ್ರ ಬಾಂಧವರಿಂದ ಸಂಭ್ರಮ ಮತ್ತು ಶ್ರದ್ಧೆಯಿಂದ ಕ್ರಿಸ್‌ಮಸನ್ನು ಆಚರಿಸಲಾಯಿತು.ಜಿಲ್ಲಾ ಕೇಂದ್ರ ಚಾಮರಾಜನಗರದ ಜೋಡಿ ರಸ್ತೆಯಲ್ಲಿರುವ ಸಂತ ಪೌಲರ ದೇವಾಲಯದದಲ್ಲಿ ಕ್ರಿಸ್‌ಮಸ್ ಅಂಗವಾಗಿ ಡಿ. 24ರ ಬುಧವಾರ ಮಧ್ಯ ರಾತ್ರಿ ಹಮ್ಮಿಕೊಂಡಿದ್ದ ಬಲಿಪೂಜೆ ಮತ್ತು ಸಾಮೂಹಿಕ ಪ್ರಾರ್ಥನೆಯಲ್ಲಿ ಏಸುಕ್ರೈಸ್ತರನ್ನು ಸ್ಮರಿಸುತ್ತ, ಶಾಂತಿದೂತ ಏಸುಕ್ರಿಸ್ತರು ಸಾಧಕರಲ್ಲಿ ವಿಶಿಷ್ಟ ಸಾಧಕರು ಎಂದು ನಗರದ ಸಂತ ಪೌಲರ ದೇವಾಲಯದ ಫಾದರ್ ಸಿ. ಆಂತೋಣಪ್ಪ ಹೇಳಿದರು.ಜಗತ್ತಿನ ಶಾಂತಿಗಾಗಿ, ಶಾಂತಿದೂತ ಏಸುಕ್ರಿಸ್ತರ ಸಂದೇಶವನ್ನು ಸಾರೋಣ, ಏಸುಕ್ರೈಸ್ತರು ಜನಿಸಿ 2000 ವರ್ಷಗಳಾದರು ಅವರು ಜನಮಾನಸದಲ್ಲಿ ಉಳಿದಿದ್ದು, ಸಾವಿರಾರು ಜನರು ಅವರ ಹಿಂಬಾಲಕರಾಗಿ ಅವರನ್ನು ನಿತ್ಯವು ಸ್ಮರಿಸುತ್ತಾ ಅಹಿಂಸಾ ಮತ್ತು ಶಾಂತಿ ಮಾರ್ಗದಲ್ಲಿ ನಡೆಯುತ್ತಿರುವುದೇ ಕ್ರಿಸ್ತರ ವಿಶಿಷ್ಟ ಸಾಧನೆಗೆ ಸಾಕ್ಷಿ, ಅವರು ನಮ್ಮ ನಿಮ್ಮಗಳ ಜೊತೆಯಲ್ಲಿ ಇದ್ದಾರೆ.ಪುಟ್ಟ ಬಾಲಕಿಯ ಹೊಟ್ಟೆಯಲ್ಲಿ ಹುಟ್ಟಿ ತಮ್ಮ ಜೀವಮಾನದಲ್ಲಿ ಯಾರಿಗೂ ನೋವುಂಟು ಮಾಡದೇ, ಶತ್ರುಗಳನ್ನು ಪ್ರೀತಿಸು, ಶಿಕ್ಷಿಸಿದರು ಸಹಿಸಿಕೋ ಎಂಬ ಮಹಾನ್ ಶಾಂತಿ ಮಂತ್ರವನ್ನು ತಿಳಿಸಿದ್ದಾರೆ ಎಂದರು.ಸಾಧಕರಲ್ಲಿ ಕೆಲವರು ರಾಜಭೋಗದಲ್ಲಿ ಹುಟ್ಟಿ ಸಾಧನೆ ಮಾಡಿದ್ದಾರೆ ಆದರೆ ಕ್ರಿಸ್ತರು ಕುರಿ ಕೊಟ್ಟಿಗೆಯಲ್ಲಿ ಹುಟ್ಟಿ, ಅನೇಕ ಕಷ್ಟಗಳನ್ನು ಅನುಭವಿದ ದೇವಮಾನವರು, ಶಾಂತಿ ಅಹಿಂಸೆ ಮಾರ್ಗವನ್ನು ಬೋಧಿಸಿ, ಮಾನವ ಕಲ್ಯಾಣವನ್ನು ಬಯಸಿದವರು ಎಂದರು.