ಸಾಮಾಜಿಕ ಸಂದೇಶ ಸಾರುವ ಸಿನಿಮಾ ಇಂದಿನ ಅಗತ್ಯ: ಶಾಸಕ ಗೋವಿಂದಪ್ಪ

| Published : Jan 08 2024, 01:45 AM IST

ಸಾರಾಂಶ

ಸಾಮಾಜಿಕ ಸಂದೇಶ ಸಾರುವ ಮಕ್ಕಳ ಸಿನಿಮಾಗಳು ಪ್ರಸ್ತುತ ಕಾಲಘಟ್ಟದಲ್ಲಿ ಅವಶ್ಯಕವಾಗಿದೆ ಎಂದು ಶಾಸಕ ಬಿಜಿ ಗೋವಿಂದಪ್ಪ ಹೇಳಿದರು. ಪಟ್ಟಣದ ಜಯದೇವ ಸಮುದಾಯ ಭವನದಲ್ಲಿ ಭಾನುವಾರ ಕನಕ ಮಾರ್ಗ ಮಕ್ಕಳ ಚಲನಚಿತ್ರ ಪ್ರಿಮಿಯರ್ ಶೋ ಉಚಿತ ಪ್ರದರ್ಶನ ಹಾಗೂ ಕನಕ ನೌಕರರ ಸಂಘದ 2024ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕನಕ ಮಾರ್ಗ ಚಲನಚಿತ್ರ ಪ್ರಿಮಿಯರ್ ಶೋ ಉದ್ಘಾಟಿಸಿ ಶಾಸಕ ಗೋವಿಂದಪ್ಪ

