ಸಿನಿಮಾದಲ್ಲಿ ತೋರಿಸುವಂತೆ ಬ್ಲಾಸ್ಟ್‌ ಆಯಿತು!

| Published : Mar 02 2024, 01:53 AM IST

ಸಿನಿಮಾದಲ್ಲಿ ತೋರಿಸುವಂತೆ ಬ್ಲಾಸ್ಟ್‌ ಆಯಿತು!
Share this Article
  • FB
  • TW
  • Linkdin
  • Email

ಸಾರಾಂಶ

ಸಿನಿಮಾದಲ್ಲಿ ಬಾಂಬ್‌ ಬ್ಲಾಸ್ಟ್‌ ಆಗುವ ಹಾಗೆ ಹೋಟೆಲ್‌ ಒಳಗೆ ಬ್ಲಾಸ್ಟ್‌ ಆಯಿತು. ನನ್ನ ಮುಖದ ಮುಂದೆಯೇ ಹಲವು ವಸ್ತುಗಳು ಬಿದ್ದವು. ಬ್ಲಾಸ್ಟ್‌ ಶಬ್ಧ ಬಹಳ ಜೋರಾಗಿ ಕೇಳಿಸಿತು ಎಂದು ರಾಮೇಶ್ವರ ಕೆಫೆ ಸೆಕ್ಯೂರಿಟಿ ಗಾರ್ಡ್‌ ಸಚಿನ್‌ ಲಮಾಣಿ ತಾವು ಪ್ರತ್ಯಕ್ಷವಾಗಿ ಕಂಡ ಘಟನೆಯನ್ನು ವಿವರಿಸಿದರು.

- ಬೆಂಗಳೂರಿನ ಹೋಟೆಲ್‌ನಲ್ಲಿ ಸಂಭವಿಸಿದ ಸ್ಫೋಟದ ಭೀಕರತೆಯನ್ನು ಬಿಚ್ಚಿಟ್ಟ ಪ್ರತ್ಯಕ್ಷದರ್ಶಿ ಸೆಕ್ಯೂರಿಟಿ ಗಾರ್ಡ್‌ ಕನ್ನಡಪ್ರಭ ವಾರ್ತೆ ಬೆಂಗಳೂರುಸಿನಿಮಾದಲ್ಲಿ ಬಾಂಬ್‌ ಬ್ಲಾಸ್ಟ್‌ ಆಗುವ ಹಾಗೆ ಹೋಟೆಲ್‌ ಒಳಗೆ ಬ್ಲಾಸ್ಟ್‌ ಆಯಿತು. ನನ್ನ ಮುಖದ ಮುಂದೆಯೇ ಹಲವು ವಸ್ತುಗಳು ಬಿದ್ದವು. ಬ್ಲಾಸ್ಟ್‌ ಶಬ್ಧ ಬಹಳ ಜೋರಾಗಿ ಕೇಳಿಸಿತು ಎಂದು ರಾಮೇಶ್ವರ ಕೆಫೆ ಸೆಕ್ಯೂರಿಟಿ ಗಾರ್ಡ್‌ ಸಚಿನ್‌ ಲಮಾಣಿ ತಾವು ಪ್ರತ್ಯಕ್ಷವಾಗಿ ಕಂಡ ಘಟನೆಯನ್ನು ವಿವರಿಸಿದರು.ನಾನು ಹೊರಗಡೆ ಡ್ಯೂಟಿ ಮಾಡುತ್ತಿದ್ದೆ. ಮಧ್ಯಾಹ್ನ ಹೋಟೆಲ್‌ ಒಳಗೆ ಊಟಕ್ಕೆ ತೆರಳಲು ಚೇರ್‌ನಿಂದ ಮೇಲಕ್ಕೆ ಏಳುವಾಗ ಏಕಾಏಕಿ ದೊಡ್ಡ ಶಬ್ದ ಕೇಳಿಸಿತು. ದಟ್ಟ ಹೊಗೆ ಆವರಿಸಿ, ಗ್ರಾಹಕರು ಹೋಟೆಲ್‌ ಒಳಗಿನಿಂದ ಹೊರಗೆ ಓಡಿ ಬಂದರು. ಹೋಟೆಲ್‌ನ ಗ್ಲಾಸ್‌ಗಳು, ಪೀಠೋಪಕರಣಗಳು ಚೂರು ಚೂರಾದವು. ಸುಮಾರು 8-10 ಜನರು ಗಾಯಗೊಂಡು ಹೊರಗೆ ಓಡಿ ಬಂದರು. ನಾನೇ ಗಾಯಾಳು ಮಹಿಳೆಯೊಬ್ಬರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದೆ ಎಂದು ಹೇಳಿದರು.ಸಿನಿಮಾದಲ್ಲಿ ಬಾಂಬ್‌ ಬ್ಲಾಸ್ಟ್‌ ಆಗುವ ರೀತಿ ಹೋಟೆಲ್‌ನಲ್ಲಿ ಬ್ಲಾಸ್ಟ್‌ ಆಯಿತು. ಶೌಚಾಲಯದ ಬಳಿ ಟಿಫನ್‌ ಬಾಕ್ಸ್‌ ಬಿದ್ದಿತ್ತು. ಅಲ್ಲೇ ಸ್ಫೋಟ ಸಂಭವಿಸಿದೆ. ಕಳೆದ ಮೂರು ತಿಂಗಳಿಂದ ಇಲ್ಲಿ ಸೆಕ್ಯೂರಿಟಿ ಗಾರ್ಡ್‌ ಕೆಲಸ ಮಾಡುತ್ತಿದ್ದೇನೆ. ಶುಕ್ರವಾರ ಮತ್ತು ಶನಿವಾರ ಹೆಚ್ಚಿನ ಸಂಖ್ಯೆಯಲ್ಲಿ ಜನರು ಹೋಟೆಲ್‌ಗೆ ಬರುತ್ತಾರೆ. ಸ್ಫೋಟದ ಸಂದರ್ಭದಲ್ಲಿ ಹೋಟೆಲ್‌ನಲ್ಲಿ ಸಾಕಷ್ಟು ಜನರು ಇದ್ದರು ಎಂದು ಘಟನೆ ಕುರಿತು ಮಾಹಿತಿ ನೀಡಿದರು.