ಇಂದಿರಾ ಕ್ಯಾಂಟೀನ್ ಗೆ ಯುಪಿಎಸ್ ಅಳವಡಿಸಲುನಾಗರಿಕರ ಒತ್ತಾಯ

| Published : Sep 12 2025, 01:00 AM IST

ಸಾರಾಂಶ

ವಿಜಯಪುರ: ಪಟ್ಟಣದಲ್ಲಿ ಕೂಲಿ ಕಾರ್ಮಿಕರು, ಜನಸಾಮಾನ್ಯರ ಹಸಿವು ನೀಗಿಸುವುದಕ್ಕಾಗಿ ತೆರೆದಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ರಾತ್ರಿ ವೇಳೆ ಕರೆಂಟು ಇಲ್ಲದಿದ್ದರೆ, ಮೊಬೈಲ್ ಟಾರ್ಚ್‌ಗಳನ್ನು ಇಟ್ಟುಕೊಂಡು ಊಟ ಮಾಡಬೇಕಾದಂತಹ ಸ್ಥಿತಿ ನಿರ್ಮಾಣವಾಗಿದ್ದು, ಯುಪಿಎಸ್ ಅಳವಡಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವಿಜಯಪುರ: ಪಟ್ಟಣದಲ್ಲಿ ಕೂಲಿ ಕಾರ್ಮಿಕರು, ಜನಸಾಮಾನ್ಯರ ಹಸಿವು ನೀಗಿಸುವುದಕ್ಕಾಗಿ ತೆರೆದಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ರಾತ್ರಿ ವೇಳೆ ಕರೆಂಟು ಇಲ್ಲದಿದ್ದರೆ, ಮೊಬೈಲ್ ಟಾರ್ಚ್‌ಗಳನ್ನು ಇಟ್ಟುಕೊಂಡು ಊಟ ಮಾಡಬೇಕಾದಂತಹ ಸ್ಥಿತಿ ನಿರ್ಮಾಣವಾಗಿದ್ದು, ಯುಪಿಎಸ್ ಅಳವಡಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಇಂದಿರಾ ಕ್ಯಾಂಟೀನ್‌ನಲ್ಲಿ ಬೆಳಿಗ್ಗೆ, ಮಧ್ಯಾಹ್ನ, ರಾತ್ರಿ ವೇಳೆ ಇಲ್ಲಿ ಊಟ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ರಾತ್ರಿ ವೇಳೆ ವಿದ್ಯುತ್‌ ಕಟ್ ಆದರೆ, ಊಟ ಮಾಡಲು ಸಮಸ್ಯೆಯಾಗಿದೆ. ಮೊಬೈಲ್ ಟಾರ್ಚ್ ಆನ್ ಮಾಡಿಕೊಂಡು ಊಟ ಮಾಡಬೇಕಿದೆ. ಅಡುಗೆ ಬಡಿಸುವವರಿಗೂ ತುಂಬಾ ಕಷ್ಟವಾಗುತ್ತಿದೆ ಎಂದು ಸ್ಥಳೀಯರು ತಮ್ಮ ಅಳಲು ತೋಡಿಕೊಂಡಿದ್ದಾರೆ. ರಾತ್ರಿ ವೇಳೆ ಇಂದಿರಾ ಕ್ಯಾಂಟೀನ್ ಮುಂಭಾಗದಲ್ಲಿ ಕತ್ತಲು ಆವರಿಸಿಕೊಳ್ಳುತ್ತಿರುವ ಕಾರಣ, ಜನರು ಒಳಗೆ ಬರುವುದಕ್ಕೂ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಕ್ಯಾಂಟೀನ್ ಹೊರಗೆ ಒಂದು ವಿದ್ಯುತ್ ದೀಪ ಅಳವಡಿಸಬೇಕಿದೆ ಎಂದು ಮನವಿ ಮಾಡಿದ್ದಾರೆ.