ಸಾರಾಂಶ
ನ. 30ರ ಸಂಜೆ 6.30ಕ್ಕೆ ಶ್ರೀರಾಮ ದೇವಾಲಯದ ಹಿಂಭಾಗ ಇರುವ ಜಲಪಾತೋತ್ಸವ ವೇದಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ,
ಕನ್ನಡಪ್ರಭ ವಾರ್ತೆ ಕೆ.ಆರ್. ನಗರ
ಜಿಪಂ, ಕನ್ನಡ ಸಂಸ್ಕೃತಿ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆಯ ಆಶ್ರಯದಲ್ಲಿ ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆ ಹೋಬಳಿ ಕೇಂದ್ರದಲ್ಲಿ ನ. 30 ಹಾಗೂ ಡಿ. 1ರಂದು ಎರಡು ದಿನಗಳ ಕಾಲ ಜಲಪಾತೋತ್ಸವ ಕಾರ್ಯಕ್ರಮ ಆಯೋಜಿಸಿದೆ ಎಂದು ಶಾಸಕ ಡಿ. ರವಿಶಂಕರ್ ಹೇಳಿದ್ದಾರೆ.ಎರಡು ದಿನಗಳು ನಡೆಯುವ ಕಾರ್ಯಕ್ರಮಕ್ಕೆ ಕೆ.ಆರ್. ನಗರ ಸಾಲಿಗ್ರಾಮ ಸೇರಿದಂತೆ ಸುತ್ತಮುತ್ತಲಿನ ತಾಲೂಕಿನ ನಾಗರಿಕರು ಭಾಗವಹಿಸಬೇಕು ಎಂದು ಆಹ್ವಾನ ನೀಡಿದ್ದಾರೆ.
ನ. 30ರ ಸಂಜೆ 6.30ಕ್ಕೆ ಶ್ರೀರಾಮ ದೇವಾಲಯದ ಹಿಂಭಾಗ ಇರುವ ಜಲಪಾತೋತ್ಸವ ವೇದಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಘನ ಉಪಸ್ಥಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಮಹಾದೇವಪ್ಪ ಕಾರ್ಯಕ್ರಮ ಉದ್ಘಾಟಿಸುವರು.ಸಚಿವರಾದ ಕೆ. ವೆಂಕಟೇಶ್, ಶಿವರಾಜ ಎಸ್. ತಂಗಡಗಿ, ಶಾಸಕರಾದ ಅನಿಲ್ ಚಿಕ್ಕಮಾದು, ಎ.ಬಿ. ರಮೇಶ್ ಬಂಡಿ ಸಿದ್ದೇಗೌಡ, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಡಾ. ಪುಷ್ಪ ಅಮರ್ ನಾಥ್, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಭಾಗವಹಿಸಲಿದ್ದು, ಶಾಸಕ ಡಿ. ರವಿಶಂಕರ್ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯಅಥಿತಿಗಳಾಗಿ ಸಂಸದರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಸುನಿಲ್ ಬೋಸ್ ಭಾಗವಹಿಸುವರು.
ಅತಿಥಿಗಳಾಗಿ ಶಾಸಕರಾದ ತನ್ವಿರ್ ಸೇಠ್, ಜಿ.ಟಿ. ದೇವೇಗೌಡ, ಜಿ.ಡಿ. ಹರೀಶ್ ಗೌಡ, ದರ್ಶನ್ ದ್ರುವನಾರಾಯಣ, ಕೆ. ಹರೀಶ್ ಗೌಡ, ಟಿ.ಎಸ್. ಶ್ರೀವತ್ಸ, ವಿಧಾನ ಪರಿಷತ್ ಸದಸ್ಯರಾದ ಎಚ್. ವಿಶ್ವನಾಥ್, ಡಾ.ಡಿ. ತಿಮ್ಮಯ್ಯ, ಸಿ.ಎನ್. ಮಂಜೇಗೌಡ, ಮಧು ಜಿ. ಮಾದೇಗೌಡ, ಡಾ.ಎಸ್. ಯತೀಂದ್ರ, ಕೆ. ವಿವೇಕಾನಂದ, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಕಾಡಾ ಅಧ್ಯಕ್ಷ ಮರಿಸ್ವಾಮಿ, ಕುಪ್ಪೆ ಗ್ರಾಪಂ ಅಧ್ಯಕ್ಷೆ ಸವಿತಾ ಶ್ರೀನಿವಾಸ್, ಉಪಾಧ್ಯಕ್ಷೆ ಗೀತಾ ಕಾಂತರಾಜು, ಸ್ಥಳೀಯ ಪ್ರತಿನಿಧಿಗಳು ಭಾಗವಹಿಸುವರು.ಸಂಜೆ 4.30 ರಿಂದ 5ರವರೆಗೆ ಬಸವಯ್ಯ ಮತ್ತು ತಂಡದವರಿಂದ ಜಾನಪದ ಝೇಂಕಾರ, 5 ರಿಂದ 6.30 ರವರೆಗೆ ಡಾ. ರಾಮೇಶ್ವರಪ್ಪ ಮತ್ತು ತಂಡದವರಿಂದ ಕನ್ನಡ ಸಾಹಿತ್ಯ ವೈಭವ, 7.30 ರಿಂದ 9.30ರವರೆಗೆ ರಘು ದೀಕ್ಷಿತ್ ತಂಡದವರಿಂದ ಸಂಗೀತ ಸಂಜೆ ನಡೆಯಲಿದೆ.
ಡಿ. 1 ರಂದು ಭಾನುವಾರ ಸಂಜೆ 4.30 ರಿಂದ 5 ರವರೆಗೆ ರಶ್ಮಿ ಮತ್ತು ತಂಡದವರಿಂದ ಜಾನಪದ ಸಂಗೀತ 5 ರಿಂದ 6.30ರವರೆಗೆ ಯು. ರಾಜೇಶ್ ಪಡಿಯಾರ್ ಹಾಗೂ ರಶ್ಮಿ ಚಿಕ್ಕಮಗಳೂರು ಮತ್ತು ತಂಡದವರಿಂದ ಸಿ. ಅಶ್ವಥ್ ಗೀತೆಗಳ ಗಾಯನ, 6.30 ರಿಂದ 7.30ರವರೆಗೆ ಕಿರುತರೆ ನಟಿಯರಾದ ನಿಮ್ಮಿಕಾ ರತ್ನಾಕರ್ ಪ್ರಿಯಾಂಕ ಮತ್ತು ಡ್ರೀಮ್ಸ್ ಇವೆಂಟ್ಸ್ ಅಂಡ್ ಫ್ಯಾಷನ್ ಬೆಂಗಳೂರು ಅವರಿಂದ ಸ್ಯಾಂಡಲ್ ವುಡ್ ನೈಟ್ಸ್ ಮತ್ತು ರಾತ್ರಿ 7.30 ರಿಂದ 9.30 ರವರೆಗೆ ಖ್ಯಾತ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಮತ್ತು ಹಂಸಿಕಾ ಅಯ್ಯರ್ ತಂಡದವರಿಂದ ಸಂಗೀತ ಸಂಜೆ ಆಯೋಜಿಸಲಾಗಿದೆ ಎಂದು ಶಾಸಕರು ಮಾಹಿತಿ ನೀಡಿದ್ದಾರೆ.;Resize=(128,128))
;Resize=(128,128))