ಸಿಟಿಜನ್ ಉಪ್ಪಳ, ಅಶೋಕ ಎಫ್.ಸಿ ಮೈಸೂರು ತಂಡ ಮುಂದಿನ ಸುತ್ತಿಗೆ

| Published : May 21 2025, 12:10 AM IST

ಸಿಟಿಜನ್ ಉಪ್ಪಳ, ಅಶೋಕ ಎಫ್.ಸಿ ಮೈಸೂರು ತಂಡ ಮುಂದಿನ ಸುತ್ತಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಮಂಗಳವಾರ ನಡೆದ ಪಂದ್ಯಾವಳಿಯಲ್ಲಿ ಸಿಟಿಜನ್‌ ಉಪ್ಪಳ ಹಾಗೂ ಅಶೋಕ್‌ ಎಫ್‌ ಸಿ ಮೈಸೂರು ತಂಡಗಳು ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಡಿ.ಶಿವಪ್ಪ ಸ್ಮಾರಕ 26ನೇ ವರ್ಷದ ರಾಜ್ಯ ಮಟ್ಟದ ಗೋಲ್ಡ್ ಕಪ್ ಫುಟ್‌ಬಾಲ್ ಟೂರ್ನಿಯ 5ನೇ ದಿನವಾದ ಮಂಗಳವಾರ ನಡೆದ ಪಂದ್ಯಾವಳಿಯಲ್ಲಿ ಸಿಟಿಜನ್ ಉಪ್ಪಳ ಹಾಗೂ ಅಶೋಕ ಎಫ್.ಸಿ ಮೈಸೂರು ತಂಡಗಳು ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು.

ಜಿಯಂಪಿ ಶಾಲಾ ಮೈದಾನದಲ್ಲಿ ಬ್ಲೂಬಾಯ್ಸ್ ಯೂತ್ ಕ್ಲಬ್ ವತಿಯಿಂದ 39ನೇ ವರ್ಷದ ಆಯೋಜಿಸಲಾಗಿರುವ ಫುಟ್ಬಾಲ್ ಮೊದಲನೇ ಪಂದ್ಯಾವಳಿಯು ನೇತಾಜಿ ಎಫ್.ಸಿ ಮಂಡ್ಯ ಹಾಗೂ ಸಿಟಿಜನ್ ಉಪ್ಪಳ ತಂಡಗಳ ನಡುವೆ ನಡೆಯಬೇಕಿದ್ದ ಪಂದ್ಯಾವಳಿಯಲ್ಲಿ ನೇತಾಜಿ ಎಫ್.ಸಿ ಮಂಡ್ಯ ತಂಡವು ಬಾರದೆ ವಾಕ್‌ ಓವರ್ ಹಿನ್ನಲೆಯಲ್ಲಿ ಸಿಟಿಜನ್ ಉಪ್ಪಳ ತಂಡ ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು. ದ್ವಿತೀಯ ಪಂದ್ಯಾವಳಿಯು ಅಶೋಕ ಎಫ್.ಸಿ ಮೈಸೂರು ಹಾಗೂ ಪೈಟರ್ಸ್‌ ಎಫ್.ಸಿ. ಕುತೂಪರಂಬು ತಂಡಗಳ ನಡುವೆ ನಡೆದು ಪ್ರಥಮಾರ್ಧದಲ್ಲಿ ಪೈಟರ್ಸ್‌ ಎಫ್.ಸಿ. ಕುತೂಪರಂಬು ತಂಡದ ಆಟಗಾರ 2ನೇ ನಿಮೀಷದಲ್ಲಿ ಶಬೀಬ್ ಅವರು ಎಸಗಿದ ತಪ್ಪಿನಿಂದ ಸ್ವಯಂ ಗೋಲುಗಳಿಸುವುದರೊಂದಿಗೆ ಎದುರಾಳಿ ಮೈಸೂರು ತಂಡಕ್ಕೆ ಮುನ್ನಡೆ ಸುಲಭವಾಗಿ ದೊರೆಯಿತು.