ದೇವಮಾನವನ ಸಂದೇಶದಂತೆ ಜಗತ್ತಿನಲ್ಲಿ ಶಾಂತಿ ನೆಲಸಿ, ಮಾನವರು ಸಮೃದ್ಧಿಯಿಂದ ಬಾಳಲಿ ಎಂದು ಎಲ್ಲರು ಪ್ರಾರ್ಥಿಸೋಣ, ಏಸು ಕ್ರಿಸ್ತರ ಜನನವಾದ ಪುಣ್ಯ ದಿನವಾದ ಇಂದು ನಾವು ಮಾಡಿದ ತಪ್ಪುಗಳನ್ನು ಕ್ಷಮಿಸು ಆ ದೇವರಲ್ಲಿ ಪ್ರಾರ್ಥಿಸೋಣ ಎಂದರು, ಕ್ರಿಸ್‌ಮಸ್ ಅಂಗವಾಗಿ ಚರ್ಚ್‌ಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು, ಚರ್ಚ್‌ಗಳ ಮುಂಭಾಗದಲ್ಲಿ ಏಸು ಜನವನ್ನು ನೆನಪಿಸುವ ಗೋದೊಳಿ ಮತ್ತು ಮಾತೆ ಮೇರಿಯನ್ನು ವಿಶಿಷ್ಟವಾಗಿ ಅಲಂಕರಿಸಿದ್ದರು. ಕ್ರೈಸ್ತಬಾಂಧವರು ಮನೆಗಳ ಮುಂದೆ ಸ್ಟಾರ್‌ಗಳನ್ನು ಕಟ್ಟಿ ಏಸುವನ್ನು ಸ್ವಾಗತಿಸಿದರು. ಹೊಸ ಉಡುಗೆಗಳನ್ನು ತೊಟ್ಟು, ಚರ್ಚ್‌ಗಳಿಗೆ ತೆರಳಿ ಸಾಮೂಹಿಕ ಪ್ರಾರ್ಥನೆಗಳಲ್ಲಿ ಭಾಗವಹಿಸಿ ಪರಸ್ಪರ ಶುಭಾಶಯ ಕೋರಿ, ಕೇಕ್‌ಗಳನ್ನು ನೀಡಿದರು, ಭಾನುವಾರ ಬೆಳಗ್ಗೆಯಿಂದ ಸಂಜೆಯವರೆಗೂ ತಮ್ಮ ತಮ್ಮ ಮನೆಗಳಲ್ಲಿ ಭಕ್ಷ್ಯ ಭೋಜನಗಳನ್ನು ಮಾಡಿ, ನೆಂಟರಿಷ್ಟರನ್ನು ಕರೆದು ಸಹಪಂಕ್ತಿ ಭೋಜನ ಮಾಡಿದರು.ಚರ್ಚ್‌ಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.-------೨೫ಸಿಎಚ್‌ಎನ್ ೨ಕ್ರಿಸ್‌ಮಸ್ ಅಂಗವಾಗಿ ಚಾಮರಾಜನಗರದಲ್ಲಿ ಕ್ರೈಸ್ತ ಬಾಂಧವರು ಶನಿವಾರ ಮಧ್ಯರಾತ್ರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ----------೨೫ಸಿಎಚ್‌ಎನ್೩ಚಾಮರಾಜನಗರದ ಸಂತ ಪೌಲರ ದೇವಾಲಯದದಲ್ಲಿ ಫಾದರ್ ಸಿ. ಆಂತೋಣಪ್ಪ ಧರ್ಮ ಬೋಧನೆ ಮಾಡಿದರು.-----೨೫ಸಿಎಚ್‌ಎನ್೪ಕ್ರಿಸ್‌ಮಸ್ ಅಂಗವಾಗಿ ಚಾಮರಾಜನಗರದ ಸಂತ ಪೌಲರ ದೇವಾಲಯವನ್ನು ವಿದ್ಯುತ್ ದ್ವೀಪಗಳಿಂದ ಅಲಂಕರಿಸಿರುವುದು.----------೨೫ಸಿಎಚ್ ಎನ್೫ಚಾಮರಾಜನಗರದ ಸಂತ ಪೌಲರ ದೇವಾಲಯದ ಮುಂಭಾಗ ಕ್ರಿಸ್‌ಮಸ್ ಅಂಗವಾಗಿ ಏಸು ಜನವನ್ನು ನೆನಪಿಸುವ ಗೋದೊಳಿ ನಿರ್ಮಿಸಿ ಬಾಲ ಯೇಸುವನ್ನು ಪ್ರತಿಷ್ಠಾಪಿಸಲಾಯಿತು.