ಚುಟುಕು ಸಾಹಿತ್ಯ ಸಮ್ಮೇಳನ ಆಯೋಜನೆಗೆ ಮುಂದಾಗಿ: ಗುಮಗೇರಿ

| Published : Nov 08 2025, 02:30 AM IST

ಚುಟುಕು ಸಾಹಿತ್ಯ ಸಮ್ಮೇಳನ ಆಯೋಜನೆಗೆ ಮುಂದಾಗಿ: ಗುಮಗೇರಿ
Share this Article
  • FB
  • TW
  • Linkdin
  • Email

ಸಾರಾಂಶ

ಚುಟುಕು ಕವಿ ಗೋಷ್ಠಿ ಜತೆಗೆ ಚುಟುಕು ರಚನೆ ಮಾಡುವ ಕಾರ್ಯಾಗಾರ ಮಾಡುವದು ಸೂಕ್ತ ಇದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ನವೆಂಬರ್ ತಿಂಗಳಲ್ಲಿ ಕನ್ನಡ ಪರ ವೈವಿಧ್ಯಮಯ ಕಾರ್ಯಕ್ರಮ ನಡೆಯಬೇಕು

ಕುಷ್ಟಗಿ: ಕುಷ್ಟಗಿಯಲ್ಲಿ ತಾಲೂಕು ಮಟ್ಟದ ಚುಟುಕು ಸಮ್ಮೇಳನ ಆಯೋಜನೆಗೆ ಮುಂದಾಗಬೇಕು ಎಂದು ಕಸಾಪ ಮಾಜಿ ಅಧ್ಯಕ್ಷ ಹನುಮೇಶ ಗುಮಗೇರಿ ಹೇಳಿದರು.

ಪಟ್ಟಣದ ಬಸವ ಭವನದಲ್ಲಿ ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನ. 9ರಂದು ಕೊಪ್ಪಳದಲ್ಲಿ ನಡೆಯುವ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಯಶಸ್ವಿಗೊಳಿಸಿ ಮುಂದಿನ ದಿನಗಳಲ್ಲಿ ನಮ್ಮ ಕುಷ್ಟಗಿ ತಾಲೂಕಿನಲ್ಲಿಯೂ ತಾಲೂಕು ಮಟ್ಟದ ಸಮ್ಮೇಳನ ಮಾಡಬೇಕು ಎಂದರು.

ಹಿರಿಯ ಪತ್ರಕರ್ತ ರವೀಂದ್ರ ಬಾಕಳೆ ಮಾತನಾಡಿ, ಚುಟುಕು ಕವಿ ಗೋಷ್ಠಿ ಜತೆಗೆ ಚುಟುಕು ರಚನೆ ಮಾಡುವ ಕಾರ್ಯಾಗಾರ ಮಾಡುವದು ಸೂಕ್ತ ಇದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ನವೆಂಬರ್ ತಿಂಗಳಲ್ಲಿ ಕನ್ನಡ ಪರ ವೈವಿಧ್ಯಮಯ ಕಾರ್ಯಕ್ರಮ ನಡೆಯಬೇಕು ಎಂದರು.

ಶಿಕ್ಷಕ ನಟರಾಜ ಸೋನಾರ ಮಾತನಾಡಿ, ತಾಲೂಕಿನಲ್ಲಿ ಸಾಹಿತ್ಯದ ವಾತಾವರಣ ನಿರ್ಮಾಣ ಮಾಡಬೇಕು, ಅದಕ್ಕೆ ಸಹಕರಿಸುವ ಮೂಲಕ ಕಾರ್ಯಕ್ರಮ ಯಶಸ್ವಿಯಾಗಿ ಮಾಡೋಣ ಎಂದು ಹೇಳಿದರು.

ಸಾಹಿತಿ ವೆಂಕಟೇಶ ಚಾಗಿ ಮಾತನಾಡಿ, ಎಲೆ ಮರೆಯ ಕಾಯಿಯಂತಿರುವ ಪ್ರತಿಭೆಗಳಿಗೆ ಅವಕಾಶ ಸಿಗಬೇಕು, ಕಥೆ, ಕವಿತೆ,ಲೇಖನಗಳನ್ನು ಬರೆಯುವ ಹವ್ಯಾಸ ಹಲವರಲ್ಲಿ ಇದೆ ಅವರನ್ನು ಪ್ರೋತ್ಸಾಹಿಸುವ ಅವಶ್ಯಕತೆ ಇದೆ ಎಂದು ಹೇಳಿದರು.

ತಾಲೂಕು ಚುಟುಕು ಸಾಹಿತ್ಯ ಪರಿಷತ್‌ ಅಧ್ಯಕ್ಷ ಮಹೇಶ ಹಡಪದ ಮಾತನಾಡಿ, ಕನ್ನಡ ರಾಜ್ಯೋತ್ಸವದ ತಿಂಗಳು ಇರುವುದರಿಂದ ತಾಲೂಕು ಮಟ್ಟದ ಚುಟುಕು ಕವಿ ಗೋಷ್ಠಿ ಮಾಡಲಾಗುತ್ತದೆ ಕಾರಣ ಪ್ರತಿಯೊಬ್ಬರ ಸಹಕಾರ ನೀಡಬೇಕು ಹಾಗೂ ನ. 9 ರಂದು ಕೊಪ್ಪಳದಲ್ಲಿ ನಡೆಯುವ ಚುಟುಕು ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ತಾಲೂಕಿನ ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.

ಶಿಕ್ಷಕ ಹನಮಂತಪ್ಪ ಪುರ್ತಗೇರಿ, ರಾಜೇಸಾಬ್‌ ನದಾಫ, ಹಿರಿಯ ಶಿಕ್ಷಕ ಕುಮಾರಸ್ವಾಮಿ ಹಿರೇಮಠ ಮಾತನಾಡಿ, ಚುಟುಕು ಸಾಹಿತ್ಯ ಪರಿಷತ್ತಿನ ಕಾರ್ಯಚಟುವಟಿಕೆ ನಿರಂತರವಾಗಿ ನಡೆಯಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಚುಸಾಪ ಕಾರ್ಯದರ್ಶಿ ವಿಶ್ವನಾಥ ಅಂಬ್ಲಿಕೊಪ್ಪಮಠ, ಸುರೇಶ ಕೊರವರ, ಬುಡ್ನೇಸಾಬ್‌ ಕಲಾದಗಿ, ಪತ್ರಕರ್ತ ಪರಶಿವಮೂರ್ತಿ ದೋಟಿಹಾಳ, ಅನೀಲಕುಮಾರ ಕಮ್ಮಾರ, ಸಂಗಮೇಶ ಲೂತಿಮಠ ಸೇರಿದಂತೆ ಅನೇಕರು ಇದ್ದರು.