ಸಾರಾಂಶ
ಮೋದಿ ಸರ್ಕಾರದಿಂದ ಬಂಡವಾಳ ಶಾಹಿಗಳ ಪರ ಯೋಜನೆಗಳ ಜಾರಿಗೊಳಿಸಿ ಕಾರ್ಪೊರೇಟ್ ಸಂಸ್ಥೆಗಳ ಕೈಗೊಂಬೆಯಾಗಿದೆ. ರಾಮಂದಿರ ಸ್ಥಾಪನೆ ಮಾಡಿದರೆ ಸಾಲದು ಬಡವರ ಅಭಿವೃದ್ಧಿಗೆ ಪೂರಕವಾದ ಅಂಶಗಳನ್ನು ಜಾರಿ ಮಾಡಬೇಕು
ಕನ್ನಡಪ್ರಭ ವಾರ್ತೆ ಕೋಲಾರ
ಕಾರ್ಮಿಕರಿಗೆ ಕನಿಷ್ಠ ವೇತನ, ಬೆಲೆಯೇರಿಕೆ, ಕಾರ್ಮಿಕರ ಹಕ್ಕುಗಳಿಗೆ, ಸಂವಿಧಾನದ ಉಳಿಗಾಗಿ ಹಾಗೂ ಕಾರ್ಮಿಕ ವಿರೋಧಿ ಕಾನೂನುಗಳ ವಾಪಸಾತಿಗೆ ಆಗ್ರಹಿಸಿ ನಗರದ ಸಂಸದ ಎಸ್.ಮುನಿಸ್ವಾಮಿ ಕಚೇರಿ ಮುಂದೆ ಸಿಐಟಿಯು ನೇತೃತ್ವದಲ್ಲಿ ಬೃಹತ್ ಧರಣಿ ನಡೆಸಿದರು.ಸಿಐಟಿಯು ಜಿಲ್ಲಾ ಗೌರವ ಅಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ ಮಾತನಾಡಿ, ಕಳೆದ ೧೦ ವರ್ಷದಿಂದ ದೇಶದ ಕಾರ್ಮಿಕ ವರ್ಗ ತೀವ್ರ ಸಂಕಷ್ಟದಲ್ಲಿದ್ದು, ಬದುಕು ಸಾಗಿಸಲು ಹರಸಾಹಸ ಪಡುವಂತಾಗಿದೆ, ದೇಶವನ್ನಾಳುವ ಮೋದಿ ಸರಕಾರ ನಿರಂತರವಾಗಿ ಕಾರ್ಪೊರೇಟ್ ಪರ ವರ್ತಿಸುತ್ತಿದೆ. ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ನೀತಿಗಳನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.
ಮುನಿಸ್ವಾಮಿ ಸಾಧನೆ ಶೂನ್ಯಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೋದಿ ಸಸ್ಕಾರವು ಕೇವಲ ಬಂಡವಾಳ ಶಾಹಿಗಳ ಪರವಾದ ಯೋಜನೆಗಳನ್ನು ಜಾರಿ ಮಾಡುವ ಮೂಲಕ ಕಾರ್ಪೊರೇಟ್ ಸಂಸ್ಥೆಗಳ ಕೈಗೊಂಬೆಯಾಗಿದೆ. ರಾಮಂದಿರ ಸ್ಥಾಪನೆ ಮಾಡಿದರೆ ಸಾಲದು ಬಡವರ ದಲಿತರ ಕಾರ್ಮಿಕರ ಅಭಿವೃದ್ಧಿಗೆ ಪೂರಕವಾದ ಅಂಶಗಳನ್ನು ಜಾರಿ ಮಾಡಬೇಕು, ಸಂಸದ ಮುನಿಸ್ವಾಮಿ ಸಾಧನೆ ಶೂನ್ಯ ಕೇವಲ ಮತಗಳಿಗಾಗಿ ಅಧಿಕಾರಕ್ಕಾಗಿ ಕೋಮುವಾದ ಸೃಷ್ಟಿಸಿ ಭಯದ ವಾತಾವರಣ ಉಂಟು ಮಾಡಿದ್ದಾರೆ ಎಂದು ಆರೋಪಿಸಿದರು.
ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಪಿ. ಶ್ರೀನಿವಾಸ್, ಜಿಲ್ಲಾ ಖಜಾಂಚಿ ಎಚ್.ಬಿ. ಕೃಷ್ಣಪ್ಪ, ಜಿಲ್ಲಾಧ್ಯಕ್ಷ ಅಮರನಾರಾಯಣಪ್ಪ, ಪ್ರಧಾನ ಕಾರ್ಯದರ್ಶಿ ಎಂ. ವಿಜಯಕೃಷ್ಣ, ಮುಖಂಡರಾದ ಎಂ. ಭೀಮರಾಜ್, ಆಶಾ, ಕೆ.ಮಂಜುನಾಥ್, ಕೇಶವರಾವ್, ತಿರುಪತಿ, ಎಲ್‌ಐಸಿ ಜಯರಾಂ, ತಂಗರಾಜ್, ಲಿಯೋ, ಇದ್ದರು.