ಗುಬ್ಬಿ : ಹಳೇ ವೈಷಮ್ಯದಿಂದ ಸ್ಕಾರ್ಪಿಯೋ ಕಾರು ಬೈಕ್‌ಗೆ ಗುದ್ದಿ ಹಲ್ಲೆ- ಯುವಕ ಪಾರು

| Published : Aug 23 2024, 01:20 AM IST / Updated: Aug 23 2024, 09:49 AM IST

ಗುಬ್ಬಿ : ಹಳೇ ವೈಷಮ್ಯದಿಂದ ಸ್ಕಾರ್ಪಿಯೋ ಕಾರು ಬೈಕ್‌ಗೆ ಗುದ್ದಿ ಹಲ್ಲೆ- ಯುವಕ ಪಾರು
Share this Article
  • FB
  • TW
  • Linkdin
  • Email

ಸಾರಾಂಶ

ಹಳೇ ವೈಷಮ್ಯದಿಂದ ಸ್ಕಾರ್ಪಿಯೋ ಕಾರು ಬೈಕ್‌ಗೆ ಗುದ್ದಿ ಹಲ್ಲೆ ಮಾಡಲು ಮುಂದಾಗ ಘಟನೆ ಪಟ್ಟಣದಲ್ಲಿ ಗುರುವಾರ ನಡೆದಿದೆ.

 ಗುಬ್ಬಿ :  ಹಳೇ ವೈಷಮ್ಯದಿಂದ ಸ್ಕಾರ್ಪಿಯೋ ಕಾರು ಬೈಕ್‌ಗೆ ಗುದ್ದಿ ಹಲ್ಲೆ ಮಾಡಲು ಮುಂದಾಗ ಘಟನೆ ಪಟ್ಟಣದಲ್ಲಿ ಗುರುವಾರ ನಡೆದಿದೆ.

ಕಳೆದೆರಡು ವರ್ಷದ ಹಿಂದೆ ಜಿ.ಸಿ.ನರಸಿಂಹಮೂರ್ತಿ ಹತ್ಯೆಗೆ ಒಳಗಾಗಿದ್ದು, ಅವರ ಪುತ್ರ ಜಿ.ಎನ್.ಮನೋಜ್ (29) ಹಲ್ಲೆಗೆ ಒಳಗಾಗಿ ಪಾರಾದ ಯುವಕ.

ಪಟ್ಟಣದ ಪಂಚಮುಖಿ ಆಂಜನೇಯ ದೇವಸ್ಥಾನ ಸಮೀಪದಲ್ಲಿ ವಾಸವಿದ್ದ ಮನೆಯಿಂದ ಡಿಯೊ ಬೈಕ್‌ನಲ್ಲಿ ಬಸ್ ನಿಲ್ದಾಣದತ್ತ ತೆರಳುತ್ತಿದ್ದ ಯುವಕ ಮನೋಜ್ ಮೇಲೆ ಮೊದಲೇ ಹಳೇ ಕೆಇಬಿ ಕಟ್ಟಡ ಮುಂಭಾಗ ರಸ್ತೆಯಲ್ಲಿ ನಿಂತಿದ್ದ ಸ್ಕಾರ್ಪಿಯೋ ಕಾರು ಎರಗಿತು. ಮನೋಜ್ ಬೈಕ್ ಹಿಂಬಾಲಿಸಿ ಬೈಕ್‌ಗೆ ಗುದ್ದಿದರು. ದಾಳಿ ಮಾಡುವ ಸಂಚು ಅರಿತ ಯುವಕ ಮನೋಜ್ ಸ್ಥಳದಿಂದ ಓಡಿ ಮಾರುತಿನಗರ ಬಡಾವಣೆಯ ಸಹೋದರನ ಮನೆಯಲ್ಲಿ ಆಶ್ರಯ ಪಡೆದು ಅಪಾಯದಿಂದ ಪಾರಾದರು.

ಬೈಕ್‌ಗೆ ಗುದ್ದಿದ ನಂತರ ಓಡಿಹೋದ ಮನೋಜ್ ಯುವಕನ ಬೆನ್ನತ್ತಿದ ಕಾರು ಆಶ್ರಯ ಪಡೆದ ಮನೆಯ ಮುಂದೆ ನಿಂತು ದಾಳಿ ಮಾಡುವ ಸಂಚು ರೂಪಿಸಿದ್ದರು. ಕೂಡಲೇ ಮನೆಯಲ್ಲಿದ್ದವರು ಕೂಗಾಡಿದ ಕ್ಷಣಾರ್ಧದಲ್ಲಿ ಕಾರು ಬಂದ ವೇಗದಲ್ಲೇ ವಾಪಸಾಗಿದೆ. ಗುಬ್ಬಿ ಪೊಲೀಸ್ ಠಾಣೆಗೆ ಮನೋಜ್‌ ದೂರು ನೀಡಿದ್ದಾರೆ.

ಈ ಹಿಂದೆ ನನ್ನ ತಂದೆ ನರಸಿಂಹಮೂರ್ತಿ ಅವರ ಕೊಲೆ ನಡೆದಿತ್ತು. ಈಗ ಕಾರಿನಲ್ಲಿ ಅಟ್ಯಾಕ್ ಮಾಡಿರುವ ರೀತಿ ನನ್ನ ಕೊಲೆ ಸಂಚು ರೂಪಿಸಿರುವ ಸಾಧ್ಯತೆ ಇದೆ. ಕೂಡಲೇ ದುಷ್ಕರ್ಮಿಗಳ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಮನೋಜ್‌ ದೂರಿನಲ್ಲಿ ಹೇಳಿದ್ದಾರೆ. ಸ್ಥಳಕ್ಕೆ ಧಾವಿಸಿದ ಅಪರ ಜಿಲ್ಲಾ ವರಿಷ್ಠಾಧಿಕಾರಿ ಮರಿಯಪ್ಪ, ಸಿಪಿಐ ಗೋಪಿನಾಥ್ ಸ್ಥಳ ಪರಿಶೀಲನೆ ನಡೆಸಿದರು. ತಂಡವೊಂದನ್ನು ರಚಿಸಿ ಸಿಸಿ ಕ್ಯಾಮೆರಾ ದೃಶ್ಯಾವಳಿಗಳ ಆಧರಿಸಿ ತನಿಖೆ ನಡೆಸಿದ್ದಾರೆ.