ದ್ವಿತೀಯಾರ್ಧದಲ್ಲಿ ಮೈಸೂರು ಅಶೋಕ ತಂಡದ ಮುನ್ನಡೆ ಆಟಗಾರ ಭಗತ್10 ನೇ ನಿಮಿಷದಲ್ಲಿ ಮತ್ತೊಂದು ಗೋಲು ಬಾರಿಸುವ ಮೂಲಕ ತಂಡಕ್ಕೆ ಮತ್ತಷ್ಟು ಮುನ್ನಡೆಯನ್ನು ಒದಗಿಸಿದರು. ಪೈಟರ್ಸ್‌ ಎಫ್.ಸಿ. ಕುತೂಪರಂಬು ತಂಡದ ಆಟಗಾರರು ಬಿರುಸಿನ ಆಟಕ್ಕೆ ಇಳಿದು 13ನೇ ನಿಮಿಷದಲ್ಲಿ ಸಿಯಾಬ್ 1 ಗೋಲುಗಳಿಸುವ ಮೂಲಕ ತಂಡದ ಮೇಲಿರುವ ಗೋಲಿನ ಅಂತರವನ್ನು ಕಡಿಮೆಗೊಳಿಸಿದರು. ಎದುರಾಳಿ ತಂಡವು ಮತ್ತೊಂದು ಗೋಲು ಬಾರಿಸಿದಂತೆ ಉತ್ತಮವಾದ ಆಟವನ್ನು ಪ್ರದರ್ಶಿಸುವ ಮೂಲಕ ಪೈಟರ್ಸ್‌ ಎಫ್.ಸಿ. ಕುತೂಪರಂಬು ತಂಡವನ್ನು 2-1 ಗೋಲುಗಳಿಂದ ಸೋಲಿಸುವ ಮೂಲಕ ಮೈಸೂರು ಆಶೋಕ ತಂಡವು ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು. ಇದೇ ಸಂದರ್ಭ ಸಿಟಿಜನ್ ಉಪ್ಪಳ ತಂಡದ ವ್ಯವಸ್ಥಾಪಕರಾದ ಆಶ್ರಫ್ ಅವರು ಕಳೆದ 27 ವರ್ಷಗಳಿಂದ ತಂಡವನ್ನು ಕರೆತರುತ್ತಿದ್ದು ಅವರ ಕ್ರೀಡಾ ಪ್ರೇಮವನ್ನು ಸ್ಮರಿಸಿ ಬ್ಲೂಬಾಯ್ಸ್ ಯೂತ್ ಕ್ಲಬ್ ವತಿಯಿಂದ ಕರ್ನಾಟಕ ರಾಜ್ಯ ಭ್ರಷ್ಟಚಾರ ನಿಗ್ರಹ ದಳದ ನಿರ್ದೇಶಕ ಶ್ರೀರಾಮ್ ಸನ್ಮಾನಿಸಿದರು. ಅಧ್ಯಕ್ಷ ಆಲಿಕುಟ್ಟಿ, ಗೌರವಾಧ್ಯಕ್ಷ ಟಿ.ಯು.ಪ್ರಸನ್ನ, ಟಿ.ಯು.ಜಾನ್, ವಾಸು, ಶಶಿಕುಮಾರ್ ರೈ, ಪಂಚಾಯಿತಿ ಸದಸ್ಯರಾದ ಪ್ರಸಾದ್ ಕುಟ್ಟಪ್ಪ, ರಪೀಕ್‌ಖಾನ್ ಸೇರಿದಂತೆ ಮತ್ತಿತರರು ಇದ್ದರು. -------------------------------ಇಂದಿನ ಪಂದ್ಯಾವಳಿಗಳುಮೊದಲ ಪಂದ್ಯ 3 ಗಂ.ಟಿಡಿಎಲ್ ಎಫ್.ಸಿ ಬೈಲುಕೊಪ್ಪ v/s ವಿಜಯನಗರ ಮೈಸೂರು

ದ್ವಿತೀಯ ಪಂದ್ಯಾವಳಿ 4.30 ಗಂ. ಬೆಟ್ಟಗೇರಿ ಎಫ್.ಸಿ ಸುಂಟಿಕೊಪ್ಪ v/s ಸಿಟಿಜನ್ ಉಪ್ಪಳ

--------------------------------------------