ಕನ್ನಡಪ್ರಭ ವಾರ್ತೆ ಹೊಸದುರ್ಗ

ಸಾಮಾಜಿಕ ಸಂದೇಶ ಸಾರುವ ಮಕ್ಕಳ ಸಿನಿಮಾಗಳು ಪ್ರಸ್ತುತ ಕಾಲಘಟ್ಟದಲ್ಲಿ ಅವಶ್ಯಕವಾಗಿದೆ ಎಂದು ಶಾಸಕ ಬಿಜಿ ಗೋವಿಂದಪ್ಪ ಹೇಳಿದರು.ಪಟ್ಟಣದ ಜಯದೇವ ಸಮುದಾಯ ಭವನದಲ್ಲಿ ಭಾನುವಾರ ಕನಕ ಮಾರ್ಗ ಮಕ್ಕಳ ಚಲನಚಿತ್ರ ಪ್ರಿಮಿಯರ್ ಶೋ ಉಚಿತ ಪ್ರದರ್ಶನ ಹಾಗೂ ಕನಕ ನೌಕರರ ಸಂಘದ 2024ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಮಾನವರೆಲ್ಲರೂ ಒಂದೇ ಜಾತಿ ಎಂಬ ಸಂದೇಶವನ್ನು ನೀಡಿದ್ದ ಕನಕದಾಸರು 16ನೇ ಶತಮಾನದಲ್ಲಿಯೇ ಜನರಲ್ಲಿ ಜಾಗೃತಿ ಮೂಡಿಸಿದ್ದರು. ಅವರ ಜೀವನಾಧಾರಿತ ಕನಕಮಾರ್ಗ ಚಿತ್ರವನ್ನು ಅಚ್ಚುಕಟ್ಟಾಗಿ ನಿರ್ಮಾಣ ಮಾಡಲಾಗಿದ್ದು, ಇದೊಂದು ಸಾಮಾಜಿಕ ಸಂದೇಶ ಸಾರುವ ಅತ್ಯುತ್ತಮ ಮಕ್ಕಳ ಸಿನಿಮಾ. ತಾಲೂಕಿನ ಸಂಘ ಸಂಸ್ಥೆಗಳು ಸಿನಿಮಾ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟಿ ರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಸಾನ್ನಿಧ್ಯ ವಹಿಸಿದ್ದ ಈಶ್ವರಾನಂದ ಪುರಿ ಸ್ವಾಮೀಜಿ ಮಾತನಾಡಿ, ಇತ್ತೀಚಿನ ಸಿನಿಮಾಗಳು ಪ್ರೀತಿ, ಪ್ರೇಮದ ಹೆಸರಿನಲ್ಲಿ ಮನುಷ್ಯನ ಮನಸನ್ನು ವಿಕೃತಗೊಳಿಸುತ್ತಿವೆ. ಮನುಷ್ಯರಲ್ಲಿ ಮನುಷ್ಯತ್ವ, ಸಾಮಾಜಿಕ ಚಿಂತನೆ, ಸಂಸ್ಕಾರದ ನೀಡುವಂತಹ ಚಿತ್ರಗಳು ಇಂದಿನ ಮಕ್ಕಳಿಗೆ ಅಗತ್ಯವಾಗಿವೆ. ಸಾಮಾಜಿಕ ಚಿತ್ರಗಳನ್ನು ಜನರು ದುಡ್ಡು ಕೊಟ್ಟು ನೋಡುವುದು ಕಡಿಮೆ. ಸಂಘ-ಸಂಸ್ಥೆಗಳು ಇಂತಹ ಸಿನಿಮಾಗಳನ್ನು ಶಾಲಾ ಹಂತದಲ್ಲಿ ಮಕ್ಕಳಿಗೆ ಪ್ರದರ್ಶನ ಮಾಡುವ ಮೂಲಕ ಮಕ್ಕಳ ಮನಸ್ಸನ್ನು ಜಾಗ್ರತಗೊಳಿಸಿ, ಸಂಸ್ಕಾರ ನೀಡಬೇಕು ಎಂದರು.ಡಾ. ಪುರುಷೋತ್ತಮಾನಂದ ಪುರಿ ಸ್ವಾಮೀಜಿ, ಶಾಂತವೀರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕನಕಮಾರ್ಗ ಚಲನಚಿತ್ರದ ನಿರ್ದೇಶಕ ವಿಶಾಲ್ ರಾಜ್, ಚಿತ್ರನಟ ಜಿಮ್ ರವಿ, ಸಾಹಿತಿ ಮಾಗೋದಿ ಮಂಜಣ್ಣ ಮಾತನಾಡಿದರು. ಕಾರ್ಯಕ್ರಮದಲ್ಲಿ ತಾಲೂಕು ಕುರುಬ ಸಂಘದ ಅಧ್ಯಕ್ಷ ಮಂಜುನಾಥ್, ಕನಕ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಡಾ. ಹನುಮಂತಪ್ಪ, ಕನಕ ವಿದ್ಯಾಸಂಸ್ಥೆ ಅಧ್ಯಕ್ಷ ಡಾ.ಎಂ.ಎಚ್. ಕೃಷ್ಣಮೂರ್ತಿ, ಟಿಎಪಿಸಿಎಂಎಸ್ ಅಧ್ಯಕ್ಷ ಕಾರೇಹಳ್ಳಿ ಬಸವರಾಜ್, ಪುರಸಭೆ ಮಾಜಿ ಸದಸ್ಯ ವೆಂಕಟೇಶ್ ದಳವಾಯಿ, ಜಿಪಂ ಮಾಜಿ ಸದಸ್ಯ ಡಾ. ಕೆ.ಅನಂತ್, ಭಾರತ ಸೇವಾದಳ ಅಧ್ಯಕ್ಷ ಎಂ.ಆರ್.ಸಿ.ಮೂರ್ತಿ, ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಮಹಾಂತೇಶ್, ಕನಕ ನೌಕರರ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಶಾಂತಕುಮಾರ್, ಮಾಜಿ ಅಧ್ಯಕ್ಷ ಶಶಿಧರ್, ಪ್ರಧಾನ ಕಾರ್ಯದರ್ಶಿ ಶ್ರೀಧರ್ ಮೂರ್ತಿ, ಸಂಘದ ಪದಾಧಿಕಾರಿಗಳು ಮತ್ತಿತರಿದ್ದರು.