ಪಟ್ಟಣದ ಸಂತ ಜೋಸೆಫರ ವಿದ್ಯಾಸಂಸ್ಥೆ ಆವರಣದಲ್ಲಿರುವ ಜಯವೀರಮಾತೆ ದೇವಾಲಯದಲ್ಲಿ ಕ್ರಿಸ್‌ಮಸ್ ಹಾಗೂ ನೂತನ ವರ್ಷಾಚರಣೆ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಪಟ್ಟಣದ ಸಂತ ಜೋಸೆಫರ ವಿದ್ಯಾಸಂಸ್ಥೆ ಆವರಣದಲ್ಲಿರುವ ಜಯವೀರಮಾತೆ ದೇವಾಲಯದಲ್ಲಿ ಕ್ರಿಸ್‌ಮಸ್ ಹಾಗೂ ನೂತನ ವರ್ಷಾಚರಣೆ ಕಾರ್ಯಕ್ರಮ ನಡೆಯಿತು.ಜಯವೀರಮಾತೆ ದೇವಾಲಯದ ಫಾದರ್ ಅವಿನಾಶ್ ಅವರು ಮಾತನಾಡಿ, ಸಮಾಜದಿಂದ ನಾವು ಎಲ್ಲವನ್ನೂ ಪಡೆಯುತ್ತೇವೆ. ಹಾಗೆಯೇ ಸಮಾಜಕ್ಕೂ ನಮ್ಮ ಕೊಡುಗೆ ಇರಬೇಕು. ಮನುಷ್ಯ ಇರುವವರೆಗೆ ಸಂತೋಷವಾಗಿರಬೇಕು. ಜೀವನದಲ್ಲಿ ಆದರ್ಶಗಳನ್ನು ಹೊಂದಬೇಕು. ಈ ನಿಟ್ಟಿನಲ್ಲಿ ನೂತನ ವರ್ಷ ಸಮಾಜಕ್ಕೆ ಹರ್ಷ ತರಲಿ ಎಂದು ಆಶಿಸಿದರು. ಈ ಸಂದರ್ಭ ದೇವಾಲಯದ ಪಾಲನಾ ಸಮಿತಿ ಅಧ್ಯಕ್ಷೆ ಶೀಲಾ ಡಿಸೋಜ, ಸದಸ್ಯರಾದ ಕೆ.ಜೆ. ಸುನಿಲ್, ವಿ.ಎ. ಲಾರೆನ್ಸ್, ಜೋಕಿಂ, ಹ್ಯಾರಿ ಮೋರಸ್, ಹ್ಯೂಬರ್ಟ್ ಡಿಸೋಜ, ವಿನ್ಸಿ ಡಿಸೋಜ, ಬಾಬು, ಅಬ್ಬೂರುಕಟ್ಟೆ ಚರ್ಚ್ನ ಎಸ್.ಎಂ.ಡಿಸಿಲ್ವಾ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಕೃಷ್ಣಪ್ಪ, ಅಕ್ರಮ ಸಕ್ರಮ ಸಮಿತಿ ಸದಸ್ಯ ಬಿ.ಬಿ. ಸತೀಶ್ ಸೇರಿದಂತೆ ಇತರರು ಇದ್ದರು. ಕಾರ್ಯಕ್ರಮದ ಅಂಗವಾಗಿ ಸಹಭೋಜನ ಆಯೋಜಿಸಲಾಗಿತ್ತು.