ಕೆಸರು ರಸ್ತೆಯಲ್ಲಿ ನಾಗರಿಕರ ಪರದಾಟ

| Published : Sep 13 2025, 02:04 AM IST

ಸಾರಾಂಶ

ಮೂಡಿಗೆರೆ ರಸ್ತೆಯ ಪಕ್ಕ ಹೊಸದಾಗಿ ನಿರ್ಮಾಣ ಮಾಡುತ್ತಿರುವ ರೈಲ್ವೆ ಟ್ರ್ಯಾಕ್ ಪಕ್ಕದಲ್ಲಿ ಬಡಾವಣೆಯಿದ್ದು ಕಳೆದ ಎರಡು ವರ್ಷಗಳಿಂದ ಮಳೆಗಾಲದಲ್ಲಿ ಈ ರಸ್ತೆ ಅವ್ಯವಸ್ಥೆಯಿಂದ ಕೂಡಿರುತ್ತದೆ. ಕಳೆದ ಮೂರು ನಾಲ್ಕು ತಿಂಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ವಾಹನ ಸವಾರರು ಹಾಗೂ ಸಾರ್ವಜನಿಕರು ಓಡಾಡದಂತಾಗಿದೆ. ಸ್ಕೂಟರ್ ಸವಾರರು ಗುಂಡಿ ತಪ್ಪಿಸಲು ಹೋಗಿ ಜಾರಿ ಬಿದ್ದ ಪ್ರಕರಣಗಳು ನಡೆದಿವೆ. ಶಾಲಾ ಮಕ್ಕಳು ವಯೋವೃದ್ಧರು ಈ ರಸ್ತೆಯಲ್ಲಿ ತಿರುಗಾಡಲು ಕಷ್ಟವಾಗಿದೆ.

ಕನ್ನಡಪ್ರಭ ವಾರ್ತೆ ಬೇಲೂರುಪಟ್ಟಣದ ಹೇಮಾವತಿ ಮಂಜುನಾಥ್ ಬಡಾವಣೆಯ ಮೊದಲನೇ ಅಡ್ಡ ರಸ್ತೆ ಕೆಸರುಗದ್ದೆಯಾಗಿ ಮಾರ್ಪಟ್ಟಿದ್ದು ನಾಗರಿಕರು ನಡೆದಾಡಲು ಹರಸಾಹಸ ಪಡುವಂತಾಗಿದೆ.

ಮೂಡಿಗೆರೆ ರಸ್ತೆಯ ಪಕ್ಕ ಹೊಸದಾಗಿ ನಿರ್ಮಾಣ ಮಾಡುತ್ತಿರುವ ರೈಲ್ವೆ ಟ್ರ್ಯಾಕ್ ಪಕ್ಕದಲ್ಲಿ ಬಡಾವಣೆಯಿದ್ದು ಕಳೆದ ಎರಡು ವರ್ಷಗಳಿಂದ ಮಳೆಗಾಲದಲ್ಲಿ ಈ ರಸ್ತೆ ಅವ್ಯವಸ್ಥೆಯಿಂದ ಕೂಡಿರುತ್ತದೆ. ಕಳೆದ ಮೂರು ನಾಲ್ಕು ತಿಂಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ವಾಹನ ಸವಾರರು ಹಾಗೂ ಸಾರ್ವಜನಿಕರು ಓಡಾಡದಂತಾಗಿದೆ. ಸ್ಕೂಟರ್ ಸವಾರರು ಗುಂಡಿ ತಪ್ಪಿಸಲು ಹೋಗಿ ಜಾರಿ ಬಿದ್ದ ಪ್ರಕರಣಗಳು ನಡೆದಿವೆ. ಶಾಲಾ ಮಕ್ಕಳು ವಯೋವೃದ್ಧರು ಈ ರಸ್ತೆಯಲ್ಲಿ ತಿರುಗಾಡಲು ಕಷ್ಟವಾಗಿದೆ.

ಈಗಲಾದರೂ ಪುರಸಭೆಯವರು ಎಚ್ಚೆತ್ತು ತಾತ್ಕಾಲಿಕವಾಗಿ ನಡೆದಾಡಲು ರಸ್ತೆ ದುರಸ್ತಿ ಕಾರ್ಯಕ್ಕೆ ಮುಂದಾಗಬೇಕೆಂದು ಬಡಾವಣೆಯ ನಿವಾಸಿಗಳು ಒತ್ತಾಯಿಸಿದ್ದಾರೆ.