ಸಾರಾಂಶ
ಸಿಐಟಿಯು ಆರನೇ ಕೊಡಗು ಜಿಲ್ಲಾ ಸಮ್ಮೇಳನದ ಎರಡನೇ ದಿನ ಪ್ರತಿನಿಧಿಗಳು ಕುಶಾಲನಗರ ಪಟ್ಟಣದಲ್ಲಿ ಮೆರವಣಿಗೆ ನಡೆಸಿದರು.
ಕನ್ನಡಪ್ರಭ ವಾರ್ತೆ ಕುಶಾಲನಗರ ಸಿ ಐ ಟಿ ಯು ಆರನೇ ಕೊಡಗು ಜಿಲ್ಲಾ ಸಮ್ಮೇಳನದ ಎರಡನೇ ದಿನ ಪ್ರತಿನಿಧಿಗಳು ಕುಶಾಲನಗರ ಪಟ್ಟಣದಲ್ಲಿ ಮೆರವಣಿಗೆ ನಡೆಸಿದರು. ಚಂಡೆ ವಾದ್ಯಗಳೊಂದಿಗೆ ಬೈಚನಹಳ್ಳಿ ಮಾರಿಯಮ್ಮ ದೇವಾಲಯದಿಂದ ಹೊರಟ ಬೃಹತ್ ಮೆರವಣಿಗೆ ಪಟ್ಟಣದ ಮುಖ್ಯ ರಸ್ತೆಯಲ್ಲಿ ಸಾಗಿ ಕುಶಾಲನಗರ ಕಾರು ನಿಲ್ದಾಣದಲ್ಲಿ ಮುಕ್ತಾಯಗೊಂಡಿತು. ಮೆರವಣಿಗೆಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷರಾದ ಪಿ ಆರ್ ಭರತ್ ಸೇರಿದಂತೆ ಪ್ರಮುಖರು ಇದ್ದರು. ನಂತರ ಕುಶಾಲನಗರ ಕಾರು ನಿಲ್ದಾಣ ಆವರಣದಲ್ಲಿ ಸಮಾರೋಪ ಸಮಾರಂಭ ನಡೆಯಿತು.
;Resize=(128,128))
;Resize=(128,128))
;Resize=(128,128))
;Resize=(128,128))